Advertisement

ನಿಗೂಢವಾಗಿಯೇ ಉಳಿದ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯ ಮಗು ಅಪಹರಣ ಪ್ರಕರಣ

05:33 PM Jun 18, 2022 | Team Udayavani |

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯ ಮಕ್ಕಳ ವಿಭಾಗದ ಬಳಿ 40 ದಿನಗಳ ಮಗುವನ್ನು ತಾಯಿಯ ಮಡಿಲಿನಿಂದ ಕಿತ್ತುಕೊಂಡು ಹೋಗಿದ್ದ ಹಾಗೂ ರಾತ್ರೋರಾತ್ರಿ ಮಗುವನ್ನು ಮರಳಿ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿದ್ದವರ ಸುಳಿವು ಇದುವರೆಗೂ ಪೊಲೀಸರಿಗೆ ದೊರೆತಿಲ್ಲ.

Advertisement

ದೊಡ್ಡತಲೆ ಹೊಂದಿದ ಸಮಸ್ಯೆಯಿಂದ ಬಳಲುತ್ತಿದ್ದ ಕುಂದಗೋಳದ ಹಸುಗೂಸನ್ನು ಕಿಮ್ಸ್‌ನಲ್ಲಿ ದಾಖಲಿಸಲಾಗಿತ್ತು. ಮಗುವಿನ ತಾಯಿ ವ್ಯಕ್ತಿಯೊಬ್ಬ ಕಿತ್ತುಕೊಂಡು ಹೋಗಿದ್ದಾನೆಂದು ವಿದ್ಯಾನಗರ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಆದರೆ ಮರುದಿನ ಬೆಳಗಿನ ಜಾವ ಮಗು ಪಿಎಂಎಸ್‌ಎಸ್‌ ಆಸ್ಪತ್ರೆ ಹಿಂಭಾಗದಲ್ಲಿ ದೊರೆತಿತ್ತು. ಈ ಪ್ರಕರಣ ಭೇದಿಸಲು ಆಯುಕ್ತರು ಡಿಸಿಪಿ ನೇತೃತ್ವದಲ್ಲಿ ಮೂವರು ಇನ್ಸ್‌ಪೆಕ್ಟರ್‌ಗಳುಳ್ಳ ವಿಶೇಷ ತನಿಖಾ ತಂಡ ಕೂಡ ರಚಿಸಿದ್ದಾರೆ. ಕಿಮ್ಸ್‌ ಆವರಣದಲ್ಲಿನ ಎಲ್ಲ 300 ಸಿಸಿಟಿವಿಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪೊಲೀಸರು ತಡಕಾಡಿದ್ದಾರೆ. ಆದರೆ ಮಗು ಅಪಹರಿಸಿದ್ದ ಹಾಗೂ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋದವರ ಬಗ್ಗೆ ಪೊಲೀಸರಿಗೆ ಇದುವರೆಗೆ ಸ್ಪಷ್ಟ ಚಿತ್ರಗಳು ದೊರೆತಿಲ್ಲ.

ಇನ್ನು ತನಿಖಾ ಹಂತದಲ್ಲಿದೆ, ವಿಚಾರಣೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ ಮಗುವಿನ ತಾಯಿಯ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಹೈಡ್ರಾಮಾ ಹಿಂದೆ ಯಾರಿದ್ದಾರೆ? ಇದಕ್ಕೆ ಕಾರಣವೆನೆಂಬುದು ಮಾತ್ರ ಸ್ಪಷ್ಟವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next