Advertisement

ನಾಗರಕೆರೆಯಲ್ಲಿ ಮೀನುಗಳ ಸಾವು

10:43 AM Jun 08, 2021 | Team Udayavani |

ದೊಡ್ಡಬಳ್ಳಾಪುರ: ಇಲ್ಲಿನ ಐತಿಹಾಸಿಕ ನಾಗರಕೆರೆ ನೀರಿನಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿದ್ದು, ಕೆರೆ ಅಂಚಿಗೆ ತೇಲಿ ಬಂದಿವೆ. ಇದರಿಂದಾಗಿ ಕೆರೆ ಬಳಿ ಮೂಗು ಮುಚ್ಚಿಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

Advertisement

ನಾಗರಕೆರೆ ಅಂಗಳಕ್ಕೆ ವಲಸೆ ಪಕ್ಷಿಗಳು ಸೇರಿದಂತೆ ಹತ್ತಾರು ರೀತಿಯ ಕೊಕ್ಕರೆ ಹಾಗೂ ಇತರೆ ಪಕ್ಷಿಗಳು ಆಹಾರಕ್ಕಾಗಿ ಬರುತ್ತವೆ. ಸಾಮಾನ್ಯವಾಗಿ ಮೃತಪಟ್ಟಿರುವ ಮೀನುಗಳನ್ನು ಪಕ್ಷಿಗಳು ತಿನ್ನುವುದಿಲ್ಲ. ಆದರೆ, ಕೆರೆಯ ನೀರಿನಲ್ಲಿ ಜೀವಂತವಾಗಿರುವ ಮೀನುಗಳನ್ನು ಹಿಡಿದು ತಿನ್ನುತ್ತಿವೆ. ಮೀನುಗಳು ಯಾವ ಕಾರಣದಿಂದ ಮೃತಪಟ್ಟಿವೆ ಎನ್ನುವುದನ್ನು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೊಳಚೆ ನೀರು ಕೆರೆಗೆ: ನಗರದಲ್ಲಿ ಒಳ ಚರಂಡಿ ವ್ಯವಸ್ಥೆ ಇದ್ದರೂ, ಶೇ.60ರಷ್ಟು ಮನೆಗಳವರು ಮಾತ್ರ ಒಳಚರಂಡಿ ಸಂಪರ್ಕಗಳನ್ನು ಪಡೆದಿದ್ದಾರೆ. ಉಳಿದ ಎಲ್ಲಾ ಮನೆಗಳ ತ್ಯಾಜ್ಯ ನೀರು, ಶೌಚಾಲಯದ ಗಲೀಜು ತೆರೆದ ಚರಂಡಿಗಳಮೂಲಕ ಹರಿದು ಕೆರೆ ಸೇರುತ್ತಿದೆ.

ಎಲ್ಲರೂ ಒಳಚರಂಡಿ ಸಂಪರ್ಕ ಪಡೆಯುವಂತೆ ಹಾಗೂ ಕೊಳಚೆ ನೀರು ಕೆರೆ ಅಂಗಳ ಸೇರದಂತೆ ನಗರ ಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಸಂಘಟನೆಗಳ ಹಾಗೂ ನಾಗರಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next