Advertisement

ಸಾಹಿತ್ಯ ಪರಿಷತ್‌ ಜನರ ಪರಿಷತ್‌ ಆಗಿಸುವೆ

04:02 PM Nov 20, 2020 | Suhan S |

ಚಿಕ್ಕಮಗಳೂರು: ತಾವು ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಪರಿಷತ್‌ ಅಧ್ಯಕ್ಷನಾದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜನರ ಪರಿಷತ್‌ ಆಗಿ ರೂಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವುದಾಗಿ ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ, ನಾಡೋಜ ಡಾ| ಮಹೇಶ್‌ ಜೋಶಿ ತಿಳಿಸಿದರು.

Advertisement

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರದರ್ಶನ ಕೇಂದ್ರದ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ದೂರದರ್ಶನವನ್ನು ಸಮೀಪ ದರ್ಶನವನ್ನಾಗಿ ರೂಪಿಸಲಾಗಿತ್ತು. ದೂರದರ್ಶನವೀಕ್ಷಕರಿಂದ, ಕಲಾವಿದರಿಂದ ದೂರವಾದಾಗ ದೂರದರ್ಶನ ಕಲಾವಿದರನ್ನು ಹುಡುಕಿಕೊಂಡುಹೋಗುವಂತೆ ಮಾಡಿದ್ದು, ಅದೇ ರೀತಿಯಲ್ಲಿ ಸಾಹಿತ್ಯ ಜನರ ಪರಿಷತ್‌ ಆಗಿ ರೂಪಿಸುವುದೇ ನಮ್ಮ ಮುಖ್ಯ ಗುರಿ ಎಂದರು.

ಚುನಾವಣೆಯಲ್ಲಿ ಗೆದ್ದು ಸಾಹಿತ್ಯ ಪರಿಷತ್‌ ಅಧ್ಯಕ್ಷನಾದಲ್ಲಿ 5 ವರ್ಷದ ಅವಧಿಯಲ್ಲಿ ಕಾಫಿ ನಾಡಿನಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. ಇಂದು ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯರಾಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಅನೇಕರಿಗೆ ಮಾಹಿತಿ ಕೊರತೆ ಇದೆ.

ಇದನ್ನು ನಿವಾರಿಸಲು ಆನ್‌ಲೈನ್‌ನಲ್ಲಿ ಸದಸ್ಯತ್ವ ಪಡೆದುಕೊಳ್ಳಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ಸಾಹಿತ್ಯ ಪರಿಷತ್‌ 3 ಲಕ್ಷ 20 ಸಾವಿರ ಮತದಾರರನ್ನು ಹೊಂದಿದ್ದು, ಅವರ ಮಾಹಿತಿ ಅಪೂರ್ಣವಾಗಿದೆ. ತಾವು ಅಧ್ಯಕ್ಷರಾಗುತ್ತಿದ್ದಂತೆ ಇವೆಲ್ಲವನ್ನು ಪರಿಷ್ಕರಿಸಿ ಸುಧಾರಣೆ ತರಲಾಗುವುದು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷರ ಕೃಪಾಕಟಾಕ್ಷವಿಲ್ಲದೇ ತಾಲೂಕು ಅಧ್ಯಕ್ಷರಾಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ತಾಲೂಕು ಅಧ್ಯಕ್ಷರ ಆಯ್ದೆ ವಿಧಾನವನ್ನು ಬದಲಾವಣೆ ಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆನೀಡುವುದರೊಂದಿಗೆ ಹೊಸ ಮನ್ವಂತರದೊಂದಿಗೆ ಕನ್ನಡ ಆಸ್ಮಿತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಮೂಲಾಗ್ರ ಬದಲಾವಣೆಗೆ ತರುವ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ 7 ಲಕ್ಷ ಕನ್ನಡಿಗರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ 3 ಲಕ್ಷ 20 ಸಾವಿರ ಸದಸ್ಯರನ್ನು ಮಾತ್ರ ಒಳಗೊಂಡಿದೆ. ಪರಿಷತ್‌ ಸದಸ್ಯತ್ವವನ್ನು ಹೆಚ್ಚಿಸುವನಿಟ್ಟಿನಲ್ಲಿ ಹಳ್ಳಿ- ಹಳ್ಳಿಗಳಲ್ಲಿ ಅಭಿಯಾನ ಪ್ರಾರಂಭಿಸಿ ಸದಸ್ಯತ್ವ ಹೆಚ್ಚಳಕ್ಕೆ ಒತ್ತು ನೀಡಲಾಗುವುದು. ದೂರದರ್ಶನ ಸಮೀಪ ದರ್ಶನವಾದಂತೆ ಮುಂದೆ ಕನ್ನಡ ಸಾಹಿತ್ಯ ಪರಿಷತ್‌ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ಧ್ಯೇಯ ಹೊಂದಿದ್ದು,2021ರಲ್ಲಿ ನಡೆಯುವ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡಪರ ಹೋರಾಟಗಾರ ಎಲ್‌.ವಿ. ಕೃಷ್ಣಮೂರ್ತಿ,ರಾಜಕುಮಾರ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಓಂಕಾರೇಗೌಡ, ರಾಮಲಿಂಗ ಶೆಟ್ಟಿ ಇದ್ದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಸ್ವತಂತ್ರ ಸಂಸ್ಥೆ ಆಗಿದ್ದು, ಸರ್ಕಾರದೊಂದಿಗೆ ಸೌರ್ಹಾರ್ದತೆ, ಸಂಪರ್ಕ ಹೊಂದಿರಬೇಕು. ಸಾಹಿತ್ಯಪರಿಷತ್‌ ಸಾಹಿತ್ಯ, ಸಂಸ್ಕೃತಿ ಸೇರಿದಂತೆಅನೇಕ ವಿಭಾಗ ಹೊಂದಿದ್ದು, ಕನ್ನಡ ಸಾಹಿತ್ಯ ಪರಿಷತ್‌ ಶುದ್ಧೀಕರಣ, ಸರಳೀಕರಣ ಆಗಬೇಕಾದ ಅಗತ್ಯವಿದೆ.-ಡಾ| ಮಹೇಶ್‌ ಜೋಷಿ

Advertisement

Udayavani is now on Telegram. Click here to join our channel and stay updated with the latest news.

Next