Advertisement

ಸಂಸದರಾಗಿ ನಳಿನ್‌ ವೈಫ‌ಲ್ಯಗಳೇ ಅಧಿಕ: ಮಿಥುನ್‌ ರೈ

03:29 AM Mar 29, 2019 | Sriram |

ಮಂಗಳೂರು: ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೇಳಿದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ದ.ಕ. ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಬದಲಾಗಿ ರಾಷ್ಟ್ರೀಯ ಹೆದ್ದಾರಿಯ ನೂರಾರು ಸಮಸ್ಯೆಗಳು ಅಧಿಕಗೊಂಡು ಪಂಪ್‌ವೆಲ್‌ ಪ್ಲೈಓವರ್‌ ಸೇರಿದಂತೆ ಹಲವು ವೈಫಲ್ಯಗಳೇ ಕಾಣಸಿಗುತ್ತಿವೆ ಎಂದು ದ.ಕ. ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಆರೋಪಿಸಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೇಳಿದ್ದೇನು? ಮಾಡಿದ್ದೇನು?
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಮಾತನಾಡಿ, ಬಿಜೆಪಿ ಕಳೆದ ಚುನಾವಣೆಯ ಸಂದರ್ಭ ಹೇಳಿದ್ದೇನು ಮತ್ತು ಮಾಡಿದ್ದೇನು ಎಂಬುದನ್ನು ತಿಳಿಸ
ಬೇಕಾಗಿದೆ. ಐಟಿ ದಾಳಿ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರುಪ ಯೋಗ ಮಾಡುತ್ತಿರುವ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ. “ನಮ್ಮ ಬೂತ್‌, ನಮ್ಮ ಹೊಣೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲರೂ ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್‌ ಪಕ್ಷದಿಂದ ಬಿಲ್ಲವ ಸಮಾಜಕ್ಕೆ ಲೋಕಸಭಾ ಕ್ಷೇತ್ರಕ್ಕೆ 2 ಪ್ರಾತಿನಿಧ್ಯ ನೀಡಿದ್ದು, ಬಿಜೆಪಿ 28 ಕ್ಷೇತ್ರದಲ್ಲಿ ಯಾವುದೇ ಬಿಲ್ಲವ ಅಭ್ಯರ್ಥಿಗೆ ಯಾಕೆ ಪ್ರಾತಿನಿಧ್ಯ ನೀಡಿಲ್ಲ ಎಂಬುದಕ್ಕೆ ಉತ್ತರ ನೀಡಬೇಕಿದೆ ಎಂದರು.

ದ.ಕ ಜಿಲ್ಲಾ ಜಂಟಿ ಚುನಾವಣಾ ಸಮಿತಿ ಅಧ್ಯಕ್ಷ ಬಿ. ರಮಾನಾಥ ರೈ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಂದ ಯಾವುದೇ ಕೆಲಸ ಆಗುತ್ತಿಲ್ಲ. ಹಿಂದಿನ ಶಾಸಕರು ಮಾಡಿದ ಕೆಲಸಗಳನ್ನು ಮಾಡುತ್ತಿದ್ದಾರೆ ಮಾತ್ರ. ದ.ಕ. ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಆಗುವಂತೆ ಕಾರ್ಯಕರ್ತರು ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.

Advertisement

ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ, ಪ್ರಮುಖರಾದ ಕೆ.ಎಸ್‌.ಮಹಮ್ಮದ್‌ ಮಸೂದ್‌, ಅಭಯಚಂದ್ರ ಜೈನ್‌, ಜೆ.ಆರ್‌ ಲೋಬೋ, ಮೊದಿನ್‌ ಬಾವಾ, ಕಣಚೂರು ಮೋನು, ರಾಜಶೇಖರ್‌ ಕೋಟ್ಯಾನ್‌, ಶಾಲೆಟ್‌ಪಿಂಟೋ,ಎಂ.ಎಸ್‌ ಮಹಮ್ಮದ್‌, ಭರತ್‌ ಮುಂಡೋಡಿ, ಕವಿತಾ ಸನಿಲ್‌, ಪುರುಷೋತ್ತಮ ಚಿತ್ರಾಪುರ, ನವೀನ್‌ ಡಿ’ಸೋಜಾ, ಪ್ರಸಾದ್‌ರಾಜ್‌ ಕಾಂಚನ್‌, ಪದ್ಮನಾಭ ನರಿಂಗಾನ, ಸಂತೋಷ್‌ ಕುಮಾರ್‌ ಶೆಟ್ಟಿ, ನೀರಜ್‌ಪಾಲ್‌, ನಝೀರ್‌ ಬಜಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next