Advertisement
ಭಕ್ತಿಯಿಂದ ನೀಡಿದ ಯಾವುದೇ ವಸ್ತು ಭಗವಂತನಿಗೆ ಪ್ರಿಯವಾಗುತ್ತದೆ.ಅದಕ್ಕೆ ಮೃಷ್ಟಾನ್ನವೇ ಆಗಬೇಕಿಲ್ಲ. ಆದರೆ ಅರ್ಪಿಸುವ ನೈವೇದ್ಯ ಶುಚಿಯಾಗಿರಬೇಕು. ಭಕ್ತಿ ಭಾವದಿಂದ ಅರ್ಪಿಸಬೇಕು. ಪೂಜೆಯ ಬಳಿಕ ತೀರ್ಥ ಸೇವಿಸಿ ಅನಂತರ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು.
Related Articles
Advertisement
ಹಾಲು ಪಾಯಸಪಾಯಸ ಎಂಬ ಪದವು ಪೀಯೂಷ ಎಂಬ ಪದದಿಂದ ಬಂದಿದೆ. ಇದರರ್ಥ- ಮಕರಂದ/ಸಿಹಿಯಾದದ್ದು. ಅಕ್ಕಿಯಿಂದ ತಯಾರಿಸಿದ ಹಾಲಿನ ಪಾಯಸಕ್ಕೆ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಅಕ್ಕಿ ಪಾಯಸ ಚಂದ್ರಗ್ರಹನಿಗೆ ಬಲು ಪ್ರಿಯ. ಸುಬ್ರಹ್ಮಣ್ಯ ಹಾಗೂ ವಿಷ್ಣುವಿಗೆ ಬಲು ಪ್ರಿಯ ಈ ಕ್ಷೀರ ಪರಮಾನ್ನ. ತುಪ್ಪದ ಅನ್ನ
ಶುಕ್ರದೇವನಿಗೆ ತುಪ್ಪದ ಅನ್ನ ಬಲು ಪ್ರಿಯ. ಭೋಗ ಜೀವನದ ಅನೇಕ ಸವಲತ್ತುಗಳನ್ನು ಒದಗಿಸುವವನು ಈ ಶುಕ್ರ. ಜತೆಗೆ ದುರ್ಗೆ ಹಾಗೂ ಸರಸ್ವತಿಯವರಿಗೂ ಇದು ಇಷ್ಟದ ನೈವೇದ್ಯ. ಮನಸ್ಸಿನ ಏಕಾಗ್ರತೆ ಪಡೆಯಲು ನೆರವಾಗುವ ಈ ಶಕ್ತಿಗಳನ್ನು ಒಲಿಸಿಕೊಳ್ಳಲು ತುಪ್ಪದ ಅನ್ನ ತಯಾರಿಸಿ ನೈವೇದ್ಯ ಮಾಡಬಹುದು. ಮನೆಯಲ್ಲಿ ಅನಾರೋಗ್ಯದಿಂದ ಬಳಲುವವರು, ವೈದ್ಯಕೀಯದಲ್ಲಿ ವಾಸಿಯಾಗದ ರೋಗವಿದ್ದರು ತುಪ್ಪದ ಅನ್ನ ಮಾಡಿ ನೈವೇದ್ಯವಿಟ್ಟರೆ ಒಳ್ಳೆಯದು ಎಂಬ ನಂಬಿಕೆಯಿದೆ. ಬಿಸಿಬೇಳೆ ಬಾತ್
ಪ್ರತ್ಯಂಗೀರಾ ದೇವಿಯ ಬಗ್ಗೆ ನೀವೆಲ್ಲಾ ಕೇಳಿರುತ್ತಿತಲ್ಲಾ. ಈಕೆ ನರಸಿಂಹನ ಸ್ತ್ರೀರೂಪ. ನಾರಸಿಂಹೀ ಅಥವಾ ನರಸಿಂಹಿಕಾ ಎಂದೂ ಕರೆಯಿಸಿಕೊಳ್ಳುವ ಈಕೆಯ ದೇಹದ ಅರ್ಧ ಮಹಿಳೆಯ ರೂಪದಲ್ಲಿದೆ. ಉಳಿದರ್ಥ ಸಿಂಹರೂಪದಲ್ಲಿದೆ. ಶಕ್ತಿಯ ಪ್ರತಿರೂಪವಾಗಿರುವ ಈಕೆಯನ್ನು ವಿಜಯ/ಗೆಲುವಿನ ಅಧಿದೇವತೆಯಾಗಿಯೂ ಪೂಜಿಸುತ್ತಾರೆ. ಒಳ್ಳೆತನ ಹಾಗೂ ಕೆಡಕುಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕು ನಡೆಸಬೇಕು ಎಂದು ಸಂದೇಶ ಸಾರುತ್ತಾಳೆ ಈ ಪ್ರತ್ಯಂಗೀರಾ ದೇವಿ. ಹೀಗಾಗಿ ಕೆಡಕುಗಳನ್ನೆಲ್ಲಾ ದೂರಮಾಡಲು ಅನೇಕ ದೇವಸ್ಥಾನಗಳಲ್ಲಿ ಪ್ರತ್ಯಂಗೀರಾ ದೇವಿಗೆ ಹೋಮ, ಹವನ ನಡೆಸುತ್ತಾರೆ. ಶತ್ರು ಭೀತಿ ಇರುವವರು ಮನೆಯಲ್ಲೂ ಈ ದೇವಿಯನ್ನು ತೃಪ್ತಿಪಡಿಸಬಹುದು. ಹೇಗೆನ್ನುತ್ತೀರಾ? ಆಕೆಗೆ ಇಷ್ಟವಾದ ಬಿಸಿಬೇಳೆ ಬಾತನ್ನು ನೈವೇದ್ಯ ರೂಪದಲ್ಲಿ ಸಮರ್ಪಇಸುವ ಮೂಲಕ. ಈರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸದೆ ಸರಳವಾಗಿ ಮನೆಯಲ್ಲೇ ಬಿಸಿಬೇಳೆ ಬಾತ್ ತಯಾರಿಸಬಹುದು. ಮಧ್ಯಾಹ್ನದ ನೈವೇದ್ಯದ ವೇಳೇಗಾದರೆ ಅಕ್ಕಿಯನ್ನುಬಳಸಬಹುದು. ಬೆಳಗ್ಗಿನ ಪೂಜೆಯ ವೇಳೆಗೆ ನೈವೇದ್ಯ ಮಾಡುವವರಾದರೆ, ಅಕ್ಕಿಯ ಬದಲು ದಪ್ಪ ಅವಲಕ್ಕಿಯನ್ನು ಬಳಸಬಹುದು. ಚಿತ್ರಾನ್ನ
ಕೇತುವಿನಿಂದಾಗಿ ದೋಷಗಳಿದ್ದರೆ ಚಿತ್ರಾನ್ನ ತಯಾರಿಸಿ ನೈವೇದ್ಯ ಮಾಡಿದ್ದಲ್ಲಿ ಕಷ್ಟಗಳು ಪರಿಹಾರವಾಗುತ್ತದೆ ಎಂಬುದು ನಂಬಿಕೆ. ಕೇತುಗ್ರಹದ ಅಭಿಮಾನಿ ದೇವತೆ ಮಹಾಗಣಪತಿ. ಹೀಗಾಗಿ ಅಷ್ಟದ್ರವ್ಯ ಪಂಚಕಚ್ಚಾಯವೂ ಕೇತುವಿನ ಕಾಟವನ್ನೂ ಶಮನಗೊಳಿಸುತ್ತದೆ. ಹಳದಿ ಬಣ್ಣದ ಚಿತ್ರಾನ್ನ ದೇವಿಗೂ ಬಲು ಪ್ರಿಯ. ಮಾಂಗಲ್ಯ ದೋಷಗಳನ್ನು ಇದು ನಿವಾರಿಸುತ್ತದೆ ಹಾಗೂ ದಾಂಪತ್ಯ ಕಲಹಗಳು ಕಡಿಮೆಯಾಗುತ್ತವೆ ಎಂದೂ ಹೇಳಲಾಗುತ್ತದೆ. ಕುಜದೋಷ ಇದ್ದವರು, ಕಂಕಣ ಭಾಗ್ಯ ಕೂಡಿಬಾದರೆ ಇದ್ದವರೂ ಚಿತ್ರಾನ್ನ ತಯಾರಿಸಿ ನೈವೇದ್ಯ ಮಾಡಿ ಸುಮಂಗಲಿಯರಿಗೆ ಹಂಚಬೇಕು. ಇದರಿಂದ ವಿವಾಹ ದೋಷಗಳೂ ನಿವಾರಣೆಯಾಗುತ್ತವೆ ಎನ್ನಲಾಗಿದೆ. ಮೊಸರನ್ನ
ಮನೆದೇವರಿಗೆ ಮೊಸರನ್ನ ನೈವೇದ್ಯ ಮಾಡುವುದು ವಾಡಿಕೆ. ಅದರ ಹೊರತು ಶುಕ್ರವಾರ ಮಹಾಲಕ್ಷ್ಮೀ ದೇವಿಗೆ ಮೊಸರನ್ನ ಇಟ್ಟು ಪೂಜೆ ಮಾಡಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂಬ ನಂಬಿಕೆಯಿದೆ. ಮೊಸರನ್ನ ಮಾಡುವ ವೇಳೆ ದಾಳಿಂಬೆ ಹಣ್ಣಿನ ಬೀಜ ಸೇರಿಸಿದರೆ ಶತ್ರು ಭಯ ನಾಶವಾದರೆ, ಒಣಖರ್ಜೂರ ಸಣ್ಣಗೆ ಕತ್ತರಿಸಿ ಹಾಕಿದರೆ ಹಣಕಾಸಿನ ತೊಂದರೆ ಕಾಣಿಸಿಕೊಳ್ಳುವುದಿಲ್ಲ, ಕೊಬ್ಬರಿ ಹಾಕಿ ನೈವೇದ್ಯ ಮಾಡಿ ಗಣಪತಿಗೆ ಅರ್ಪಿಸಿದರೆ ಸಂಕಷ್ಟಗಳು ದೂರವಾಗುತ್ತವೆ ಎಂದೂ ಹೇಳಲಾಗುತ್ತದೆ. ವಿಷ್ಣು ಸಹಸ್ರನಾಮ ಇಲ್ಲವೇ ಲಕ್ಷ್ಮೀ ಸಹಸ್ರನಾಮ ಜಪಿಸುವ ವೇಳೇಯಲ್ಲಿ ಮೊಸರನ್ನಕ್ಕೆ ಜೇನುತುಪ್ಪ ಸೇರಿಸಿ ನೈವೇದ್ಯ ಮಾಡುವುದುಂಟು.ಇದರಿಂದ ಆರೋಗ್ಯದ ಸಮಸ್ಯೆಗಳೂ ದೂರವಾಗುತ್ತವೆ. ವೈಷ್ಣದ ದೇವಾಲಯಗಳಲ್ಲಿ ಇದನ್ನು ದೇವರಿಗೆ ಅರ್ಪಿಸಿದ ಬಳಿಕ ನೈವೇದ್ಯವಾಗಿ ಭಕ್ತರಿಗೆ ಹಂಚಲಾಗುತ್ತದೆ. ಹೆಸರುಬೇಳೆ ಪೊಂಗ ಲ್ ಸಂಕ್ರಾತಿ ಬಂತೆಂದರೆ ಸಿಹಿಖಾರದ ಥರಥರದ ಪೊಂಗಲ್ ಗಳು ಪ್ರತಿ ಮನೆಯಲ್ಲೂ ತಯಾರಾಗುತ್ತವೆ.ಕೈ ತುಂಬಾ ಫಸಲು ಕೊಟ್ಟ ಸೂರ್ಯದೇವನಿಗೆ ನಮಿಸುವ ದಿನವದು. ಈ ಹಬ್ಬದ ದಿನ ಎಳ್ಳುಬೆಲ್ಲವನ್ನೂ ಮೊದಲು ದೇವರ ಮುಂದಿಟ್ಟು ಬಳಿಕ ಎಲ್ಲರಿಗೂ ಹಂಚಿ ತಿನ್ನುವ ಪ್ರತೀತಿ ಇದೆ. ಇದು ಧ್ಯಾನ್ಯಲಕ್ಷ್ಮೀಯನ್ನು ಪೂಜಿಸುವ ದಿನ. ಈ ದಿನ ಪೊಂಗಲ್ ತಯಾರಿಸಿ ದೇವರಿಗೆ ನೈವೇದ್ಯ ಮಾಡುವುದು ರೂಢಿ. ಇದರ ಹೊರತಾಗಿ, ವಿಷ್ಣು, ಮಹಾಲಕ್ಷ್ಮೀ, ದುರ್ಗೆ ಹಾಗೂ ಸೂರ್ಯದೇವರಿಗೂ ಇದು ಪ್ರೀತಿಯ ನೈವೇದ್ಯ. ಕೋಪ ಕಡಿಮೆಯಾಗಲು, ಗ್ರಹಣ ಶಕ್ತಿ, ನೆನಪಿನ ಶಕ್ತಿ ಹೆಚ್ಚಲು, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಗುಣವಾಗಲು, ವಿದ್ಯಾಭ್ಯಾಸದಲ್ಲಿ ನಿಪುಣತೆ ಹೊಂದಲು ಈ ದೇವರನ್ನು ಬೇಡಿಕೊಳ್ಳುತ್ತಿರಾದರೆ ಹೆಸರುಬೇಳೆ ಪೊಂಗಲ್ ತಯಾರಿಸಿ ಆತನ ಮುಂದಿಡಿ. ನಿಮ್ಮ ಕೋರಿಕೆ ಈಡೇರಿದಂತೆಯೇ!