Advertisement

ದಲಿತರ ಬಾಳಲ್ಲಿ ಬೆಳಕು ಮೂಡಿಸಿದ ಮಹಾನಾಯಕ

04:22 PM Apr 15, 2021 | Team Udayavani |

ತಿಪಟೂರು: ದಲಿತರು, ಶೋಷಣೆಗೆ ಒಳಗಾದವರಉದ್ಧಾರಕ್ಕಾಗಿ, ಸಮಾನತೆಗಾಗಿ, ಮಾನವೀಯಮೌಲ್ಯಗಳಿಗಾಗಿ ಹಗಲಿರುಳು ಹೋರಾಡಿ ಅವರೆಲ್ಲರಬಾಳಲ್ಲಿ ಬೆಳಕು ಮೂಡಿಸಿದವರು ಅಂಬೇಡ್ಕರ್‌ ಎಂದುಶಾಸಕ ಬಿ.ಸಿ.ನಾಗೇಶ್‌ ತಿಳಿಸಿದರು.

Advertisement

ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದಸಂವಿಧಾನ ಶಿಲ್ಪಿ ಡಾ ಬಿ.ಆರ್‌.ಅಂಬೇ ಡ್ಕರ್‌ 130ನೇಜಯಂತಿ ಹಾಗೂ ಡಾ. ಬಾಬು ಜಗಜೀ ವನ್‌ ರಾಮ್‌114ನೇ ಜನ್ಮದಿನಾಚರಣೆ ಸಮಾ ರಂಭವನ್ನು ಉದ್ಘಾಟಿಸಿಮಾತನಾಡಿದ ಅವರು, ಭಾರ ತದ ಭವಿಷ್ಯಉಜ್ವಲವಾಗಬೇಕಾದರೆ ದಲಿತರು, ಹಿಂದುಳಿದವರ್ಗದವರು, ಸಮಾಜದ ಮುಖ್ಯವಾಹಿನಿ ಗೆ ಬರಬೇಕು.ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಹೊಂದ ಬೇಕುಎಂಬುದನ್ನು ಅರಿತಿದ್ದ ಅಂಬೇಡ್ಕರ್‌ ಸುಧಾ ರಣಾಮೀಸಲಾತಿ ಹಾಗೂ ಕರಡು ನಿಯಮಾ ವಳಿಗಳನ್ನುಒಳಗೊಂಡ ಶ್ರೇಷ್ಠ ಸಂವಿಧಾನವನ್ನು ರಚಿ ಸುವ ಮೂಲಕಸಂಪೂರ್ಣ ನಿರ್ಲಕ್ಷ್ಯ ಮತ್ತು ತಿರ ಸ್ಕಾರಕ್ಕೆ ಒಳಗಾಗಿದ್ದಶೋಷಿತ ಕೆಳಸ್ತರದವರಿಗೆ ಸೌಲಭ್ಯ ಪಡೆ ಯುವ ಹಕ್ಕುಗಳಬಗ್ಗೆ ಜಾಗೃತಿ ಮೂಡಿಸಿದರು ಎಂದರು.

ಅನ್ಯಾಯದ ವಿರುದ್ಧ ಪ್ರತಿಭಟನೆ: ಉಪನ್ಯಾಸಕದಿಬ್ಬದಹಳ್ಳಿ ಶ್ಯಾಮಸುಂದರ್‌ ಮಾತನಾಡಿ,ಮಾನವತಾವಾದಿ, ಸಾಮಾಜಿಕ ಹೋರಾಟಗಾರ, ದಲಿತಸಮುದಾಯದಲ್ಲಿ ಜನಿಸಿ ಉಳ್ಳವರಿಂದ ಶೋಷಣೆ,ನಿಂದನೆ, ಅವಮಾನಗಳಿಗೆ ಒಳಗಾಗಿ ಸಾಕಷ್ಟುತೊಂದರೆಗಳನ್ನು ಅನುಭವಿಸಿದರೂ, ತಮ್ಮ ಅಪಾರಜೀವನಾನುಭವ ಮತ್ತು ಜ್ಞಾನದಿಂದ ಅವುಗಳಿಗೆಲ್ಲಹೆದರದೆ ಧೈರ್ಯದಿಂದ ಹೋರಾಟದ ಹಾದಿಹಿಡಿದರು.

ಅವಿರತವಾಗಿ ಅನ್ಯಾಯದ ವಿರುದ್ಧಪ್ರತಿಭಟಿಸಿ ದಲಿತರಿಗೆ, ಹಿಂದುಳಿದವರಿಗೆ ಸಾಮಾಜಿಕನ್ಯಾಯವನ್ನು ಒದಗಿಸಿ ಕೊಟ್ಟಿರುವ ದೀಮಂತನಾಯಕರ ಜಯಂತಿಯನ್ನು ಆಚರಿಸುವ ಮುಖೇನಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯಎಂದರು.ತಹಶಿಲ್ದಾರ್‌ ಚಂದ್ರಶೇಖರ್‌, ಡಿವೈಎಸ್‌ಪಿ ಚಂದನ್‌ಕುಮಾರ್‌, ಪೌರಾಯುಕ್ತ ಉಮಾಕಾಂತ್‌, ಸಮಾಜಕಲ್ಯಾಣಾಧಿಕಾರಿ ದಿನೇಶ್‌ ಜೆ., ಮುಖಂಡ ಗಂಗರಾಜು,ರಂಗಸ್ವಾಮಿ, ಬಜಗೂರು ಮಂಜುನಾಥ್‌, ನಾಗತೀಹಳ್ಳಿಕೃಷ್ಣಮೂರ್ತಿ, ಕರಡಿ ಬಸವರಾಜು, ಈಚನೂರುಮಹದೇವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next