Advertisement
ನಗರದ ವಾಣಿವಿಲಾಸ ಅರಸು ಬಾಲಿಕಾ ಪದವಿಪೂರ್ವ ಕಾಲೇಜು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿದ್ದ ತಾಲೂಕು ಮಟ್ಟದ ಯುವ ಸಂಸತ್ ಅಣುಕು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ನಾಯಕತ್ವ ಗುಣ ಬೆಳೆಸಿಕೊಳ್ಳಿ: ದೇಶದ ಜನಸಂಖ್ಯೆಯಲ್ಲಿ ಶೇ.55 ರಷ್ಟು ಯುವಕರೇ ಇದ್ದರು. ನಮ್ಮ ಸಂಸತ್ತಿನಲ್ಲಿರು ಯುವ ರಾಜಕಾರಣಿಗಳ ಪ್ರಮಾಣ ಕೇವಲ ಶೇ.12 ರಷ್ಟು ಮಾತ್ರ. ಅದರಲ್ಲೂ ಮಹಿಳಾ ಸಂಸದರ ಪ್ರಮಾಣ ಶೇ.8 ಮಾತ್ರ. ವಿದ್ಯಾವಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿರು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ ಪ್ರವೇಶ ಮಾಡವುದರಿಂದ ದೇಶದ ಅಭಿವೃದ್ಧಿಗೆ ಅಗತ್ಯವಿರುವ ನಿರ್ಧಾರಗಳನ್ನು ತ್ವರಿತವಾಗಿ ಕೈಗೊಳ್ಳುತ್ತಾರೆ ಎನ್ನುವ ಉದ್ದೇಶದಿಂದ ಯುವ ಪೀಳಿಗೆಗೆ ಇಂತಹ ಯುವ ಸಂಸತ್ ಅಣಕು ಸ್ಪರ್ಧೆ ಮಾಡುವುದರಿಂದ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ತಿಳಿಸಿದರು.
ಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟಿನ ಗೌರವ ಕಾರ್ಯದರ್ಶಿ ಮಹೇಶ್ ಎನ್. ಅರಸು ಮಾತನಾಡಿ, ನಮ್ಮ ಯುವಕರಿಗೆ ರಾಜಕೀಯ ಪ್ರಜ್ಞೆ ಬಹಳ ಮುಖ್ಯ. ಮಾಹಿತಿಗೂ ಜ್ಞಾನಕ್ಕೂ ಬಹಳ ವ್ಯತ್ಯಾಸವಿದೆ. ಕೇವಲ ಮಾಹಿತಿ ಸಂಗ್ರಹಕ್ಕೆ ಮುಂದಾಗದೆ, ಜ್ಞಾನ ಸಂಪಾದಿಸುವ ಕಡೆ ಯುವಶಕ್ತಿ ಗಮನ ಹರಿಸಬೇಕು. ಪ್ರತಿಯೊಬ್ಬರಿಗೂ ಸಿಂಪತಿ ಮತ್ತು ಎಂಪತಿ ಎಂಬುದು ಬಹಳ ಮುಖ್ಯವಾಗುತ್ತದೆ. ಇನೊಬ್ಬರ ನೋವಿಗೆ ಕೇವಲ ಸಿಂಪತಿ ತೋರಿಸಿದರೆ ಸಾಲದು, ಆನೋವನ್ನು ನಮ್ಮದೇ ನೋವು ಎಂಬು ಭಾವಿಸುವ ಎಂಪತಿ ಇರಬೇಕು ಎಂದು ಕಿವಿಮಾತು ಹೇಳಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿದೇರ್ಶಕಿ ಎಂ.ಪಿ. ನಾಗಮ್ಮ, ಕಾಲೇಜಿನ ಪ್ರಾಂಶುಪಾಲರಾದ ಅನಿತಾ ಜೆ.ಸಿ., ಅಪೂರ್ವ, ಹೇಮಲತಾ, ಟ್ರಸ್ಟಿನ ಬಿ.ಪಿ ಬಾಲಚಂದ್ರ ಅರಸ್ ಇದ್ದರು.