Advertisement
17ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿ ರುವ ರಫೆಲ್ ನಡಾಲ್ 25ನೇ ರ್‍ಯಾಂಕಿಂಗ್ ಆಟಗಾರ ಬೋಸ್ನಿಯಾದ ದಮಿರ್ ಜುಮುರ್ ಅವ ರನ್ನು 6-1, 6-3, 6-1 ಅಂತರದಿಂದ ಪರಾ ಭವಗೊಳಿಸಿದರು. ರವಿವಾರದ ಮುಖಾಮುಖೀ ಯಲ್ಲಿ ನಡಾಲ್ ಆರ್ಜೆಂಟೀನಾದ ಡೀಗೊ ಶ್ವಾರ್ಟ್ಸ್ಮನ್ ಅವರನ್ನು ಎದುರಿಸಲಿದ್ದಾರೆ.
ತವರಿನ ಭರವಸೆಯ ಆಟಗಾರ ನಿಕ್ ಕಿರ್ಗಿ ಯೋಸ್ ಭಾರೀ ಹೋರಾಟದ ಬಳಿಕ ಫ್ರಾನ್ಸ್‌ನ ಜೋ ವಿಲ್‌ಫ್ರೆಡ್ ಸೋಂಗ ಅವರನ್ನು 7-6 (7-5), 4-6, 7-6 (8-6), 7-6 (7-5) ಅಂತರದಿಂದ ಹಿಮ್ಮೆಟ್ಟಿಸಿ ನಿಟ್ಟುಸಿರೆಳೆದರು. ವಿಶ್ವದ ನಂ.3 ಆಟಗಾರ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ರಷ್ಯದ “ರೈಸಿಂಗ್ ಸ್ಟಾರ್’ ಆಂಡ್ರೆ ರುಬ್ಲೆವ್ ವಿರುದ್ಧ 4 ಸೆಟ್‌ಗಳ ಹೋರಾಟ ನಡೆಸಿ 6-3, 4-6, 6-4, 6-4ರಿಂದ ವಿಜಯಿಯಾದರು. ಡಿಮಿಟ್ರೋವ್ ಅವರಿನ್ನು ನಿಕ್ ಕಿರ್ಗಿಯೋಸ್ ಸವಾಲನ್ನು ಎದುರಿಸಬೇಕಿದೆ.
Related Articles
Advertisement
ಕಳೆದ ವರ್ಷ ಯುಎಸ್ ಓಪನ್ ಸೆಮಿಫೈನಲ್ ತನಕ ಬಂದಿದ್ದ ಸ್ಪೇನಿನ 10ನೇ ಶ್ರೇಯಾಂಕಿತ ಆಟಗಾರ ಪಾಬ್ಲೊ ಕರೆನೊ ಬುಸ್ಟ ಲಕ್ಸೆಂಬರ್ಗ್‌ನ ಗಿಲ್ಲೆಸ್ ಮುಲ್ಲರ್ ಅವರನ್ನು ಸೋಲಿಸಿ ಮುನ್ನಡೆ ದರು. ಬುಸ್ಟ ಗೆಲುವಿನ ಅಂತರ 7-6 (7-4), 4-6, 7-5, 7-5.