Advertisement

Mysuru Dasara;ಅನುದಾನ ಮತ್ತು ವೆಚ್ಚದ ವಿವರಗಳ ಪಟ್ಟಿ ಬಿಡುಗಡೆ

05:23 PM Dec 02, 2023 | Team Udayavani |

ಮೈಸೂರು: ದಸರಾ ಮಹೋತ್ಸವದ ಅನುದಾನ ಮತ್ತು ವೆಚ್ಚದ ವಿವರಗಳನ್ನೊಳಗೊಂಡ ಪಟ್ಟಿಯನ್ನು ಕಡೆಗೂ ಜಿಲ್ಲಾಡಳಿತ ಶನಿವಾರ ಬಿಡುಗಡೆ ಮಾಡಿದೆ.

Advertisement

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸುದ್ದಿಗೋಷ್ಠಿ ನಡೆಸಿ ಅನುದಾನ ಮತ್ತು ವೆಚ್ಚದ ವಿವರಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಆವರಿಸಿರುವ ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಹೆಸರಲ್ಲಿ ದುಂದು ವೆಚ್ಚ ಮಾಡಿರುವುದು ಕಂಡು ಬಂದಿದ್ದು, ಈ ಬಾರಿ 29 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಲಾಗಿದೆ. 2022ನೇ ಸಾಲಿನಲ್ಲಿ ಒಟ್ಟು 26,08,88,819 ರೂ. ಅನುದಾನ ಸಿಕ್ಕಿತ್ತು. ಒಟ್ಟು 28,74,49,058 ರೂ. ವೆಚ್ಚವಾಗಿತ್ತು.

2023ನೇ ಸಾಲಿನಲ್ಲಿ ಒಟ್ಟಾರೆಯಾಗಿ 29,26,65,000 ರೂಪಾಯಿ ಅನುದಾನ ಲಭ್ಯವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ.ಅನುದಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ರೂ.ಅನುದಾನ, ಪ್ರಾಯೋಜಕತ್ವದಿಂದ 2,25,70,000 ರೂ., ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 1,19,95,000 ರೂ. ಸಂಗ್ರಹವಾಗಿದೆ. ಆಹಾರ ಮೇಳದಿಂದ 81 ಲಕ್ಷ ರೂ.ರಾಜಸ್ವ ಸ್ವೀಕೃತಿಯಾಗಿದೆ.ಒಟ್ಟು 29,25,22,049 ರೂ.ವೆಚ್ಚವಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next