ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಕೆಲಸನಿರ್ವಹಿಸುತ್ತಿರುವ ನೌಕರರಿಗೆ ವಿಆರ್‌ಎಸ್‌ಗೆ ಸಹಿ ಹಾಕುವಂತೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 144 ಮಂದಿ ನೌಕರರು ಈಗಾಗಲೇ ಸ್ವಯಂನಿವೃತ್ತಿ ಪಡೆದಿದ್ದಾರೆ. ಇನ್ನುಳಿದ 116 ಮಂದಿನೌಕರರು ಇನ್ನೂ ಕೆಲಸ ಮಾಡುವಸಾಮರ್ಥ್ಯವಿದೆ. ಈಗ ಅಧಿಕಾರಿಗಳ ಒತ್ತಡಕ್ಕೆವಿಆರ್‌ಎಸ್ ತೆಗೆದುಕೊಂಡರೆ ಮುಂದೆ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
23 ಕೋಟಿ ರೂ. ಬಿಡುಗಡೆ: ವಿಆರ್‌ಎಸ್‌ಗಾಗಿ ಸರ್ಕಾರದಿಂದ 23 ಕೋಟಿ ರೂ. ಬಿಡು ಗಡೆಯಾಗಿದ್ದು, ನೌಕರರ ಕೆಲಸ ನಿರ್ವಹಿಸಿದ ವರ್ಷಗಳ ಆಧಾರದ ಮೇಲೆ ಸ್ವಯಂ ನಿವೃತ್ತಿ ನೀಡಲಾಗುತ್ತಿದೆ. ಈ ನಿವೃತ್ತಿ ಸೌಲಭ್ಯದ ಹಣಕಡಿಮೆ ಸಿಗುವುದರಿಂದ ಮುಂದಿನ ಜೀವನ ಕಷ್ಟವಾಗಲಿದೆ. ಉದ್ಯೋಗವಿಲ್ಲದೆ ಪರಿತಪಿಸ ಬೇಕಾಗುತ್ತದೆ. ಬಂದಿರುವ ಹಣವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಲು ಸಾಧ್ಯವಾಗದ ಹಿನ್ನೆಲೆ ಹಾಗೂ ಕಾರ್ಖಾನೆಯನ್ನು ಗುತ್ತಿಗೆ ನೀಡುತ್ತಿರುವುದರಿಂದ ಅಧಿಕಾರಿಗಳು ವಿಆರ್‌ಎಸ್‌ಗೆ ಸಹಿ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ನೌಕರರೊಬ್ಬರು ತಿಳಿಸಿದರು.
ವೇತನವೂ ವಿಳಂಬ: ಕಾರ್ಖಾನೆ ಗುತ್ತಿಗೆ ನೀಡಲು ಎಲ್ಲಾ ರೀತಿಯ ಯೋಜನೆ ಸಿದ್ಧವಾಗುತ್ತಿದೆ. ಇದರಿಂದ ಕೆಲಸ ಮಾಡುತ್ತಿರುವ ನೌಕರರಿಗೆ ವಿಆರ್‌ಎಸ್ ಕೊಡಲು ಮುಂದಾಗಿದೆ. ವಿಆರ್‌ಎಸ್ ಪಡೆಯದ ನೌಕರರಿಗೆ ವೇತನ ವಿಳಂಬ ಮಾಡುವ ಮೂಲಕ ತೊಂದರೆ ನೀಡಲಾಗುತ್ತಿದೆ. ವಿಆರ್‌ಎಸ್ ಪಡೆದುಕೊಂಡರೆ ವೇತನ ಪಾವತಿಸ ಲಾಗುವುದು ಎಂದು ಹೇಳುತ್ತಾರೆಂದು ನೌಕರರು ಆರೋಪಿಸಿದ್ದಾರೆ.
ಅಧಿಕಾರಿಗಳಿಂದ ನೌಕರರಿಗೆ ಬೆದರಿಕೆ ತಂತ್ರ : ವಿಆರ್‌ಎಸ್ ಪಡೆಯದ ನೌಕರರಲ್ಲಿ ಈಗಾಗಲೇ 35 ಮಂದಿಯನ್ನು ಭದ್ರತೆಗೆ ನಿಯೋಜಿಸಿಕೊಳ್ಳಲಾಗಿದೆ. ಸ್ವಯಂ ನಿವೃತ್ತಿಗೆ ಸಹಿ ಹಾಕದಿದ್ದರೆ ಬೆಂಗಳೂರಿನ ಪ್ರಧಾನ ಕಚೇರಿ ಸೇರಿದಂತೆ ಕಾರ್ಖಾನೆಯ ವಿವಿಧ ವಿಭಾಗಗಳಿಗೆ ನಿಯೋಜಿಸಲಾಗುವುದು ಎಂದು ಬೆದರಿಕೆ ಹಾಕಲಾಗುತ್ತಿದೆ. ಕಾರ್ಖಾನೆಯ ಯಾವ ವಿಭಾಗಕ್ಕೂ ಹಾಕಿದರೂ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ ವಿಆರ್‌ಎಸ್‌ಗೆ ಸಹಿ ಹಾಕಿಸಿಕೊಳ್ಳಲು ಇನ್ನಿಲ್ಲದ ತೊಂದರೆ ನೀಡುತ್ತಿದ್ದಾರೆ ಎಂದು ಹೆಸರೇಳದ ನೌಕರರೊಬ್ಬರು ಅಳಲು ತೋಡಿಕೊಂಡರು.
ಬೇರೆ ನಿಗಮಗಳಿಗೆ ವಿಲೀನಗೊಳಿಸಿ : ಕಾರ್ಖಾನೆಯಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ನಾನು ಇನ್ನೂ ಕೆಲಸ ಮಾಡಲು ಸಶಕ್ತನಾಗಿದ್ದೇನೆ. ಆದರೆ, ಅಧಿಕಾರಿಗಳು ವಿಆರ್‌ಎಸ್‌ಗೆ ಸಹಿ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ. ಈಗಾಗಲೇ ಸರಿಯಾಗಿ ವೇತನವಿಲ್ಲದೆ ಸಾಲ ಮಾಡಿಕೊಂಡಿರುವ ನಾನು. ವಿಆರ್‌ಎಸ್‌ನಿಂದ ಬರುವ ಹಣ ಸಾಲ ತೀರಿಸಬೇಕಾಗಿದೆ. ಇದರಿಂದ ಜೀವನಕ್ಕೆ ಏನೂ ಉಳಿಯುವು ಲ್ಲ. ಅಲ್ಲದೆ, ಉದ್ಯೋಗವಿಲ್ಲದೆ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ನಮ್ಮನ್ನು ಬೇರೆ ನಿಗಮ ಮಂಡ ಳಿಗಳಿಗೆ ವಿಲೀನಗೊಳಿಸಿದರೆ ಅನುಕೂಲವಾ ಗಲಿದೆ ಎಂದು ಹೆಸರು ಹೇಳದ ನೌಕರ ಮನವಿ ಮಾಡಿದರು.