Advertisement

ಕಾಳಾವರ ಮಹಾಲಿಂಗೇಶ್ವರ ಕಾಳಿಂಗ ಸುಬ್ರಹ್ಮಣ್ಯ ಕ್ಷೇತ್ರ: ನಾಗರ ಪಂಚಮಿ

07:40 AM Jul 29, 2017 | Harsha Rao |

ಕೋಟೇಶ್ವರ: ಜಿಲ್ಲೆಯ 2ನೇ ಸುಬ್ರಹ್ಮಣ್ಯ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿರುವ ಕಾಳಾವರ ಮಹಾಲಿಂಗೇಶ್ವರ ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರದಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನಾಗರ ಪಂಚಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆದಿಶೇಷನಿಗೆ ಹಾಲು, ಸಿಯಾಳ, ಅಭಿಷೇಕ ಸೇವೆಯೊಡನೆ ವಿವಿಧ ಧಾರ್ಮಿಕ ಪೂಜೆಗಳಲ್ಲಿ ಪಾಲ್ಗೊಂಡರು. ಉಡುಪಿ ಹಾಗೂ ಕುಂದಾಪುರ ತಾಲೂಕಿನ ನಂಬಿದ ಅಪಾರ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. 

Advertisement

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ರವಿರಾಜ ಶೆಟ್ಟಿ, ಸದಸ್ಯರಾದ ನರಸಿಂಹ ಕಾರಂತ, ಕೆ.ಕೆ. ಕಾಳಾವಾರ್‌ಕರ್‌, ನಾಗರಾಜ ಭಟ್‌, ಕಲಾವತಿ, ವರದ, ರತ್ನಾಕರ ಶೆಟ್ಟಿ ಉಪಸ್ಥಿತರಿದ್ದು, ಭಕ್ತರ ಸೇವೆಗೆ ಸಹಕರಿಸಿದರು. ದೇಗುಲದ ಅರ್ಚಕ ಹಾಗೂ ಸಮಿತಿಯ ಸದಸ್ಯರಾದ ಸತ್ಯನಾರಾಯಣ ಪುರಾಣಿಕ್‌ ಅವರ ನೇತƒತ್ವದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next