Advertisement
ಮಹಾನಗರ ಪಾಲಿಕೆಯಲ್ಲಿದ್ದ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆ ಅಂತ್ಯಗೊಂಡಿದ್ದು, ಚುನಾವಣೆ ಕಣದ ಅಂತಿಮ ಹಂತದಲ್ಲಿ ಕಾಂಗ್ರೆಸ್ ಗೆ ಜೆಡಿಎಸ್ ಕೈಕೊಟ್ಟ ಕಾರಣ ಕಾಂಗ್ರೆಸ್ ಹಾಗೂ ಮೈತ್ರಿ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದ ರುಕ್ಮಿಣಿ ಮಾದೇ ಗೌಡ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಈ ಮೇಯರ್ ಚುನಾವಣೆ ನಡೆದಿದೆ.
Related Articles
Advertisement
ಸಮ್ಮಿಶ್ರ ಆಡಳಿತದಿಂದ ಮೇಯರ್ ಪಟ್ಟದಿಂದ ವಂಚಿತವಾಗಿದ್ದ ಬಿಜೆಪಿ, ಮೈಸೂರು ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿ ಬಿಜೆಪಿ ಒಲಿದ ಮೇಯರ್ ಪಟ್ಟ ಲಭಿಸಿದೆ.
ಅತೀ ಹೆಚ್ಚು ಸದಸ್ಯರು ಗೆದ್ದರೂ ಮೇಯರ್ ಸ್ಥಾನ ಸಿಕ್ಕಿರಲಿಲ್ಲ. ಆದರೇ, ಈ ಚುನಾವಣೆಯಲ್ಲಿ ಗೆದ್ದು ನಾಲ್ಕೂವರೆ ತಿಂಗಳ ಅವಧಿಗೆ ಬಿಜೆಪಿ ಮೇಯರ್ ಸ್ಥಾನ ಪಡೆದಿದೆ.
ಇನ್ನು, ಮುಂದಿನ ಎರಡು ಅವಧಿಗೂ ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಬಿಜೆಪಿ ಒಪ್ಪಂದ ಮಾಡಿಕೊಂಡಿದ್ದು, ಪಾಲಿಕೆಯ 23 ನೇ ಅವಧಿಗೆ 35ನೇ ಮೇಯರ್ ಆಗಿ ಬಿಜೆಪಿಯ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆ ವೇಳೆ ಜೆಡಿಎಸ್ ನಡೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿ ಅರ್ಧಕ್ಕೆ ಹೊರ ನಡೆದಿದ್ದಾರೆ.
ಇದನ್ನೂ ಓದಿ : ಡಬಲ್ ಡೋಸ್ ವ್ಯಾಕ್ಸಿನ್ ಪಡೆದಿದ್ದರೂ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ತಡೆ : ಆಕ್ರೋಶ