Advertisement
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ನಾಗರಾಜ್‌ನನ್ನು “ಬಾಂಬ್ ನಾಗ’, “ಪಾಲ್ ನಾಗ’ ಮತ್ತು “ನಾಗ’ ಎಂಬ ಹೆಸರಿನಿಂದ ಸಂಬೋಧಿಸುತ್ತಿದ್ದರು. ಇದನ್ನು ಪ್ರಶ್ನಿಸಿ ನಾಗರಾಜ್ ಹೈಕೋರ್ಟ್ ಮೇಟ್ಟಿಲೇರಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ 2015 ಜೂನ್ 15ರಂದು “ಬಾಂಬ್ ನಾಗ’ ಹಾಗೂ ಇತರೆ ಅಲಿಯಾಸ್ ಹೆಸರಿನಲ್ಲಿ ನಾಗರಾಜನ ಹೆಸರು ಕರೆಯಬಾರದು, ಇಲಾಖೆಯ ದಾಖಲೆಗಳಲ್ಲಿಯೂ ಈ ಹೆಸರನ್ನು ನಮೂದಿಸಬಾರದು ಎಂದು ಆದೇಶಿಸಿತ್ತು.
ದಾಳಿ ನಡೆಸಿದ ಬಳಿಕ, ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನಾಗರಾಜ್‌ನನ್ನು “ಬಾಂಬ್ ನಾಗ’ ಎಂದು ಸಂಬೋಧಿಸಿದ್ದರು. ಈ ಬಗ್ಗೆ ನಿಮ್ಮ ಕ್ರಮ ಏನು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಅಲ್ಲದೇ ಇನ್ಮುಂದೆ “ಬಾಂಬ್ ನಾಗ’, “ಪಾಲ್ ನಾಗ’ ಅಥವಾ “ನಾಗ’ ಎಂದು ಪೊಲೀಸರು ಕರೆದರೆ ನ್ಯಾಯಾಲಯದಲ್ಲಿ ದೂರು ದಾಖಲಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ವಕೀಲ ಶ್ರೀರಾಮರೆಡ್ಡಿ ತಿಳಿಸಿದ್ದಾರೆ.