ಮೈಸೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಪ್ರತಿ ಜಿಲ್ಲೆಗಳಿಗೆ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳನ್ನು ನೇಮಿಸುವುದಲ್ಲದೇ, ಎಲ್ಲಾ ಜಿಲ್ಲೆಗಳಿಗೂ ಅನುಭವಿ ಜಿಲ್ಲಾಧಿಕಾರಿಗಳ ಅಗತ್ಯವಿದೆ ಎಂದು ವಿಧಾನ ಪರಿಷತ್‌ಸದಸ್ಯ ಎಚ್. ವಿಶ್ವನಾಥ್ ಸರ್ಕಾರಕ್ಕೆಸಲಹೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ರಾಜ್ಯದಲ್ಲಿದಿನೇ ದಿನೆ ಕೊರೊನಾ ಸೋಂಕು ಹೆಚ್ಚುತ್ತಿದೆ. ಪ್ರತಿಜಿಲ್ಲೆಗೆ ಅನುಭವಿ ಜಿಲ್ಲಾಧಿಕಾರಿಗಳ ಅಗತ್ಯವಿದೆ. ಐಎಎಸ್ ಅಧಿಕಾರಿಗಳನ್ನು ಕಾರ್ಯದರ್ಶಿಯಾಗಿ ನೇಮಿಸಬೇಕು. ಪ್ರತಿಯೊಬ್ಬರಿಗೂ 100 ಕೋಟಿ ನೀಡಬೇಕು.
ಮೂರು ತಿಂಗಳು ಜಿಲ್ಲೆಗೆ ಜಿಲ್ಲಾಧಿಕಾರಿಯನ್ನುಅನುಭವ ಇರುವವರನ್ನು ನೇಮಿಸಿ, ಅವರಿಗೆ ಎಲ್ಲಾರೀತಿಯ ಅಧಿಕಾರ ನೀಡಿ. ಸಾವುಗಳಿಗೆ ಅವರನ್ನುಹೊಣೆಗಾರರನ್ನಾಗಿ ಮಾಡಿ. ಸದ್ಯಕ್ಕೆ ಜಿಲ್ಲಾಧಿಕಾರಿಗೆಹಣ ಖರ್ಚು ಮಾಡುವ ಅಧಿಕಾರ ಇಲ್ಲ. ಸರ್ಕಾರಹಣಕಾಸಿನಕೇಂದ್ರೀಕರಣ ಮಾಡಿದೆ ಎಂದರು.ಜಿಲ್ಲಾಧಿಕಾರಿಗಳು ತಮಗೆ ಅಧಿಕಾರ ಇಲ್ಲಎಂಬುದನ್ನು ಪ್ರಧಾನಿಗೆ ಹೇಳಬೇಕು. ಜಿಲ್ಲಾಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗೆ ಆದೇಶಿಸಬೇಕೆಹೊರತು ಮನವಿ ಮಾಡಬಾರದು.
ಜಿಲ್ಲಾಧಿಕಾರಿಒಂದು ದಿನವೂ ಹಳ್ಳಿಗಳ ಕಡೆಗೆ ಹೋಗಲಿಲ್ಲ.ಟಾಸ್ಕ್ಫೋರ್ಸ್ ಸಭೆ ಕೂಡ ಮಾಡಲಿಲ್ಲ ಗ್ರಾಮೀಣಪ್ರದೇಶದಲ್ಲಿ ಜನರ ನೋವು ಕೇಳುವವರು ಯಾರು ಎಂದು ಎಚ್.ವಿಶ್ವನಾಥ್ ಪ್ರಶ್ನಿಸಿದರು.ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಕೊಟ್ಟು 15 ದಿನ ಲಾಕ್‌ಡೌನ್ ಮಾಡಬೇಕು. ಬೆಳಗ್ಗೆ 6ರಿಂದ 8 ರವರೆಗೆ ಅಂಗಡಿ ಏಕೆ ತೆರೆಯಬೇಕು.ಮಾಂಸದ ಅಂಗಡಿಯ ಬಳಿ ಜನ ಜಂಗುಳಿ ನಿಲ್ಲುತ್ತಾರೆ.ಒಂದು ತಿಂಗಳು ಮಾಂಸ ತಿನ್ನಲಿಲ್ಲ ಅಂದರೆ ಜನ ಸತ್ತುಹೋಗುತ್ತಾರಾ? ಕಾಮಾನ್ ಸೆನ್ಸ್ ಇಲ್ಲದೆ ಏನೇನೋತೀರ್ಮಾನ ಮಾಡಬಾರದು ಎಂದು ತಿಳಿಸಿದರು.