Advertisement

ಯಡಿಯೂರಪ್ಪ ಕೃಷ್ಣನಂತೆ ಬೊಮ್ಮಾಯಿ ಅರ್ಜುನನಂತೆ; ಯಾತ್ರೆ ಶುರುವಾಗಿದೆ: ನಳಿನ್ ಕಟೀಲ್

04:12 PM Sep 10, 2022 | Team Udayavani |

ದೊಡ್ಡಬಳ್ಳಾಪುರ: ಇವತ್ತು ಪಾಂಚಜನ್ಯ ಹೊರಟಿದೆ. ಯಡಿಯೂರಪ್ಪ ಕೃಷ್ಣನಂತೆ ಬೊಮ್ಮಾಯಿ ಅರ್ಜುನನಂತೆ ಯಾತ್ರೆ ಶುರುವಾಗಿದೆ. ದೊಡ್ಡಬಳ್ಳಾಪುರದಲ್ಲಿ ಕೇಸರಿಯ ಸುನಾಮಿ ಬಂದಿದೆ. ಇದರಿಂದ ಕಾಂಗ್ರೆಸ್ ಕೊಚ್ಚಿ ಹೋಗಿದೆ. ಮತ್ತೆ ಕಮಲ ಅರಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

Advertisement

ಬಿಜೆಪಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಭಾರತ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಅವರು ಎಲ್ಲಿ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್ ಮುಕ್ತವಾಗುತ್ತದೆ. ಮುಂದಿನ ಬಾರಿ ಇಡಿ ಭಾರತ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಅವರು ಪ್ರವಾಹಕ್ಕೆ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಿದರು. ಕೋವಿಡ್ ಬಂದಾಗ ಯಡಿಯೂರಪ್ಪ ಅತ್ಯುತ್ತಮ ಕೆಲಸ ಮಾಡಿದ್ದರು. ಈ ದೇಶದಲ್ಲಿ 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ವೆಂಟಿಲೇಟರ್, ಆಸ್ಪತ್ರೆ ಕೊಡದಿರುವುದು ಕಾಂಗ್ರೆಸ್. ಈ ದೇಶದ 130 ಕೋಟಿ ಜನರಿಗೆ ಲಸಿಕೆ ಕೊಟ್ಟಿದ್ದು ಮೋದಿ ಸರ್ಕಾರ. ರೈತರ ಮಕ್ಕಳಿಗೆ ವಿದ್ಯಾನಿಧಿ ಘೊಷಣೆ ಮಾಡಿ ರೈತರ ಮಕ್ಕಳು ಇಂಜನಿಯರ್ ಹಾಗೂ ಡಾಕ್ಟರ್ ಆಗಬೇಕೆಂದು ಬಯಸಿದವರು ಬೊಮ್ಮಾಯಿ ಎಂದರು.

ಇದನ್ನೂ ಓದಿ:ಪುಣ್ಯ ಭೂಮಿಯಲ್ಲಿ ಮತ್ತೆ ಕಮಲ ಅರಳಿಸುವ ಸಂಕಲ್ಪ : ‘ಜನ ಸ್ಪಂದನ’ದಲ್ಲಿ ಸ್ಮೃತಿ ಇರಾನಿ

ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ಇದುವರೆಗೂ ಕೋರ್ಟ್ ನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಾ, ಡಿಕೆಶಿ ಬಾ ಅಂತ ಕರೆಯುತ್ತಾರೆ. ಅರ್ಕಾವತಿ ಹಗರಣ ಹೊರಗೆ ಬಂದರೆ ಸಿದ್ದರಾಮಯ್ಯ ಎಲ್ಲಿರುತ್ತಾರೆ ಎಂದು ನೋಡಿ. ರಾಜ್ಯದಲ್ಲಿ ಅತಿ ಹೆಚ್ಚು ರೈತರು ಸಿದ್ದರಾಮಯ್ಯ ಕಾಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಜಾರಿಗೆ ತಂದಿದ್ದು ಬಿಜೆಪಿ ತಂದಿದೆ. ಅಭಿವೃದ್ಧಿಗೆ ಮೋದಿಯೊಂದೇ ಹೆಸರು ಎಂದರು.

Advertisement

ಬೊಮ್ಮಾಯಿ ಯಡಿಯೂರಪ್ಪ ನೇತೃತ್ವದಲ್ಲಿ ದಿಗ್ವಿಜಯ ಯಾತ್ರೆ ಆರಂಭವಾಗಿದೆ. ಈ ಯಶಸ್ವಿ ಯಾತ್ರೆ ಮುಂದುವರೆಯಲಿದೆ. ಮೂರು ವರ್ಷಗಳ ಕಾಲ ಅಭೂತ ಪೂರ್ವ ಸಾದನೆ ಮಾಡಿದ ಇಬ್ಬರು ಸಿಎಂಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next