Advertisement
ಅವರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಗೆ ಸೋಮವಾರ ಕುಟುಂಬ ಸಮೇತ ಭೇಟಿಯಾಗಿ ಆಂಜನೇಯನ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
Related Articles
Advertisement
ಸ್ಥಳೀಯ ಯುವಕರಿಗೆ ಅಂಜನಾದ್ರಿ ಬೆಟ್ಟ ಸುತ್ತಮುತ್ತಲ ಪ್ರದೇಶಗಳ ಬಗ್ಗೆ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆ ವಿಶೇಷ ತರಬೇತಿ ನೀಡಿ ಪ್ರವಾಸಿಗರಿಗೆ ಸ್ಥಳ ಮಹಿಮೆ ಬಗ್ಗೆ ಪ್ರವಾಸಿ ಗೈಡ್ ಗಳು ಮಾರ್ಗದರ್ಶನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ಹೊಂದಿದ್ದು ಈ ಕ್ಷೇತ್ರ ಇನ್ನೂ ಅಭಿವೃದ್ಧಿ ಯಾಗುತ್ತದೆ ಸ್ಥಳೀಯರು ಸೇರಿದಂತೆ ಎಲ್ಲರನ್ನು ಸೇರಿಸಿಕೊಂಡು ಕಿಷ್ಕಿಂದಾ ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಬೇಕಿದೆ ಎಂದರು.
ಇದನ್ನೂ ಓದಿ:ಜು. 1ರಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧ: ರಾಜ್ಯದಲ್ಲೂ ಕಟ್ಟುನಿಟ್ಟಿನ ಜಾರಿಗೆ ಕ್ರಮ
ಬಹುದಿನಗಳಿಂದ ಇಲ್ಲಿಗೆ ಬರಬೇಕೆಂಬ ಆಸೆಯನ್ನು ಕುಟುಂಬ ವರ್ಗದವರು ವ್ಯಕ್ತಪಡಿಸಿದ್ದರು ಇದೀಗ ಕಾಲ ಕೂಡಿ ಬಂದಿದೆ ಕಿಷ್ಕಿಂದಾ ಅಂಜನಾದ್ರಿ ಗೆ ಬಂದು ವಿಶೇಷ ಪೂಜೆ ಮಾಡಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡುತ್ತೇವೆ .ಇಲ್ಲಿಯ ಪ್ರಕೃತಿ ಸೌಂದರ್ಯ ಅತ್ಯಂತ ಸೊಗಸಾಗಿದೆ ಪ್ರತಿಯೊಬ್ಬರೂ ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯಬೇಕು. ಇಲ್ಲಿಯ ಪ್ರಕೃತಿಯನ್ನು ಪರಿಸರವನ್ನು ಸಂರಕ್ಷಣೆ ಮಾಡಲು ಪ್ಲಾಸ್ಟಿಕ್ ಸೇರಿದಂತೆ ಪರಿಸರಕ್ಕೆ ವಿರುದ್ಧವಾದ ವಸ್ತುಗಳನ್ನು ಇಲ್ಲಿ ಬಳಸಬಾರದು ಎಂದು ಮನವಿ ಮಾಡಿದರು.
ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಅವರನ್ನು ದೇವಾಲಯದ ಸಮಿತಿ ವತಿಯಿಂದ ಬೆಟ್ಟಗಳಿಗೆ ಸ್ವಾಗತ ಮಾಡಿ ಸನ್ಮಾನಿಸಲಾಯಿತು. ನಂತರ ಯದುವೀರ ದತ್ತ ಒಡೆಯರ್ ಹಾಗೂ ಕುಟುಂಬ ಸದಸ್ಯರು 575 ಮೆಟ್ಟಿಲು ಹತ್ತಿ ಆಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು ಮತ್ತು ಕುಟುಂಬದ ಸದಸ್ಯರು ಹಾಗೂ ದೇವಾಲಯಕ್ಕೆ ಆಗಮಿಸಿದ್ದ ಭಕ್ತರೊಂದಿಗೆ ಮೊಬೈಲ್ ಮೂಲಕ ಸೆಲ್ಫಿ ತೆಗೆಸಿಕೊಂಡರು.