Advertisement

ಬೆಂಗಳೂರು ನಗರ-ಕಾರವಾರ ರೈಲು ಸಂಚಾರಕ್ಕೆ ನಳಿನ್‌ ಮನವಿ

12:18 PM Jun 08, 2020 | mahesh |

ಮಂಗಳೂರು: ರದ್ದುಪಡಿಸಿರುವ ಬೆಂಗಳೂರು ನಗರ-ಕಾರವಾರ ವಯಾ ಮೈಸೂರು (ರೈಲು .16523/24)ರೈಲು ಸಂಚಾರವನ್ನು ಮರು ಆರಂಭಿಸಬೇಕು ಹಾಗೂ ಯಶವಂತಪುರ-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ (ನಂ. 16585)ನ ವೇಳಾಪಟ್ಟಿಯನ್ನು ಮರು ಪರಿಷ್ಕರಿಸಬೇಕು ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ನೈಋತ್ವ ರೈಲ್ವೇಯ ಮಹಾಪ್ರಬಂಧಕರನ್ನು ಕೋರಿದ್ದಾರೆ.

Advertisement

ಹೊಸದಾಗಿ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ಆರಂಭಗೊಂಡ ಬಳಿಕ ಬೆಂಗಳೂರು ನಗರ-ಕಾರವಾರ ವಯಾ ಮೈಸೂರು (ನಂ. 16523/24) ರೈಲು ಸಂಚಾರವನ್ನು ರದ್ದುಪಡಿಸಲಾಗಿತ್ತು. ಇದು ಮೈಸೂರು ಭಾಗವನ್ನು ಸಂಪರ್ಕಿಸಲು ಉಡುಪಿ, ಕಾರವಾರ ಭಾಗದ ಜನರಿಗೆ ಏಕಮಾತ್ರ ರೈಲು ಆಗಿತ್ತು. ಇದಲ್ಲದೆ ಮಂಗಳೂರು ಸೆಂಟ್ರಲ್‌ ಹಾಗೂ ಕಾರವಾರದ ಭಾಗ ಪ್ರಯಾಣಿಕರಿಗೂ ಉಪಯುಕ್ತವಾಗಿತ್ತು. ಈ ಹಿನ್ನಲೆಯಲ್ಲಿ ರದ್ದುಗೊಳಿಸಿರುವ ಅದನ್ನು ಮರು ಆರಂಭಿಸಬೇಕು ಎಂಬುದು ಈ ವಲಯದ ಜನರ ಬೇಡಿಕೆಯಾಗಿದೆ ಎಂದವರು ಮಹಾಪ್ರಬಂಧಕರಿಗೆ ಬರೆದಿರುವ ಪತ್ರದಲ್ಲಿ ಗಮನ ಸೆಳೆದಿದ್ದಾರೆ.

ರೈಲು ನಂ.16523/24 ಸಂಚಾರವನ್ನು ಮಡಂಗಾವ್‌ವರೆಗೆ ವಿಸ್ತರಿಸಬಹುದು. ನಂ.16511/12 ಬೆಂಗಳೂರು- ಕಣ್ಣೂರು – ಬೆಂಗಳೂರು ಎಕ್ಸ್‌ಪ್ರೆಸ್‌ ರದ್ದುಪಡಿಸಿ ಆ ವೇಳಾ ಪಟ್ಟಿಯಲ್ಲಿ ರೈಲು ನಂ. 16585 ಯಶವಂತಪುರ- ಮಂಗಳೂರು ಸೆಂಟ್ರಲ್‌ ರೈಲನ್ನು ಓಡಿಸಬಹುದಾಗಿದೆ. ಬೆಂಗಳೂರಿನಿಂದ ರಾತ್ರಿ 7.45ಕ್ಕೆ ಹೊರಟು ಬೆಳಗ್ಗೆ 5.55ಕ್ಕೆ ವೇಳಾಪಟ್ಟಿಯನ್ನು ರೂಪಿಸಬಹುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next