Advertisement

Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

07:25 PM Dec 03, 2024 | Team Udayavani |

ನಾಗ್ಪುರ: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

Advertisement

ನಾಗ್ಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ಪ್ರತಿಯೊಬ್ಬ ರಾಜಕಾರಣಿಯೂ ಸದಾ ಬೇಸರದಲ್ಲಿರುತ್ತಾರೆ. ಇರುವ ಹುದ್ದೆ ಗಿಂತಲೂ ಮೀರಿದ ಉನ್ನತ ಸ್ಥಾನದ ಆಕಾಂಕ್ಷಿಯಾಗಿರುತ್ತಾನೆ’ ಎಂದರು. ಅಲ್ಲದೇ ನಾವು ಸೋತಾಗ ನಮ್ಮ ಜೀವನ ಕೊನೆಯಾಗುವುದಿಲ್ಲ. ಬದಲಾಗಿ ನಾವು ಪ್ರಯತ್ನಿಸದೇ ಹೋದರೆ ನಾವು ಕೊನೆಯಾದಂತೆ ಎಂಬ ತತ್ವವನ್ನು ನಾನು ಪಾಲಿಸುತ್ತಿದ್ದೇನೆ ಎಂದು ಗಡ್ಕರಿ ತಿಳಿಸಿದರು.

ರಾಜಕಾರಣದಲ್ಲಿ ಎಲ್ಲರೂ ದುಃಖಿತರೇ:
ಜೀವನವು ಸವಾಲುಗಳು ಮತ್ತು ಸಮಸ್ಯೆಗಳು ತುಂಬಿರುತ್ತದೆ. ಅವುಗಳನ್ನು ಎದುರಿಸಲು ವ್ಯಕ್ತಿ ‘ಬದುಕುವ ಕಲೆ’ ಕಲಿಯಬೇಕು. ರಾಜಕಾರಣದಲ್ಲಿ ಎಲ್ಲರೂ ದುಃಖಿತರಾಗಿಯೇ ಇರುತ್ತಾರೆ. ಶಾಸಕರಾಗುವ ಅವಕಾಶ ಸಿಗದ ಕಾರಣ ಕಾರ್ಪೋರೇಟರ್, ಸಂಪುಟಕ್ಕೆ ಸೇರ್ಪಡೆಯಾಗದ ಕಾರಣ ಶಾಸಕ ಅತೃಪ್ತಿಯಲ್ಲಿರುತ್ತಾರೆ. ಮಂತ್ರಿಯಾದವನು ಒಳ್ಳೆ ಇಲಾಖೆ ಸಿಗದೆ, ಮುಖ್ಯಮಂತ್ರಿ ಆಗಲಾರದೆ ಅತೃಪ್ತನಾಗಿದ್ದಾನೆ. ಇನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂತವನಾದರೂ ನೆಮ್ಮದಿಯಲ್ಲಿ ಇರುತ್ತಾನಾ? ಎಂದರೆ, ಹೈಕಮಾಂಡ್‌ ಯಾವಾಗ ತನ್ನನ್ನು ಸಿಎಂ ಸ್ಥಾನದಿಂದ ತೆಗೆದು ಹಾಕುತ್ತದೆಯೋ ಅನ್ನೋ ಆತಂಕವೇ ಅವನಲ್ಲಿರುತ್ತದೆ ಎಂದು ಕೇಂದ್ರ ಸಚಿವ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next