ಕಟೀಲು: ಸಾವಿರ ಸೀಮೆಯ ಆದಿಮಾಯೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗುರುವಾರ ಜರಗಿದ ವಿಜೃಂಭಣೆಯ ಬ್ರಹ್ಮಕಲಶೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದರು. ಕಟೀಲಿನ ಯಾವ ಭಾಗದಲ್ಲಿ ನೋಡಿದರೂ ಕೂಡ ಭಕ್ತ ಗಣವೇ ಭಕ್ತಿ ಭಾವಪರವಶದಿಂದ ತಾಯಿ ಆದಿ ಮಾಯೆಯನ್ನು ಸ್ಮರಿಸುತ್ತಿದ್ದು ಕಂಡುಬಂದಿತ್ತು. ಇಂತಹ ಈ ಕ್ಷಣಕ್ಕೆ ಕಟೀಲು ಕ್ಷೇತ್ರವೂ ಮತ್ತೂಮ್ಮೆ ಶುಕ್ರವಾರ ಸಿದ್ಧಗೊಳ್ಳುತ್ತಿರುವುದು ಕಂಡುಬಂತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವೈದಿಕ ವಿಧಿವಿಧಾನಗಳಿಂದ ಫೆ. 1 ರಂದು ನಾಗಮಂಡಲೋತ್ಸವ ಜರಗಲಿದ್ದು ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸುಮಾರು 2 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ. ಒಂದು ಲಕ್ಷ ಜನರಿಗೆ ಅನ್ನ ಪ್ರಸಾದ ನಡೆಯಲಿದೆ.
ಕಟೀಲಿನ ಮೂಲಸ್ಥಳವಾಗಿರುವ ಕುದ್ರುವಿನಲ್ಲಿ ಈಗಾಗಲೇ ನಾಗಮಂಡಲದ ಸ್ಥಳದಲ್ಲಿ ತಗಡು ಚಪ್ಪರ ಹಾಕಲಾಗಿದ್ದು ಸಕಲ ರೀತಿ ಯಲ್ಲಿ ಸನ್ನದ್ಧವಾಗಿದೆ. ಕುದ್ರು ಮೂಲ ವನಕ್ಕೆ ಹೋಗಲು ಎರಡು ಸೇತು ವೆಗಳು ಇವೆ. ನಾಗ ಮಂಡಲ ಕ್ಕೋಸ್ಕರ ನದಿಗೆ ಮಣ್ಣು ತುಂಬಿಸಿ ಹೊಸ ಸೇತುವೆ ನಿರ್ಮಿಸಲಾಗಿದೆ.
10 ಕಡೆ ಎಲ್‌ಸಿಡಿ ಪರದೆ
ನಾಗಮಂಡಲದಲ್ಲಿ ಸ್ಥಳ ಕಿರಿದಾಗಿದ್ದು ನಾಗಮಂಡಲ ವೀಕ್ಷಣೆಗೆ ಬಸ್ ನಿಲ್ದಾಣ ದೇವಸ್ಥಾನ ರಥಬೀದಿ, ಭೋಜನ ಶಾಲೆ ವಿವಿಧ 10 ಕಡೆಗಳಲ್ಲಿ ಎಲ್‌ಸಿಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಸರತಿ ಸಾಲು ಮಾಡಿದ್ದು ಎಲ್ಲ ಭಕ್ತರಿಗೂ ದೇವರ ದರ್ಶನ ಮಾಡಲು ಅವಕಾಶವಿದೆ. ಕಟೀಲು ದೇವಸ್ಥಾನ ಹಾಗೂ ವಿವಿಧ ಕಡೆಗಳಲ್ಲಿ ಪಾನಕದ ವ್ಯವಸ್ಥೆ ಮಾಡ ಲಾಗಿದೆ. ನಾಳೆಯೂ ಸುಮಾರು 3,000 ಸ್ವಯಂಸೇವಕರು ನಾಗ ಮಂಡಲದ ವ್ಯವಸ್ಥೆಗೆ ಸಹಕರಿಸಲಿದ್ದಾರೆ.
ಫೆ. 1ರಂದು ಶನಿವಾರ ನಾಗ ಮಂಡ ಲೋತ್ಸವ ಪ್ರಯುಕ್ತವಾಗಿ ಕಟೀಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಬೆಳಗ್ಗಿನಿಂದ ರಾತ್ರಿ 11.30ರ ವರೆಗೆ (ಕಟೀಲು ರೂಟಿನಲ್ಲಿ ಸಂಚರಿಸುವ ಬಸ್‌ಗಳು) ಉಚಿತ ಬಸ್ ಸೇವೆ ನೀಡಲಾಗುವುದು ಎಂದು ಕಿನ್ನಿ ಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ.