Advertisement

ಪಾದಯಾತ್ರೆಗೆ ಆಗಮಿಸಿ “ಕೈ’ಬಲಪಡಿಸಿ

03:00 PM Sep 25, 2022 | Team Udayavani |

ಕೆ.ಆರ್‌.ಪೇಟೆ: ಅ.3 ರಿಂದ 06ರವರೆಗೆ ಮಂಡ್ಯ ಜಿಲ್ಲೆಯಲ್ಲಿ ರಾಹುಲ್‌ ಗಾಂಧಿ ಪಾದಯಾತ್ರೆ ನಡೆಸಲಿದ್ದು ಭಾರತ್‌ ಜೋಡೋ ಯಾತ್ರೆಗೆ ಜನರನ್ನು ಸಂಘಟಿಸಿ ಕರೆತರುವ ಸಂಬಂಧ ಕೆ.ಆರ್‌.ಪೇಟೆ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಸಮಿತಿ ಅಧ್ಯಕ್ಷ ಎನ್‌.ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು.

Advertisement

ಈ ವೇಳೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳಲ್ಲಿ ಗೊಂದಲ ಸಹಜ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಆಗುವ ಗೊಂದಲಗಳಿಗೆ ಕಾರ್ಯಕರ್ತರು ಹೊಣೆಯಲ್ಲ. ಕಾರ್ಯಕರ್ತರು ಪಕ್ಷದ ಶಿಸ್ತಿನ ಸಿಪಾಯಿಗಳಾಗಬೇಕು. ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ತಿಳಿಸಿದರು.

ಲಿಖಿತವಾಗಿ ನೀಡಿ: ಪಕ್ಷದ ತಾಲೂಕು ಘಟಕಗಳ ಅಧ್ಯಕ್ಷರಿಗೆ ಕಠಿಣ ಸಂದೇಶ ನೀಡಿದ ಎನ್‌.ಚಲುವರಾಯಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಮನಸ್ಸಿಗೆ ಬಂದಂತೆ ಸಭೆಯಲ್ಲಿ ಮಾತನಾಡಬಾರದು. ಪಕ್ಷವಿದ್ದರೆ ಶಾಸಕರು ಹುಟ್ಟಿಕೊಳ್ಳುತ್ತಾರೆ. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಿಂದ ಯಾರಿಗೆ ಟಿಕೆಟ್‌ ನೀಡಬೇಕೆಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ರ ನಾಯಕತ್ವದಲ್ಲಿ ಕುಳಿತು ಒಮ್ಮತದ ಅಭ್ಯರ್ಥಿಯ ಹೆಸರನ್ನು ನಿರ್ಣಯಿಸಿ ಲಿಖೀತವಾಗಿ ನೀಡಿ. ಅವರಿಗೇ ಪಕ್ಷ ಟಿಕೆಟ್‌ ನೀಡುತ್ತದೆ. ಇಲ್ಲದಿದ್ದರೆ ಪಕ್ಷದ ಹೈಕಮಾಂಡ್‌ ನಿರ್ಣಯಕ್ಕೆ ಎಲ್ಲರೂ ತಲೆಬಾಗಲೇಬೇಕು ಎಂದು ತಿಳಿಸಿದರು.

ಭಿನ್ನಮತ ಬೇಡ: ನಾನು ಯಾರನ್ನೂ ಲಘುವಾಗಿ ನೋಡುವುದಿಲ್ಲ. ಜನ ಬೆಂಬಲವಿದ್ದವರನ್ನು ಬೆಂಬಲಿಸುತ್ತೇನೆ. ಕಾರ್ಯಕರ್ತರ ನಡುವೆ ಮುಖಂಡರು ಭಿನ್ನಮತ ಸೃಷ್ಟಿಸಬಾರದು ಎಂದು ಸಲಹೆ ನೀಡಿದರು.

ಜವಾಬ್ದಾರಿ ಇರಲಿ: ರಾಹುಲ್‌ ಗಾಂಧಿ ಅವರ ಪಾದಯಾತ್ರೆಗೆ ತಾಲೂಕಿನಿಂದ ಕನಿಷ್ಠ 5 ಸಾವಿರ ಜನ ಭಾಗವಹಿಸಬೇಕು. ಇದೊಂದು ಐತಿಹಾಸಿಕ ಪಾದಯಾತ್ರೆಯಾಗಿದ್ದು ಜಿಲ್ಲೆಯಲ್ಲಿ ಪಕ್ಷದ ಸಂಘಟನಾ ಶಕ್ತಿ ಹೆಚ್ಚಿಸಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು ಉತ್ಸಾಹದಿಂದ ಬೆರೆತು ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಹೊತ್ತುಕೊಳ್ಳುವಂತೆ ಮನವಿ ಮಾಡಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್‌.ಎನ್‌.ರವೀಂದ್ರ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್‌, ಬಿ.ಪ್ರಕಾಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್‌, ಕಿಕ್ಕೇರಿ ಸುರೇಶ್‌, ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಕಾಂಗ್ರೆಸ್‌ ಮುಖಂಡರು, ಸಮಾಜ ಸೇವಕರಾದ ಬೂಕನಕೆರೆ ವಿಜಯ್‌ ರಾಮೇಗೌಡ, ತಾಲೂಕು ಕಾಂಗ್ರೆಸ್‌ ಉಸ್ತುವಾರಿ ಚಿನಕುರಳಿ ರಮೇಶ್‌, ಜಿಪಂ ಮಾಜಿ ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು, ಕೊಡಗಹಳ್ಳಿ ಮಂಜೇಗೌಡ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷರಾದ ಅಗಸರಹಳ್ಳಿ ಗೋವಿಂದರಾಜು, ಹರಳಹಳ್ಳಿ ವಿಶ್ವನಾಥ್‌, ಮನ್‌ಮುಲ್‌ ನಿರ್ದೇಶಕ ಡಾಲು ರವಿ, ಪುರಸಭಾ ಸದಸ್ಯರಾದ ಕೆ.ಸಿ.ಮಂಜುನಾಥ್‌, ಡಿ.ಪ್ರೇಮಕುಮಾರ್‌, ಕೆ.ಆರ್‌. ರವೀಂದ್ರಬಾಬು, ರಾಜಯ್ಯ, ಶಿವಣ್ಣ, ಬಸ್ತಿರಂಗಪ್ಪ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next