Advertisement

ಚೀನಾದಲ್ಲಿ “ನೇಕೆಡ್‌ ಲೋನ್‌’ಸೇವೆ!

06:00 AM Dec 01, 2018 | |

ಬೀಜಿಂಗ್‌: ಚೀನಾದಲ್ಲಿ ಮೋಜಿನ ಜೀವನದ ಗೀಳಿಗೆ ಬೀಳುವ ವಿದ್ಯಾರ್ಥಿಗಳಿಗಾಗಿ ಕೈ ಸಾಲ ನೀಡುವ ಕೆಲ ಸ್ಟಾರ್ಟ್‌ ಅಪ್‌ ಕಂಪನಿಗಳು “ನೇಕೆಡ್‌ ಲೋನ್‌’ ಎಂಬ ಸೇವೆ ನೀಡಲಾರಂಭಿಸಿವೆ ಎಂದು “ವೈಸ್‌ ಆಸ್ಟ್ರೇಲಿಯಾ’ ಸಂಸ್ಥೆಯ ವರದಿ ತಿಳಿಸಿದೆ. ವಿದ್ಯಾರ್ಥಿನಿಯರೇ ಇವರ ಟಾರ್ಗೆಟ್‌ ಆಗಿದ್ದು, ಇಲ್ಲಿ ಸಾಲ ಪಡೆವವರು ತಮ್ಮ ಬೆತ್ತಲೆ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದಾಗಿದೆ. ಆದರೆ, ನಿಗದಿತ ಸಮಯದಲ್ಲಿ ಸಾಲ ಹಿಂದಿರುಗಿಸದಿದ್ದಲ್ಲಿ ಅವರ ಬೆತ್ತಲೆ ಫೋಟೋ ಗಳನ್ನು ಬಹಿರಂಗಗೊಳಿಸುವುದಾಗಿ ಆ ಕಂಪನಿಗಳು ಬೆದರಿಕೆ ಹಾಕುತ್ತವೆ. ಇದು ಬೇಡ ಎನ್ನುವವರು ತಮ್ಮ ಇನ್ನಷ್ಟು ಬೆತ್ತಲೆ ಫೋಟೋ, ವಿಡಿಯೋಗಳನ್ನು ಕಳು ಹಿಸ ಬೇಕಿರುತ್ತದೆ ಎಂದು ವರದಿ ಹೇಳಿದೆ. ಇಷ್ಟಾದರೂ, ದಿನಕ್ಕೆ ಸರಾಸರಿ 116 ಯುವತಿಯರು ಸಾಲ ಪಡೆಯುತ್ತಿದ್ದು 10 ಜಿ.ಬಿ. ದತ್ತಾಂಶದಷ್ಟು ಬೆತ್ತಲೆ ಫೋಟೋಗಳು ಅರ್ಜಿಗಳೊಂದಿಗೆ ಬರುತ್ತಿವೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next