ಚಿಕ್ಕಬಳ್ಳಾಪುರ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ಗೌರಿಬಿದನೂರು ನಗರದ ಎ.ಎಸ್ ನ್ಯಾಷನಲ್ ಕಾಲೇಜಿನಿಂದ ವಿದುರಾಶ್ವಥದ ವೀರಸೌಧವರೆಗೆ ಆಯೋಜಿಸಲಾದ 75 ಸೈಕ್ಲಿಸ್ಟ್ ಗಳ ಸೈಕಲ್ ರಾಲಿಗೆ ಶಾಸಕ ಎನ್ ಎಚ್ ಶಿವಶಂಕರ್ ರೆಡ್ಡಿ ಚಾಲನೆ ನೀಡಿದರು.
ಟಿ-ಶರ್ಟ್ ಮತ್ತು ಟೋಪಿಗಳನ್ನು ಧರಿಸಿ ಸೈಕಲ್ ಜಾಥಾದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಗೌರಿಬಿದನೂರು ನಗರದಿಂದ ವಿದುರಾಶ್ವಥದ ವೀರಸೌಧವರೆಗೆ ಸೈಕಲಿಂಗ್ ಮೂಲಕ ತೆರಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಐತಿಹಾಸಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಸೈಕಲ್ ಜಾಥಾದಲ್ಲಿ ಪಾಲ್ಗೊಂಡರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾ ನಾಯಕರು ತಮ್ಮ ಪ್ರಾಣಗಳ ಬಲಿದಾನಗಳನ್ನು ನೀಡಿದ ಪರಿಣಾಮ ನಾವೆಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತಾಗಿದ್ದು 75ನೇ ಸ್ವಾತಂತ್ರದ ಅಮೃತ ಮಹೋತ್ಸವದಲ್ಲಿ ಅವರಿಗೆ ಸೈಕಲ್ ಜಾಥಾ ಮಾಡುತ್ತಿರುವುದು ನಮಗೆ ಎಲ್ಲರಿಗೂ ಹೆಮ್ಮೆಯೆನಿಸಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಏರಿಕೆ, 15,000 ಗಡಿ ದಾಟಿದ ನಿಫ್ಟಿ
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ರಘುನಂದನ್, ತಹಸೀಲ್ದಾರ್ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾರ್ಯತಂತ್ರದ ಸಹಯೋಗವನ್ನು 5 ವರ್ಷಗಳ ತನಕ ವಿಸ್ತರಿಸಿಕೊಂಡ ನ್ಯೂಮಾಂಟ್, ಇನ್ಫೋಸಿಸ್ ..!