Advertisement

ತೃತೀಯ ರಂಗ ರಚನೆಗೆ ನಾಯ್ಡು ಪ್ರಯತ್ನ?

06:00 AM Oct 28, 2018 | |

ನವದೆಹಲಿ: ಪ್ರಸ್ತುತ ರಾಜಕೀಯ ಸಂಕೀರ್ಣತೆಯಿಂದಾಗಿ ಬಿಜೆಪಿಯೇತರ ಪಕ್ಷಗಳು 2019ರ ಲೋಕಸಭೆ ಚುನಾವಣೆಯಲ್ಲಿ ಒಂದಾಗಿ ಹೋರಾಟ ನಡೆಸಲಿವೆ ಎಂದು ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Advertisement

ಶನಿವಾರ ರಾಷ್ಟ್ರರಾಜಧಾನಿಯಲ್ಲಿ ಹಲವು ವಿರೋಧ ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದು, ತಾನು ಈ ಪ್ರಕ್ರಿಯೆಯಲ್ಲಿ ನೆರವಾಗಲಿದ್ದೇನೆ ಎಂದಿದ್ದಾರೆ. ರಾಜಕೀಯ ಸನ್ನಿವೇಶ ಮತ್ತು ದೇಶದ ಹಿತಾಸಕ್ತಿಯಿಂದ ಪಕ್ಷಗಳು ಒಂದಾಗಲಿವೆ. ಕೆಲವು ಪಕ್ಷಗಳು ಚುನಾವಣೆಗೂ ಮುನ್ನ ಸೇರುವುದಿಲ್ಲ. ಈ ಪೈಕಿ ಕೆಲವು ಪಕ್ಷಗಳು ಚುನಾವಣೆ ನಂತರ ನಮ್ಮ ಜೊತೆ ಕೈಜೋಡಿಸಲಿವೆ ಎಂದಿದ್ದಾರೆ. ಅಲ್ಲದೆ ಬಿಜೆಪಿ ಹೇರುತ್ತಿರುವ ಒತ್ತಡದಿಂದ ಕೆಲವು ಪಕ್ಷಗಳು ನಮ್ಮ ಜೊತೆ ಸೇರಲು ಮನಸು ಮಾಡುತ್ತಿಲ್ಲ. ಈ ಹಿಂದೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಆಪ್‌ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಕೂಡ ಈ ದಿಕ್ಕಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಪ್ರಾದೇಶಿಕ ಪಕ್ಷವಾಗಿರುವ ಟಿಡಿಪಿ 25 ಲೋಕಸಭೆ ಕ್ಷೇತ್ರಗಳನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಸೀಮಿತ ಪಾತ್ರ ನಿರ್ವಹಿಸಬಲ್ಲದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next