Advertisement

ಫ್ಲೈಓವರ್‌ ತುರ್ತು ಕಾಮಗಾರಿಗೆ ಸಚಿವ ಗಡ್ಕರಿಗೆ ನಳಿನ್ ಕುಮಾರ್ ಮನವಿ

03:35 AM Jul 26, 2018 | Team Udayavani |

ಮಂಗಳೂರು: ನಗರದ ಪಂಪ್‌ವೆಲ್‌ ಹಾಗೂ ತೊಕ್ಕೊಟ್ಟು  ಫ್ಲೈಓವರ್‌ ಕಾಮಗಾರಿಯನ್ನು ಅತ್ಯಂತ ತುರ್ತಾಗಿ ಪೂರ್ಣಗೊಳಿಸುವ ಸಂಬಂಧ ಗುತ್ತಿಗೆದಾರ ಸಂಸ್ಥೆ ನವಯುಗದ ಜತೆ ಸಭೆ ನಡೆಸಿ ಸ್ಪಷ್ಟ ನಿರ್ದೇಶನ ನೀಡಬೇಕು ಹಾಗೂ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್‌ ಸಂಗ್ರಹವನ್ನು ಸ್ಥಗಿತಗೊಳಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಬುಧವಾರ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ನಳಿನ್‌ ಅವರು, ಮಂಗಳೂರಿನಲ್ಲಿ ಎರಡು ಫ್ಲೈಓವರ್‌ ಕಾಮಗಾರಿ ನಿಧಾನವಾಗಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಈ ಬಗ್ಗೆ ಸಂಬಂಧಪಟ್ಟ ಸಂಸ್ಥೆಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಕುಳಾಯಿಯಲ್ಲಿ ನೂತನ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಇದರ ಶಿಲಾನ್ಯಾಸಕ್ಕೆ ಆಗಮಿಸುವಂತೆ ಸಚಿವರನ್ನು ವಿನಂತಿಸಿಕೊಂಡರು. ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next