Advertisement

ಮೈಸೂರು ಹೋಟೆಲ್‌ನಲ್ಲಿ ಪಾತ್ರೆ ತೊಳೆದಿದ್ದೆ: ಹರೇಕಳ ಹಾಜಬ್ಬ

12:34 PM Nov 22, 2021 | Team Udayavani |

ಮೈಸೂರು: ಸಮಾಜ ನನ್ನನ್ನು ಗುರುತಿಸಿದ್ದಕ್ಕೆ ಹೆಮ್ಮೆ ಯಾಗುತ್ತಿದ್ದು, ಒಬ್ಬ ಸಾಮಾನ್ಯ ಮನುಷ್ಯನಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಜೀವಮಾನದಲ್ಲೇ ಇಂತಹ ಕನಸು ಸಹ ಕಂಡಿರಲಿಲ್ಲ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ತಮ್ಮ ಅನುಭವ ಹಂಚಿಕೊಂಡರು.

Advertisement

ರಾಷ್ಟ್ರೋತ್ಥಾನ ಸಾಹಿತಿ ವತಿಯಿಂದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಭಾನುವಾರ ಆಯೋ ಜಿಸಿದ್ದ ಕನ್ನಡ ಪುಸ್ತಕ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣದ ಅರಿವು: ಸಣ್ಣ ಜೋಪಡಿಯಲ್ಲಿ ನನ್ನ ಬದುಕು ಆರಂಭವಾಗಿತ್ತು. 1974ರಲ್ಲಿ ಪ್ರವಾಹ ಬಂದು ಎಲ್ಲವೂ ಕೊಚ್ಚಿ ಹೋಗಿತ್ತು. ಆಗ ಬೇರೆ ಮನೆ ಮಾಡಿಕೊಳ್ಳಲು ಸರ್ಕಾರ ನೆರವು ನೀಡಿತ್ತು. ಜೀವನವನ್ನು ಕಟ್ಟಿಕೊಳ್ಳಲು ಬಸ್‌ ನಿಲ್ದಾಣ ದಲ್ಲಿ ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ಇಂಗ್ಲಿಷ್‌ ನಲ್ಲಿ ಕೇಳಿದ ಪ್ರಶ್ನೆ ಶಿಕ್ಷಣದ ಬಗ್ಗೆ ಅರಿವು ಮೂಡಿತು. ನಾನಂತೂ ಕಲಿತಿಲ್ಲ. ನಮ್ಮೂರಿನ ಮಕ್ಕಳಿ ಗಾದರೂ ಶಾಲೆ ನಿರ್ಮಿಸಬೇಕು ಎನ್ನುವ ಛಲ ಮೂಡಿತು.

ಇದನ್ನೂ ಓದಿ:- ‘’ಅಮೃತ್‌ ಅಪಾರ್ಟ್‌ಮೆಂಟ್ಸ್‌’’ ಮೆಟ್ರೋ ಕತೆಗೆ ಸಿನಿಮಾ ಟಚ್‌

ಹರೇಕಳದಲ್ಲಿ ಶಾಲೆ ನಿರ್ಮಿಸುವ ಕನಸು ಹಂತ ಹಂತವಾಗಿ ಹೀಗಿ ಈಡೇರಿದೆ. ಇದೀಗ ನಮ್ಮೂರಲ್ಲಿ ಪಿಯು ಕಾಲೇಜು ಆಗಬೇಕು ಎನ್ನುವುದೇ ಸದ್ಯದ ನನ್ನ ಬಯಕೆಯಾಗಿದೆ ಎಂದು ಹೇಳಿದರು. ಬಳಿಕ ತಾವು ಮೈಸೂರಿನಲ್ಲಿ ಕಳೆದ ಹಳೆಯ ನೆನಪುಗಳನ್ನು ಮೆಲಕು ಹಾಕಿ, ಮೈಸೂರಿನ ಜತೆಗೂ ನಂಟನ್ನು ಬಿಚ್ಚಿಟ್ಟರು. ಮೂರ್ನಾಲ್ಕು ದಶಕಗಳ ಹಿಂದೆ ನಗರದ “ಕಾಮಧೇನು’ ಹೋಟೆಲ್ ನಲ್ಲಿ ಕೆಲ ಸಮಯ ಪಾತ್ರೆ ತೊಳೆಯುವ ಕೆಲಸ ಮಾಡಿದ್ದೇನೆ ಎಂದು ಖುದ್ದು ಹಾಜಬ್ಬ ನೆನಪಿಸಿಕೊಂಡರು.

Advertisement

ಯಾವುದೇ ಅಳುಕಿಲ್ಲದೆ ತಾವು ಮೈಸೂರಿನಲ್ಲಿ ನಿರ್ವಹಿಸಿದ್ದ ಕೆಲಸದ ವಿಷಯವನ್ನು ಸಭೆಗೆ ತಿಳಿಸಿದರು.ಹಾಗೆ ಮಾತು ಮುಂದುವರಿಸಿದ ಅವರು, ದೇಶದ ಅತ್ಯುನ್ನತ ಪ್ರಶಸ್ತಿ ಪಡೆಯುವಾಗ ನನ್ನ ಕಣ್ಣಾಲಿ ಗಳು ತುಂಬಿ ಬಂದವು ಎಂದು ಹೇಳಿದರು. ಇದಕ್ಕೂ ಮುನ್ನ ಮಂಗಳೂರಿನಿಂದ ಬಂದ ಅವರ ಮೇಲೆ ಹೂಮಳೆಗೈಯುವ ಮೂಲಕ ಮಹಿಳೆಯರು ಆತ್ಮೀಯವಾಗಿ ಸ್ವಾಗತ ಕೋರಿದರು.

ನಂತರ ಅವರನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ಜೊತೆಗೆ ಮೈಸೂರಿನ ಸ್ವಾಮಿ ಲಿಂಗಪ್ಪ (ಶಿಕ್ಷಣ), ಸಿ.ವಿ.ಕೇಶವಮೂರ್ತಿ(ನ್ಯಾಯಾಂಗ), ಶ್ರೀಧರ ಚಕ್ರವರ್ತಿ(ಶಿಕ್ಷಣ ಸೇವೆ), ಎಚ್‌.ಡಿ. ಕೋಟೆಯ ಮದಲಿ ಮಾದಯ್ಯ(ಸಾಮಾಜಿಕ ಹೋರಾಟ) ಅವರನ್ನು ಅಭಿನಂದಿಸಲಾಯಿತು. ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ, ವಕೀಲ ಶ್ಯಾಮ್‌ ಭಟ್‌ ಇನ್ನಿತರರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next