Advertisement

Tennis ಆಸ್ಟ್ರೇಲಿಯನ್‌ ಓಪನ್‌ನಿಂದ ಹಿಂದೆ ಸರಿದ ನಡಾಲ್‌

11:27 PM Jan 07, 2024 | Team Udayavani |

ಮೆಲ್ಬರ್ನ್: ಬ್ರಿಸ್ಬೇನ್‌ನಲ್ಲಿ ಟೆನಿಸ್‌ ಅಂಕಣಕ್ಕೆ ಮರಳಿ, ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಸಿದ್ಧತೆಯಲ್ಲಿರುವಾಗಲೇ ರಫೆಲ್‌ ನಡಾಲ್‌ ಕಡೆಯಿಂದ ಕಹಿ ಸುದ್ದಿಯೊಂದು ಬಿತ್ತರಗೊಂಡಿದೆ. ಮರುಕಳಿಸಿದ ಕಾಲಿನ ಸ್ನಾಯು ಸೆಳೆತದಿಂದಾಗಿ ಅವರು ವರ್ಷಾ ರಂಭದ ಗ್ರ್ಯಾನ್‌ಸ್ಲಾಮ್‌ನಿಂದ ಹಿಂದೆ ಸರಿದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ಪೇನ್‌ಗೆ ಮರಳಲು ನಿರ್ಧರಿಸಿದ್ದಾರೆ.

Advertisement

2023ರ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯ ದ್ವಿತೀಯ ಸುತ್ತಿನ ಪಂದ್ಯದ ವೇಳೆ ಸೊಂಟದ ನೋವಿಗೆ ಸಿಲುಕಿದ ಬಳಿಕ ರಫೆಲ್‌ ನಡಾಲ್‌ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿದಿದ್ದರು. ಜೂನ್‌ನಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾದರು. ಚೇತರಿಸಿ ಕೊಂಡು ವರ್ಷಾರಂಭದ “ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌’ ಪಂದ್ಯಾವಳಿಯಲ್ಲಿ ಆಡ ಲಿಳಿ ದಿದ್ದರು. ಜೋರ್ಡನ್‌ ಥಾಮ್ಸನ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯ ಆಡುತ್ತಿದ್ದಾಗ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾದರು. ಹೀಗಾಗಿ ಸ್ಪೇನ್‌ಗೆ ಮರಳಲು ನಿರ್ಧರಿಸಿದ್ದಾಗಿ ನಡಾಲ್‌ ಹೇಳಿದ್ದಾರೆ. ರಫೆಲ್‌ ನಡಾಲ್‌ 2009 ಮತ್ತು 2022ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next