ಮೈಸೂರು: ಮುಕುಂದ್ ಶಶಿಕಿರಣ್ ಮತ್ತು ವಿಷ್ಣುವರ್ಧನ್ ಜೋಡಿ ಮೈಸೂರು ಓಪನ್ ಟೆನಿಸ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇವರಿಬ್ಬರು ಕೂಟದ ಅಗ್ರಶ್ರೇಯಾಂಕಿತ ಜೋಡಿಯಾದ ಬಿ.ರಿತ್ವಿಕ್ ಚೌಧರಿ-ನಿಕ್ಕಿ ಪೂಣಚ್ಚರನ್ನು 6-3, 6-4 ಸೆಟ್‌ಗಳಿಂದ ಮಣಿಸಿದರು. ಈ ಪಂದ್ಯ 1 ಗಂಟೆ 10 ನಿಮಿಷಗಳ ಕಾಲ ನಡೆಯಿತು. ಶನಿವಾರ ಒಂದೇ ದಿನ ಎರಡು ಡಬಲ್ಸ್ ಪಂದ್ಯಗಳಲ್ಲಿ ಇಬ್ಬರೂ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಇದೇ ಜೋಡಿ 6-4, 7-5ರಿಂದ ಬ್ಲೇಕ್ ಎಲಿಸ್-ವ್ಲಾಡಿಸ್ಲಾವ್ ಒರ್ಲಾವ್‌ರನ್ನು ಸೋಲಿಸಿದ್ದರು. ಇನ್ನು ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರಿನ ಎಸ್.ಡಿ.ಪ್ರಜ್ವಲ್ ದೇವ್ ಸೋಲುವುದರೊಂದಿಗೆ ಭಾರತದ ಸವಾಲು ಅಂತ್ಯಗೊಂಡಿತು. ಪ್ರಜ್ವಲ್ ಬ್ರಿಟನ್ನಿನ ಜಾರ್ಜ್ ಲಾಫ್ಹಾಗೆನ್ ವಿರುದ್ಧ 5-7, 4-6 ಸೆಟ್‌ಗಳಿಂದ ಸೋತು ಹೋಗಿದ್ದರು.