Advertisement

ಸಿದ್ದು ಜಾತಿಗಳ ಮಧ್ಯೆ ಸಂಘರ್ಷ ಹುಟ್ಟು ಹಾಕಿದ ನರಹಂತಕ: ನಳಿನ್‌

10:52 PM Sep 29, 2022 | Team Udayavani |

ರಾಮದುರ್ಗ: ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್‌ ಪಕ್ಷವನ್ನು ಸಿದ್ದರಾಮಯ್ಯ ಕೆಟ್ಟದ್ದಾಗಿ ತೆಗಳಿದ್ದರು. ಕಾಂಗ್ರೆಸ್‌ ಕಾಲಿಗೆ ಬಿದ್ದು ಅಧಿಕಾರ ಪಡೆದು ಪೇಮೆಂಟ್‌ ಸೀಟ್‌ ಮೇಲೆ ಮುಖ್ಯಮಂತ್ರಿ ಯಾಗಿ ಭ್ರಷ್ಟಾಚಾರ ನಡೆಸುವ ಜತೆಗೆ ಜಾತಿ ನಡುವೆ  ಸಂಘರ್ಷ ಹುಟ್ಟು ಹಾಕಿದ ನರಹಂತಕ ಎಂದು ನಳಿನ್‌ಕುಮಾರ್‌ ಹೇಳಿದರು.

Advertisement

ತಾಲೂಕಿನ ಖಾನಪೇಠ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬಿಜೆಪಿ ರಾಮದುರ್ಗ ಮಂಡಲ ನೇತೃತ್ವದಲ್ಲಿ ಗುರುವಾರ ನಡೆದ ಜನಸ್ಪಂದನ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 5 ವರ್ಷಗಳ ಅಧಿಕಾರ ನಡೆಸಿದ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಉದ್ಧಾರಕ ಎಂದು ಪೋಸ್‌ ಕೊಟ್ಟು, ಭ್ರಷ್ಟಾಚಾರದ ಹೊಳೆಯನ್ನೇ ಹರಿಸಿದರು. ಕೈಯಲ್ಲಿ ಕಟ್ಟಿಕೊಂಡ ಕೋಟಿ ರೂಪಾಯಿ ವಾಚ್‌ ಅನ್ನು ಯಾರು ದೇಣಿಗೆ ನೀಡಿದ್ದು ಎಂಬುದನ್ನು ಮರೆತು ಉತ್ತಮ ಆಡಳಿತ ನೀಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಮಾತಾಡುತ್ತಾರೆ. ಮುಸ್ಲಿಮ ರಿಗೂ ಬೇಡವಾಗಿದ್ದ ಟಿಪ್ಪು ಜಯಂತಿ ಮಾಡುವ ಮೂಲಕ ಹಿಂದೂ- ಮುಸ್ಲಿಮರಲ್ಲಿ ಘರ್ಷಣೆ ತಂದಿದ್ದಟ್ಟರೆ, ಒಂದಾಗಿದ್ದ ವೀರಶೈವ ಲಿಂಗಾಯತರಲ್ಲಿ ಪಂಗಡಗಳ ಬೀಜ ಬಿತ್ತಿ ಒಡೆದಾಳುವ ಕೆಲಸ ಮಾಡಿದರು. ಇಂತಹ ವ್ಯಕ್ತಿಗಳಿಗೆ ಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿ ಶಾಶ್ವತ ರಾಜಕೀಯ ಸನ್ಯಾಸತ್ವ ನೀಡಲಿದ್ದಾರೆ ಎಂದರು.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅವಧಿ ಪೂರ್ವಚುನಾವಣೆ ಬರುವುದಿಲ್ಲ. ಐದು ವರ್ಷ ಪೂರ್ಣಗೊಳಿಸುತ್ತೇವೆ. ನಮಗೆ ಚುನಾವಣೆ ಧಾವಂತ ಇಲ್ಲ.ನಳಿನ್‌ಕುಮಾರ್‌  ಕಟೀಲು,  ಬಿಜೆಪಿ ರಾಜ್ಯಾಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next