Advertisement

ಮೈಷುಗರ್‌ ಪುನಾರಂಭ: ಮತ್ತೆ ಗೊಂದಲ

09:00 PM Jul 16, 2021 | Team Udayavani |

ಮಂಡ್ಯ: ಮೈಷುಗರ್‌ ಕಾರ್ಖಾನೆ ಪುನರಾಂಭ ವಿಚಾರಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಸರ್ಕಾರವೇನಡೆಸಲಿದೆ ಎಂಬ ಭರವಸೆ ಸಿಗುತ್ತಿದ್ದಂತೆ ಮತ್ತೆಗೊಂದಲಶುರುವಾಗಿದ್ದು,ಯಾವುದೇ ಸ್ಪಷ್ಟಘೋಷಣೆ ಇಲ್ಲದಿರುವುದರಿಂದ ರೈತರು ಆತಂಕ ಪಡುವಂತಾಗಿದೆ.ಕಳೆದ ವಾರ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿನೇತೃತ್ವದ ಜಿಲ್ಲೆಯ ಜನಪ್ರತಿನಿಧಿಗಳ ತಂಡ ಭೇಟಿ ನೀಡಿಸರ್ಕಾರಿಸ್ವಾಮ್ಯದಲ್ಲಿಯೇನಡೆಸುವಂತೆಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿತ್ತು.

Advertisement

ಆಗ ಸಿಎಂ ಯಡಿಯೂರಪ್ಪ ಖಾಸಗಿಯವರಿಗೆಗುತ್ತಿಗೆ ನೀಡುವುದಿಲ್ಲ. ಸರ್ಕಾರವೇನಡೆಸಲಿದೆ ಎಂದು ಭರವಸೆ ನೀಡಿದ್ದಾರೆಎಂದು ತಿಳಿಸಲಾಗಿತ್ತು. ಇದರಿಂದಮಂಡ್ಯ ಜಿಲ್ಲಾ ರೈತ ಹಿತರಕ್ಷಣಾಸಮಿತಿ ಒಂದು ಮೆಟ್ಟಿಲು ಗೆಲುವುಕಂಡಿದ್ದೇವೆ ಎಂದುನಿರಾಳರಾಗಿದ್ದರು.

ಸಚಿವರ ದ್ವಂದ್ವ ಹೇಳಿಕೆ: ಆದರೆ, ಆನಂತರ ಬಂದ ಸಚಿವರ ದ್ವಂದ್ವಹೇಳಿಕೆಗಳಿಂದಮತ್ತೆಗೊಂದಲಪ್ರಾರಂಭವಾಗಿದೆ.ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹಾಗೂಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರಹೇಳಿಕೆಗಳುಜಿಲ್ಲೆಯ ರೈತರ ನಿರೀಕ್ಷೆಹುಸಿಯಾಗುವಂತೆಮಾಡಿದೆ. ಈ ನಡುವೆ ಹೋರಾಟಗಾರರು ಈ ಗೊಂದಲವನ್ನು ನಿವಾರಿಸಲು ಪ್ರಯತ್ನ ನಡೆಸುತ್ತಲೇಇದ್ದಾರೆ. ಆದರೆ ಇನ್ನೂ ಫಲಪ್ರದವಾಗಿಲ್ಲ.

ಅಧಿಕೃತ ಘೋಷಣೆಯಾಗದ ಭರವಸೆ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸರ್ಕಾರಿಸ್ವಾಮ್ಯದಲ್ಲಿಯೇ ನಡೆಸಲು ಕ್ರಮ ವಹಿಸಲಾಗುವುದುಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿನಿಯೋಗಕ್ಕೆ ತಿಳಿಸಿದ್ದರು. ಭರವಸೆ ಕೊಟ್ಟು ವಾರಕಳೆದರೂ ಅಧಿಕೃತ ಘೋಷಣೆ ಮಾತ್ರ ಆಗಿಲ್ಲ.ಇದರಿಂದ ಹೋರಾಟಗಾರರು, ಕಬ್ಬುಬೆಳೆಗಾರರಲ್ಲಿ ಗೊಂದಲವಿದ್ದು,ಆತಂಕ ಹೆಚ್ಚುವಂತೆ ಮಾಡಿದೆ.

ಒಗ್ಗಟ್ಟಾದ ಸಂಘಟನೆಗಳು:ಸರ್ಕಾರ ಖಾಸಗಿಯವರಿಗೆಗುತ್ತಿಗೆ ನೀಡಲುಮುಂದಾದಾಗ ಎಲ್ಲಸಂಘಟನೆಗಳು ಒಗ್ಗಟ್ಟುಪ್ರದರ್ಶನಕ್ಕೆ ಮುಂದಾಗಿವೆ.ಈಗಾಗಲೇ ಎಲ್ಲ ಸಂಘಟನೆಗಳುಸೇರಿ 40 ವರ್ಷಗಳ ಸುದೀರ್ಘ‌ ಅವಧಿಗೆಗುತ್ತಿಗೆ ನೀಡುವ ಪದ್ಧತಿ ಕೈಬಿಡಬೇಕು ಎಂದುಒತ್ತಾಯಿಸಿವೆ. ಇದಕ್ಕೂ ಮೊದಲು ಸರ್ಕಾರ ಜಿಲ್ಲೆಯಸಂಘಟನೆಗಳು ಹೋರಾಟಗಾರರಲ್ಲಿಯೇಗೊಂದಲವಿದೆ.ಯಾವುದೇ ಸ್ಪಷ್ಟ ನಿಲುವು ತಾಳುತ್ತಿಲ್ಲ ಎಂದುಸಂಘಟನೆಗಳ ವಿರುದ್ಧವೇ ಬೊಟ್ಟು ಮಾಡಿತ್ತು.ಕೆಲವರು ಒ ಅಂಡ್‌ ಎಂ ಎಂದರೆ, ಕೆಲವುಸಂಘಟನೆಗಳು ಸರ್ಕಾರವೇ ನಡೆಸಬೇಕು ಎಂದು ಹಠಹಿಡಿದಿದ್ದವು. ಈ ವಾದವನ್ನೇ ಮುಂದಿಟ್ಟು ಕೊಂಡಸರ್ಕಾರ ಖಾಸಗಿಯವರಿಗೆ ಗುತ್ತಿಗೆ ನೀಡಲು ಆದೇಶಹೊರಡಿಸಿತ್ತು. ಇದನ್ನು ತಡೆಯಲು ಎಲ್ಲಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿವೆ.

Advertisement

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next