Advertisement

ಅಧಿಕಾರಕ್ಕೆ ಬರುವುದೇ ಡೌಟು…ಆದರೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ: ಕಟೀಲ್

09:11 PM Mar 20, 2023 | Team Udayavani |

ಭಟ್ಕಳ : ವಿಜಯ ಸಂಕಲ್ಪ ಯಾತ್ರೆಗೆ ಭಟ್ಕಳದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು.

Advertisement

ಮೂಡು ಭಟ್ಕಳ ಬೈಪಾಸ್‌ನಿಂದ ಹೊರಟ ವಿಜಯಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯ್ಕ, ಶಾಸಕ ಸುನೀಲ ನಾಯ್ಕ, ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಮಂಡಳಾಧ್ಯಕ್ಷ ಸುಬ್ರಾಯ ದೇವಾಡಿಗ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಶಂಶುದ್ದೀನ ವೃತ್ತದಲ್ಲಿ ನಳೀನ್ ಕುಮಾರ್ ಕಟೀಲ್ ಮಾತನಾಡಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿ, ಮೊನ್ನೆ ನಡೆದ ನಾಗಾಲ್ಯಾಂಡ್ ಮತ್ತಿತರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ. ಅಧಿಕಾರದಲ್ಲಿದ್ದಾಗ ಏನೂ ಮಾಡದ ಕಾಂಗ್ರೆಸ್ ಇದೀಗ ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಗ್ಯಾರೆಂಟಿ ಇಲ್ಲ ಎಂದು ಲೇವಡಿ ಮಾಡಿದರು. ಅಧಿಕಾರದಲ್ಲಿದ್ದಾಗಲೇ ಮಹತ್ವದ ಯೋಜನೆಗಳನ್ನು ನೀಡದ ಕಾಂಗ್ರೆಸ್ ಚುನಾವಣೆ ಬಂದಾಗ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯ, ಕೇಂದ್ರ ಸರಕಾರಗಳು ಉತ್ತಮ ಯೋಜನೆ ಕೊಟ್ಟಿದ್ದು, ಜನತೆ ಬಿಜೆಪಿಯನ್ನು ಬೆಂಬಲಿಸಿ ಮತ್ತೆ ಬಹುಮತದಿಂದ ಅಧಿಕಾರಕ್ಕೆ ತರಲಿದ್ದಾರೆಂದರು.

ಜೆ.ಡಿ.ಎಸ್. ಒಂದು ಒಡೆದ ಮನೆಯಾಗಿದ್ದು ಹಾಸನದ ಟಿಕೆಟ್ ಪ್ರಹಸನದಿಂದ ಕುಟುಂಬದ ರಾಜಕಾರಣವೇ ಗೊಂದಲದ ಗೂಡಾಗಿದೆ.

Advertisement

ಕಾಗ್ರೆಸ್‌ನಲ್ಲಿ ಈ ಹಿಂದೆ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಗಿಸಿದ ಸಿದ್ಧರಾಮಯ್ಯ ಈ ಬಾರಿ ಡಿ.ಕೆ.ಸಿ.ಅವರನ್ನು ಮುಗಿಸುತ್ತಾರೆ ಎಂದ ಅವರು ಮಾಜಿ ಮುಖ್ಯ ಮಂತ್ರಿ, ಪಕ್ಷದಲ್ಲಿ ಪ್ರಭಾವ ಹೊಂದಿರುವ ಮುಂದಿನ ಮುಖ್ಯ ಮಂತ್ರಿಯಾಗುವ ಕನಸು ಕಾಣುತ್ತಿರುವವರೇ ಇದ್ದು ಕ್ಷೇತ್ರಕ್ಕಾಗಿ ಪರದಾಡುತ್ತಿರುವಾಗ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಎನು ಎನ್ನುವಂತಾಗಿದೆ. ಕಾಂಗ್ರೆಸ್ ಎಲ್ಲ ನಾಯಕ ಪರಿಸ್ಥಿತಿಯೂ ಕೂಡಾ ಗೆಲ್ಲುವ ಕ್ಷೇತ್ರವನ್ನು ಹುಡುಕುವುದೇ ಆಗಿದೆ ಎಂದು ಈ ಹಿಂದೆ ರಾಹುಲ್ ಗಾಂಧಿ ಕೇರಳದಲ್ಲಿ ಕ್ಷೇತ್ರ ಹುಡುಕಿಕೊಂಡಿದ್ದನ್ನು ಉದಾಹರಿಸಿದರು.

ಕೇವಲ ಪೊಳ್ಳು ಭರವಸೆಯನ್ನು ಕೊಟ್ಟು ಜನರನ್ನು ನಂಬಿಸಲು ಸಾಧ್ಯವಿಲ್ಲ ಎನ್ನುವುದು ಈ ಹಿಂದೆ ಸಾಬೀತಾಗಿದ್ದು ಈ ಬಾರಿಯೂ ಕೂಡಾ ಪೊಳ್ಳು ಭರವಸೆಯನ್ನು ನೀಡಲು ಮುಂದಾಗಿರುವುದು ಪಕ್ಷದ ಅಧೋಗತಿಯೇ ಕಾರಣ ಎಂದರು.

ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ ನಾಯ್ಕ, ಗೋವಿಂದ ನಾಯ್ಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ವಿಜಯ ಸಂಕಲ್ಪ ಯಾತ್ರೆಯಲ್ಲಿ ಬೈಕ್, ಆಟೋ ರಿಕ್ಷಾ ರ‍್ಯಾಲಿ ಗಮನ ಸೆಳೆಯಿತು. ಪಕ್ಷದ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶಿರಾಲಿಯ ವರೆಗೆ ತೆರಳಿ ಯಾತ್ರೆ ಮುಕ್ತಾಯಗೊಂಡಿತು. ನಾಯಕ, ಶಾಸಕ ಸುನಿಲ್ ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಮಂಡಳ ಅಧ್ಯಕ್ಷ ಸುಬ್ರಾಯ ದೇವಡಿಗ, ವಿಜಯ ಸಂಕಲ್ಪ ಯಾತ್ರೆಯ ರಾಜ್ಯ ಸಹ ಸಂಚಾಲಕ ಮಲ್ಲಿಕಾರ್ಜುನ ಬಾಳಿಕಾಯಿ, ವಿಭಾಗ ಸಹ ಪ್ರಭಾರಿ ಎನ್.ಎಸ್.ಹೆಗಡೆ, ಜಿಲ್ಲಾ ಸಹ ಪ್ರಭಾರಿ ಪ್ರಸನ್ನ ಕೆರೆಕೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಲ್ಗೊಂಡಿದ್ದರು. ವಿನೋದ ನಾಯ್ಕ ನಿರೂಪಿಸಿದರು. ಬಿಜೆಪಿ ಮಂಡಳಾಧ್ಯಕ್ಷ ಸುಬ್ರಾಯ ದೇವಡಿಗ ವಂದಿಸಿದರು.

ಇದನ್ನೂ ಓದಿ: 7 ನೂತನ ವಿ.ವಿ.ಗಳಿಗೆ ಕುಲಪತಿಗಳ ನೇಮಕ: ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next