Advertisement

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

11:29 PM Sep 13, 2024 | Team Udayavani |

ನಾಗಮಂಗಲ (ಮಂಡ್ಯ): ಗಲಭೆ ಪ್ರಕರಣಕ್ಕೆ ಸಂಬಂಧಿ ಸಿ ಬದ್ರಿಕೊಪ್ಪಲು ನಿವಾಸಿ ದಿವಾಕರ್‌ ಎಂಬುವರನ್ನು ಪೊಲೀಸರು ಬುಧವಾರ ರಾತ್ರಿ ಮನೆಯಲ್ಲಿದ್ದಾಗಲೇ ಬಂಧಿಸಿದ್ದರು. ಇದರಿಂದ ನೊಂದ ದಿವಾಕರ್‌ ಅವರ ಸೋದರ ಮಾವ ತುಮಕೂರು ಜಿಲ್ಲೆಯ ಮೆಳೆಕೋಟೆ ಗ್ರಾಮದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

Advertisement

ಅಳಿಯನ ಬಂಧನದ ಕೊರಗಲ್ಲಿ ದಿವಾಕರ್‌ ಸೋದರ ಮಾವ ಸಾವನ್ನಪ್ಪಿದ್ದರಿಂದ ಪುಟ್ಟ ಮಕ್ಕಳೊಂದಿಗೆ ಪತ್ನಿ ಕಣ್ಣೀರು ಹಾಕುತ್ತಿದ್ದಾರೆ. ಮಾಡದ ತಪ್ಪಿಗೆ ಗಂಡನನ್ನು ಜೈಲಿಗೆ ಕರೆದುಕೊಂಡು ಹೋಗಿದ್ದಾರೆ.

ಮೃತರ ಮುಖ ನೋಡೋದಕ್ಕೆ ಪತಿಯನ್ನು ಕಳುಹಿಸಿಕೊಡಿ. ಅಲ್ಲಿಯವರೆಗೂ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಕಣ್ಣೀರು ಹಾಕಿದ್ದರು. ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ದಿವಾಕರ್‌ನನ್ನು ಮಾವನ ಅಂತ್ಯಕ್ರಿಯೆಗೆ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.