Advertisement

ನಾಡ ಕಚೇರಿಯಲ್ಲೇ ಸೌಲಭ್ಯ ಪಡೆಯಿರಿ

12:58 PM Jan 15, 2022 | Team Udayavani |

ಪಿರಿಯಾಪಟ್ಟಣ: ಜನರು ತಮ್ಮ ಸಮಸ್ಯೆಗಳ ದೈನಂದಿನ ಕೆಲಸ ಕಾರ್ಯಗಳಿಗೆ ತಾಲೂಕು ಕೇಂದ್ರಗಳಿಗೆ ಹೋಗಿ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಅಧಿಕಾರವಿಕೇಂದ್ರಿಕರಣ ಮಾಡಿ ನಾಡ ಕಚೇರಿಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಕೆ.ಮಹದೇವ್‌ ತಿಳಿಸಿದರು.

Advertisement

ತಾಲೂಕಿನ ರಾವಂದೂರು ಹೋಬಳಿಕೇಂದ್ರದಲ್ಲಿ ಶುಕ್ರವಾರ ನೂತನ ನಾಡ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ತಮ್ಮ ದೈನಂದಿನಕೆಲಸವನ್ನು ಬಿಟ್ಟು ತಾಲೂಕು ಕೇಂದ್ರಗಳಿಗೆಹೋಗುವುದನ್ನು ತಪ್ಪಿಸಲು ಹೋಬಳಿ ಕೇಂದ್ರಗಳಲ್ಲಿ ನಾಡಕಚೇರಿ ಸ್ಥಾಪಿಸುವಮೂಲಕ ಕಂದಾಯ ಇಲಾಖೆಗೆ ಸೇರುವಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜನರಿಗೆ ತುಂಬಾ ಅನುಕೂಲವಾಗಿದೆ. ಈ ಕೇಂದ್ರಗಳಲ್ಲಿಸಾರ್ವಜನಿಕರಿಗೆ ಬೇಕಾಗುವ ತಮ್ಮ ಆರ್‌ಟಿಸಿ ಪಹಣಿ, ಜಾತಿ ಮತ್ತು ಆದಾಯ ದೃಢೀಕರಣಪತ್ರ, ಎಂಆರ್‌, ವಿಧವಾ ವೇತನ, ಹೀಗೆ ಹಲವಾರು ರೀತಿಯ ಸರ್ಕಾರಿ ಸೇವೆಗಳುಕಡಿಮೆ ಸಮಯದಲ್ಲಿ ಹಾಗೂ ಹತ್ತಿರದಲ್ಲಿಯೇ ದೊರೆಯುತ್ತವೆ ಎಂದರು.

ಸುಸಜ್ಜಿತ ಕಟ್ಟಡ: 35 ವರ್ಷಗಳಿಂದ ತಾಲೂಕಿನ ನಾಡಕಚೇರಿಗಳು ಖಾಸಗಿಕಟ್ಟಡದಲ್ಲಿ ಬಾಡಿಗೆ ನೀಡಿ ಕಚೇರಿ ಕೆಲಸಗಳನ್ನುನಡೆಸುತ್ತಿದ್ದು, ಇದನ್ನು ಮನಗಂಡು ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನ ಎಲ್ಲಾ ನಾಡ ಕಚೇರಿಗಳಿಗೂ ಸುಸಜ್ಜಿತ, ಸುಂದರ ಕಟ್ಟಡಗಳನ್ನು ಕಟ್ಟಿಸಿ ಕೊಡುವ ಮೂಲಕ ಸಾರ್ವಜನಿಕರಿಗೆ ಇನ್ನು ಉತ್ತಮ ರೀತಿಯಲ್ಲಿ ಕಂದಾಯ ಇಲಾಖೆಯು ಕಾರ್ಯನಿರ್ವಹಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸ್ವಂತ ಕಟ್ಟಡ: ತಹಶೀಲ್ದಾರ್‌ ಚಂದ್ರಮೌಳಿ ಮಾತನಾಡಿ, ಅಧಿಕಾರ ವಿಕೇಂದ್ರಿಕರಣ ಗೊಳಿಸಿದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಡೆಯುತ್ತಿದ್ದ ಸರ್ಕಾರಿ ಕೆಲಸಗಳು ಹೋಬಳಿ ಕೇಂದ್ರಗಳಲ್ಲಿ ನಡೆಯುವಂತಾಗಿದ್ದು, ಹಲವಾರು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಕೆಲಸಕಾರ್ಯಗಳು ನಡೆಯುತ್ತಿದ್ದವು. ಎಲ್ಲಾ ಹೋಬಳಿ ಕೇಂದ್ರದ ನಾಡಕಚೇರಿಗಳು ಸ್ವಂತ ಕಟ್ಟಡಗಳನ್ನು ಹೊಂದಲು ಶಾಸಕರ ಇಚ್ಛಾಶಕ್ತಿಯೇ ಮುಖ್ಯ ಕಾರಣವಾಗಿದೆ ಎಂದು ಶ್ಲಾಘಿಸಿದರು.

Advertisement

ಮುಖಂಡ ಆರ್‌.ಎಲ್ ಮಣಿ ಮಾತನಾಡಿ, ರಾವಂದೂರು ಹೋಬಳಿ ಕೇಂದ್ರವು ಸರ್ವತೋಮುಖ ಅಭಿವೃದ್ಧಿಗೆ ಶಾಸಕರಿಗೆ ಬೆಂಬಲ ನೀಡಬೇಕು ಎಂದರು.

ಕಾರ್ಯಕ್ರಮದ ನಿಮಿತ್ತ ಕಂದಾಯ ಇಲಾಖೆಯ ವತಿಯಿಂದ 450ಕ್ಕೂ ಹೆಚ್ಚುವಿಧವೆ, ಅಂಗವಿಕಲ, ವೃದ್ಧಾಪ್ಯ ವೇತನಗಳ ಮಂಜೂರಾತಿ ಪತ್ರವನ್ನು ಫ‌ಲಾನುಭವಿಗಳಿಗೆ ನೀಡಲಾಯಿತು. ಇದೇ ದಿನ ರಾವಂದೂರು ಪಬ್ಲಿಕ್‌ ಶಾಲೆಯ 2 ಕೊಠಡಿ ಕಾಮಗಾರಿ ಹಾಗೂ ಎನ್‌.ಶೆಟ್ಟಹಳ್ಳಿ ಶಾಲೆಯ ನೂತನಶಾಲಾ ಕಟ್ಟಡವನ್ನು ಶಾಸಕರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಆರ್‌. ಎಸ್‌.ವಿಜಯುRಮಾರ್‌, ಉಪಾಧ್ಯಕ್ಷೆನೇತ್ರಾವತಿ, ತಾಲೂಕು ಜೆಡಿಎಸ್‌ ಅಧ್ಯಕ್ಷಅಣ್ಣಯ್ಯಶೆಟ್ಟಿ, ಇಒ ಕೃಷ್ಣಕುಮಾರ್‌,ಉಪತಹಶೀಲ್ದಾರ್‌ ಕೆ.ಶುಭಾ, ಕ್ಷೇತ್ರ

ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ತಾಪಂಮಾಜಿ ಉಪಾಧ್ಯಕ್ಷ ರಘುನಾಥ್‌, ಗ್ರಾಪಂಸದಸ್ಯರಾದ ಡಿ.ಜೆ ಕುಮಾರ್‌, ಭಾರತಿ, ಶಿವಕುಮಾರಿ, ಪ್ರಭು, ನಂದೀಶ್‌, ಮಲ್ಲೇಶ್‌, ಮಹದೇವ, ಮುಖಂಡರಾದ ಎಚ್‌.ಡಿ.ವಿಜಯ್, ಕುಮಾರ್‌, ಶಿವದೇವಪ್ಪ, ಆರ್‌.ವಿ.ನಂದೀಶ್‌, ಶಿವಣ್ಣ, ರಾಮಚಂದ್ರ, ಕೆ.ಆರ್‌.ಮಹದೇವ್‌, ಪ್ರಾಂಶುಪಾಲ ಕೆ.ಎಂ. ಶಿವಶಂಕರ್‌, ಉಪಪ್ರಾಂಶುಪಾಲ ಸುರೇಶ್‌, ಪಿಡಿಒ ಮಲ್ಲೇಶ್‌, ಆರ್‌ಐ ಶ್ರೀಧರ್‌, ಎಇಇ ಜಯಂತು, ಮಂಜುನಾಥ್‌, ಎಂಜಿನಿಯರ್‌ಗಳಾದ ರಕ್ಷಿತ್‌, ದಿನೇಶ್‌ ಮತ್ತಿತರರಿದ್ದರು.

ಸಮಸ್ಯೆ ಪರಿಹಾರಕ್ಕೆ ನನ್ನನ್ನೇ ಸಂಪರ್ಕಿಸಿ: ಶಾಸಕ :

ನಾನು ವಿಧಾನಸೌಧಕ್ಕೆ ನಮ್ಮ ತಾಲೂಕಿನ ಅಭಿವೃದ್ಧಿ ಕೆಲಸ ಕೇಳಲು ತಾಲೂಕಿನ ಒಬ್ಬ ಸೇವಕನಾಗಿ ಹೋಗಿ ಅನುದಾನ ತಂದು ತಾಲೂಕಿನ ಪ್ರಗತಿಗೆ ಶ್ರಮಿಸುತ್ತಿದ್ದೇನೆ. ತಾಲೂಕಿನ ಯಾವುದೇ ಕೆಲಸ ಕಾರ್ಯಗಳಾಗಬೇಕಾದರೂ ದಲ್ಲಾಳಿಗಳ ಮುಖಾಂತರ ಹೋಗಿ ಹಣ ನೀಡದೇ, ನೇರವಾಗಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳು ಅಥವಾ ನನ್ನ ಹತ್ತಿರ ಬಂದು ಬಗೆಹರಿಸಿಕೊಳ್ಳಿ ಎಂದು ಶಾಸಕ ಕೆ.ಮಹದೇವ್‌ ಮನವಿ ಮಾಡಿದರು. ನಾನು ರಾಜಕೀಯ ನಡೆಸುವುದಕ್ಕಿಂತ ಮೊದಲು ನನ್ನ ಅಕ್ಕಪಕ್ಕದ ಬೀದಿಯವರಿಗೆ ವಿಧವಾವೇತನ, ವೃದ್ಧಾಪ್ಯವೇತನ ಮಾಡಿಸುವ ಮೂಲಕ ಸಾರ್ವಜನಿಕ ಕೆಲಸ ಮಾಡಿಸಿದ್ದರಿಂದ ನನ್ನನ್ನು ಮೊದಲ ಬಾರಿಗೆ ಜನರು ಪಟ್ಟಣ ಪಂಚಾಯಿತಿ ಸದಸ್ಯನಾಗಿ ಆಯ್ಕೆ ಮಾಡಿದ್ದರು. ನನ್ನ ಜನಪರ ಕಾಳಜಿಯನ್ನು ಮನಗಂಡು ಜನರು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next