Advertisement

ಅಂಚೆ ಕಾರ್ಡ್‌ ಮಹಾ ಅಭಿಯಾನ : ಪ್ರಧಾನಿಗೆ ಪತ್ರ ಬರೆದ ನಳಿನ್‌ಕುಮಾರ್‌ ಕಟೀಲ್‌

06:53 PM Oct 04, 2021 | Team Udayavani |

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 20 ವರ್ಷಗಳ ಸೇವೆ ಮತ್ತು ಸಮರ್ಪಣೆಯ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಅವರ ಜನ್ಮದಿನವಾದ ಸೆಪ್ಟೆಂಬರ್‌ 17 ರಿಂದ ಅಕ್ಟೋಬರ್‌ 7ರ ವರೆಗೆ ಪ್ರಧಾನಮಂತ್ರಿಗಳಿಗೆ ಶುಭಾಶಯ, ಅಭಿನಂದನಾ ಪತ್ರ ಬರೆಯುವ ಪೋಸ್ಟ್‌ ಕಾರ್ಡ್‌ ಮಹಾ ಅಭಿಯಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾದರಿ ಎನಿಸಿಕೊಂಡಿದ್ದಾರೆ.

Advertisement

ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಸಾದರ ವಂದನೆಗಳು ಮತ್ತು ಜನುಮದಿನದ ಹಾರ್ಧಿಕ ಶುಭಾಶಯಗಳು. ತಮ್ಮ 20 ವರ್ಷದ ಅಧಿಕಾರಾವಧಿಯಲ್ಲಿ ಶೋಷಿತರ, ಹಿಂದುಳಿದ ವರ್ಗಗಳ, ಬಡವರ ಹಾಗೂ ಸರ್ವ ವರ್ಗದ ಪರ ಯೋಜನೆಗಳು- ಅಭಿವೃದ್ಧಿ ಪರವಾದ ಆಡಳಿತ, ಭ್ರಷ್ಟಾಚಾರರಹಿತ ಅಧಿಕಾರಾವಧಿ, ಅತ್ಯುತ್ತಮ ಆಡಳಿತ- ದಾಖಲೆಯ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ನೀಡುತ್ತಿರುವುದು ಅಭಿನಂದನೀಯ ಎಂದು ನಳಿನ್‌ ಕುಮಾರ್‌ ಕಟೀಲ್‌ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತವನ್ನು ವಿಶ್ವಗುರುವನ್ನಾಗಿಸುವ ತಮ್ಮ ಮಹೋನ್ನತ ಸಂಕಲ್ಪ ಸಾಕಾರಗೊಳಿಸುವಂತಹ ಸೌಭಾಗ, ಆಯುರಾರೋಗ್ಯವನ್ನು ತಾಯಿ ಭಾರತಾಂಬೆ ಕರುಣಿಸಲಿ ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ :12 ವರ್ಷಗಳಿಂದ ಮೃತ ತಾಯಿ ಹೆಸರಲ್ಲಿ ಸಾಲ ಪಡೆದ ಭೂಪ !

Advertisement

Udayavani is now on Telegram. Click here to join our channel and stay updated with the latest news.

Next