Advertisement

ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ನೇಮಕ ಮಾನ್ಯವಲ್ಲ: ಹೈಕೋರ್ಟ್

01:26 PM Aug 17, 2022 | Team Udayavani |

ಚೆನ್ನೈ: ಅಧಿಕಾರದ ಜಂಗೀಕುಸ್ತಿಯಲ್ಲಿ ಎಐಎಡಿಎಂಕೆ ಮುಖಂಡ ಇ.ಪಳನಿಸ್ವಾಮಿಗೆ ಭಾರೀ ಹಿನ್ನಡೆಯಾಗಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ನೇಮಕ ಮಾನ್ಯವಲ್ಲ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ (ಆಗಸ್ಟ್ 17) ತೀರ್ಪು ನೀಡಿದೆ.

Advertisement

ಇದನ್ನೂ ಓದಿ:ಚುನಾವಣೆಯತ್ತ ಚಿತ್ತ: ಆಗಸ್ಟ್ 28ರಿಂದ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಪ್ರವಾಸ

ಪಕ್ಷದ ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಮುಖಂಡರಾದ ಇ.ಪಳನಿಸ್ವಾಮಿ ಮತ್ತು ಒ ಪನ್ನೀರ್ ಸೆಲ್ವಂ ನಡುವೆ ತೀವ್ರ ಜಟಾಪಟಿ ನಡೆಯುತ್ತಿರುವ ನಡುವೆಯೇ ಈ ತೀರ್ಪು ಹೊರಬಿದ್ದಿದೆ ಎಂದು ವರದಿ ತಿಳಿಸಿದೆ.

ಪಕ್ಷದ ನಾಯಕತ್ವದ ವಿಚಾರದ ಕುರಿತಂತೆ ಜೂನ್ 23ರ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿದೆ. ಅಂದರೆ ಪಳನಿಸ್ವಾಮಿ ಅವರ ನೇಮಕದ ಮೊದಲು ಎಐಎಡಿಎಂಕೆ ಜಂಟಿ ನಾಯಕತ್ವದಲ್ಲಿತ್ತು. ಪನ್ನೀರ್ ಸೆಲ್ವಂ ಸಂಯೋಜಕರಾಗಿದ್ದು, ಪಳನಿಸ್ವಾಮಿ ಉಪಾಧ್ಯಕ್ಷರಾಗಿದ್ದರು.

ಪಳನಿಸ್ವಾಮಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ ಪಕ್ಷದ ಸಾಮಾನ್ಯ ಮಂಡಳಿ ಸಭೆಯು ಕಾನೂನುಬಾಹಿರವಾಗಿದೆ ಎಂದು ಒ ಪನ್ನೀರ್ ಸೆಲ್ವಂ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಅಲ್ಲದೇ ಪಳನಿಸ್ವಾಮಿ ಕರೆದ ಸಾಮಾನ್ಯ ಸಭೆಯೂ ಕೂಡಾ ಪಕ್ಷದ ಬೈಲಾವನ್ನು ಉಲ್ಲಂಘಿಸಿದೆ. ಇಂತಹ ಸಭೆಯಗಳನ್ನು ಜಂಟಿಯಾಗಿಯೇ ನಡೆಸಬೇಕು ಎಂಬುದು ನಿಯಮವಾಗಿದೆ ಎಂದು ಉಲ್ಲೇಖಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next