Advertisement

ಆನ್‌ಲೈನ್‌ನಲ್ಲಿ ಆ್ಯಸಿಡ್‌ ಖರೀದಿಸಿದ್ದ ನಾಗೇಶ : ತನಿಖೆ ವೇಳೆ ವಿಚಾರ ಬಹಿರಂಗ

11:45 PM May 15, 2022 | Team Udayavani |

ಬೆಂಗಳೂರು : ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಆ್ಯಸಿಡ್‌ ದಾಳಿ ನಡೆಸಿರುವ ನಾಗೇಶ ಕೃತ್ಯ ಎಸಗಲೆಂದೇ ಆನ್‌ಲೈನ್‌ ಮೂಲಕ ಆ್ಯಸಿಡ್‌ ಖರೀಸಿದ್ದ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೂಂದೆಡೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗನನ್ನು ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಈ ಹಿಂದೆ ನಾಗೇಶ ಪೀಣ್ಯ ಸಮೀಪದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಗ ಆ ಕಂಪೆನಿಯವರು ಸೋಲಾರ್‌ ಸ್ವತ್ಛಗೊಳಿಸಲು ಆನ್‌ಲೈನ್‌ ಮೂಲಕ ಆ್ಯಸಿಡ್‌ ಖರೀದಿಸಿದ್ದರು. ಈ ವಿಚಾರ ತಿಳಿದುಕೊಂಡಿದ್ದ ಆರೋಪಿ ನಾಗೇಶ, ಅಲ್ಲಿ ಕೆಲಸ ಬಿಟ್ಟ ಬಳಿಕ ಆ್ಯಸಿಡ್‌ ಮಾರಾಟ ಮಾಡುವ ಕಂಪೆನಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ. ಅನಂತರ ತಾನೊಂದು ಗಾರ್ಮೆಂಟ್ಸ್‌ ಆರಂಭಿಸಿದ್ದೇನೆ. ಅಲ್ಲಿನ ಕೆಲ ವಸ್ತುಗಳ ಸ್ವತ್ಛತೆಗಾಗಿ ಆ್ಯಸಿಡ್‌ ಅಗತ್ಯವಿದೆ ಎಂದು ಹೇಳಿ, 10 ಲೀಟರ್‌ನ 1 ಕ್ಯಾನ್‌, ಜತೆಗೆ ಪ್ರತ್ಯೇಕ ಒಂದು ಲೀಟರ್‌ನ ಆ್ಯಸಿಡ್‌ ಖರೀದಿಸಿದ್ದ.

ಆಟೋ ಚಾಲಕರ ಮಾಹಿತಿ

ಆರೋಪಿ ಪತ್ತೆಗಾಗಿ ಪೊಲೀಸರು ಹಲವು ತಂಡಗಳಾಗಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಲೇ ಇದ್ದರು. ಜತೆಗೆ ರಾಜ್ಯ, ಹೊರರಾಜ್ಯಗಳಲ್ಲಿ ಕರಪತ್ರ ಹಂಚಿ ಸಾರ್ವಜನಿಕರ ನೆರವು ಕೋರಿದ್ದರು. ಈ ಮಧ್ಯೆ ತಮಿಳುನಾಡಿನ ಗಡಿ ಭಾಗದಲ್ಲಿ ಆಟೋ ಚಾಲಕನೊಬ್ಬ ನಾಗ ತಮಿಳುನಾಡಿನ ಕಡೆ ಹೋಗಿರುವ ಬಗ್ಗೆ ಮೊದಲ ಸುಳಿವು ಕೊಟ್ಟಿದ್ದ. ಅಲ್ಲದೆ,ತಮಿಳುನಾಡಿನ ರಮಣಶ್ರೀ ಆಶ್ರಮದಲ್ಲಿದ್ದ ನಾಗನ ಫೋಟೋವನ್ನು ಆಶ್ರಮಕ್ಕೆ ತೆರಳಿದ್ದ ಆಟೋ ಚಾಲಕನೊಬ್ಬ ತೆಗೆದು ಪೊಲೀಸರಿಗೆ ಕಳುಹಿಸಿದ್ದ.

ಆರೋಪಿ ಕನ್ನಡವನ್ನೇ ಹೆಚ್ಚು ಮಾತನಾಡುತ್ತಿದ್ದ ಬಗ್ಗೆ ಅನುಮಾನಗೊಂಡಿದ್ದ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಇದನ್ನೂ ಓದಿ : ಶಾಂತಾಬಾಯಿ-ಮೇಳಕುಂದಿಗೆ ಸಿಐಡಿ ತಲಾಶ್‌ : ಮುಖ್ಯಶಿಕ್ಷಕ ಕಾಶೀನಾಥ 2ನೇ ಬಾರಿ ಸಿಐಡಿ ವಶಕ್ಕೆ

ಅರ್ಧ ಲೀಟರ್‌ ಎಸೆದಿದ್ದ

ಎ. 28ರಂದು ಯುವತಿ ಮೇಲೆ ಆ್ಯಸಿಡ್‌ ದಾಳಿ ನಡೆಸಿದ್ದು, ಅನಂತರ ಮಾರ್ಗಮಧ್ಯೆ ಅರ್ಧ ಲೀಟರ್‌ನ ಆ್ಯಸಿಡ್‌ ಬಾಟಲಿಯನ್ನು ಎಸೆದು ಪರಾರಿಯಾಗಿದ್ದ. ಬಳಿಕ ನೇರವಾಗಿ ವಕೀಲರನ್ನು ಭೇಟಿಯಾಗಿದ್ದ. ಘಟನೆಯ ತೀವ್ರತೆಯನ್ನು ಅರಿತ ಯಾವ ವಕೀಲರೂ ಆತನ ಪರವಾಗಿ ವಾದ ಮಂಡಿಸಲು ಮುಂದಾಗಿರಲಿಲ್ಲ. ಬಳಿಕ ಆತ ತಮಿಳುನಾಡಿನ ಕಡೆ ಪ್ರಯಾಣ ಬೆಳೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next