ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
ಹೆಜ್ಜೆ ಗುರುತು, ಇರುವಿಕೆಯ ಕುರುಹುಗಳು ಕಂಡು ಬಂದಿಲ್ಲ: ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜು
Team Udayavani, Jan 16, 2025, 2:21 AM IST
ಮೈಸೂರು: ನಗರದ ಹೆಬ್ಬಾಳುನಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಕಳೆದ 10 ದಿನಗಳಿಂದ ಚಿರತೆ ಸೆರೆಗಾಗಿ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಮಂಗಳವಾರ ಸ್ಥಗಿತಗೊಳಿಸಲಾಯಿತು.
ಕಳೆದ 10 ದಿನಗಳಿಂದ ಇಲ್ಲಿಯವರೆಗೂ ಕೆಮರಾ ಟ್ರ್ಯಾಪ್ ಗಳಲ್ಲಿಯಾಗಲಿ, ಡ್ರೋನ್ ಕೆಮರಾ, ಕ್ಯಾಂಪಸ್ಸಿನ ಸಿಸಿ ಟಿವಿ ಕೆಮರಾಗಳಲ್ಲಿಯಾಗಲಿ ಹಾಗೂ ಅರಣ್ಯ ಸಿಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಚಿರತೆಯ ಚಲನವಲನ, ಹೆಜ್ಜೆ ಗುರುತು, ಇರುವಿಕೆಯ ಕುರುಹುಗಳು ಕಂಡು ಬಂದಿಲ್ಲ. ಕ್ಯಾಂಪಸ್ಸಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿಯೂ ಸಹಾ ಚಿರತೆಯ ಚಲನ ವಲನಗಳು ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ.ಎನ್. ಬಸವರಾಜು ತಿಳಿಸಿದ್ದಾರೆ.
ಇಂತಹ ಪ್ರಕರಣಗಳು ಮರುಕಳಿಸದಂತೆ ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಸುರಕ್ಷತ ಕ್ರಮವನ್ನು ಬಲಗೊಳಿಸುವ ಬಗ್ಗೆ ಹಾಗೂ ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ. ರಾತ್ರಿ ವೇಳೆ ಥರ್ಮಲ್ ಡ್ರೋನ್ ಬಳಸಿ ಕ್ಯಾಂಪಸ್ಸಿನಲ್ಲಿ ನಿರಂತರ ನಿಗಾ ಇಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಸಿದ್ದರಾಮಯ್ಯ ಸಿಎಂ ಆದಾಗೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ: ಎಚ್.ವಿಶ್ವನಾಥ್
Mysuru; ‘ಗೃಹಲಕ್ಷ್ಮಿ’ಯಿಂದ ಶೌಚಗೃಹ ನಿರ್ಮಿಸಿದ ಮಹಿಳೆ!
Nanjangud: ಬಸ್-ಟಿಪ್ಪರ್ ಓವರ್ ಟೇಕ್; ಬಸ್ಸಿನಲ್ಲಿದ್ದ ಮಹಿಳೆಯ ಕುತ್ತಿಗೆ, ಕೈ ತುಂಡು
Hunasuru: ಬೆಳ್ಳಂಬೆಳಗ್ಗೆ ಬೀದಿ ನಾಯಿಗಳ ದಾಳಿಗೆ ಜೀವ ಕಳೆದುಕೊಂಡ ಜಿಂಕೆ…
Palace Land Dispute: ನಾವೇ ಬೆಂಗಳೂರು ಅರಮನೆ ಜಾಗದ ಮಾಲೀಕರು: ಪ್ರಮೋದಾದೇವಿ