Advertisement

ಮುರಿದು ಬಿದ್ದ ಪುತ್ರನ ದಾಂಪತ್ಯ |ಭಾವುಕರಾದ ನಟ ನಾಗಾರ್ಜುನ್

09:20 PM Oct 02, 2021 | Team Udayavani |

ಹೈದರಾಬಾದ್: ಪುತ್ರ ನಾಗಚೈತನ್ಯನ ದಾಂಪತ್ಯ ಜೀವನ ಮುರಿದು ಬಿದ್ದಿದ್ದಕ್ಕೆ ನಟ ನಾಗಾರ್ಜುನ ಅಕ್ಕಿನೇನಿ ಬೇಸರಗೊಂಡಿದ್ದಾರೆ.

Advertisement

‘ಭಾರವಾದ ಹೃದಯದಿಂದ ಇದನ್ನು ಹೇಳುತ್ತಿದ್ದೇನೆ. ಸ್ಯಾಮ್ ಮತ್ತು ಚೈ ನಡುವೆ ಆಗಿದ್ದು ದುರದೃಷ್ಟಕರ. ಗಂಡ-ಹೆಂಡತಿ ನಡುವೆ ನಡೆಯುವುದು ತೀರಾ ವೈಯಕ್ತಿಕ. ಸ್ಯಾಮ್ ಮತ್ತು ಚೈ ಇಬ್ಬರೂ ನನಗೆ ಪ್ರೀತಿ ಪಾತ್ರರು. ನನ್ನ ಕುಟುಂಬ ಯಾವತ್ತೂ ಸ್ಯಾಮ್ ಜೊತೆ ಕಳೆದ ಒಳ್ಳೆಯ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತದೆ ಮತ್ತು ಅವಳು ಯಾವತ್ತೂ ನಮಗೆ ಪ್ರೀತಿ ಪಾತ್ರಳಾಗಿಯೇ ಇರುತ್ತಾಳೆ. ಇಬ್ಬರಿಗೂ ಧೈರ್ಯಕೊಟ್ಟು ದೇವರು ಕಾಪಾಡಲಿ’ ಎಂದು ನಾಗಾರ್ಜುನ ಭಾವುಕರಾಗಿ ಟ್ವಿಟರಿನಲ್ಲಿ ಬರೆದುಕೊಂಡಿದ್ದಾರೆ ನಾಗಾರ್ಜುನ.

ಪ್ರೀತಿಸಿ ಮದುವೆಯಾಗಿದ್ದ ನಾಗಚೈನತ್ಯ ಹಾಗೂ ಸಮಂತಾ ಅವರು ಇಂದು ಅಧಿಕೃತವಾಗಿ ಬ್ರೇಕಪ್ ಮಾಡಿಕೊಂಡರು. ನಾಲ್ಕು ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳಿದ ಈ ಜೋಡಿ, ನಮ್ಮ ಖಾಸಗಿ ಬದುಕನ್ನು ಎಲ್ಲರೂ ಗೌರವಿಸಿ, ಇಂತಹ ಸಂದರ್ಭದಲ್ಲಿ ನಮ್ಮ ಜೊತೆ ನಿಲ್ಲಿ ಎಂದು ಮಾಧ್ಯಮಗಳಿಗೆ ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದೆ.

ಚೈ ಹಾಗೂ ಸ್ಯಾಮ್ ವಿಚ್ಛೇದನದ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ನಾಗಾರ್ಜುನ ಸಹ ಮಗನ ವೈವಾಹಿಕ ಜೀವನವನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next