Advertisement

ಪಿರಿಯಾಪಟ್ಟಣಕ್ಕೆ ಸಂಸದ ಪ್ರತಾಪ್ ಸಿಂಹ ಕೊಡುಗೆ ಏನು…? ಕಾಂಗ್ರೆಸ್ ಪ್ರಶ್ನೆ

04:34 PM Sep 12, 2021 | Team Udayavani |

ಪಿರಿಯಾಪಟ್ಟಣ : ಪ್ರತಾಪ್ ಸಿಂಹ ಸಂಸದರಾದ ನಂತರ ಪಿರಿಯಾಪಟ್ಟಣ ತಾಲ್ಲೂಕಿಗೆ ಯಾವುದಾರೂ ಕೊಡುಗೆ ನೀಡಿದ್ದರೆ ಭಹಿರಂಗ ಪಡಿಸಲಿ ಅದನ್ನು ಬಿಟ್ಟು ಹೀಗೆ ತೀಟೆಮಾತುಗಳನ್ನಾಡಿದರೆ ಅವರ ವಿರುದ್ದ ಪಿರಿಯಾಪಟ್ಟಣ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹಬಟೂರು ರಘು ಮತ್ತು ಕೋಮಲಾಪುರ ಹರೀಶ್ ತಿಳಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸೆ.,07 ರಂದು ತಾಲ್ಲೂಕಿನ ಹಿಟ್ನೆ ಹೆಬ್ಬಾಗಿಲು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಮತ್ತು ಉದ್ಯಾನವನದ ಉದ್ಘಾಟನಾ ಸಮಾರಂಭದಲ್ಲಿ ಪ್ರತಾಪ್ ಸಿಂಹರವರು ಕುಚೇಷ್ಟೆಗಾಗಿ ಮಾಜಿ ಶಾಸಕ ಕೆ.ವೆಂಕಟೇಶ್ ರವರನ್ನು ಕುರಿತು, ತಾಲ್ಲೂಕಿನಲ್ಲಿ ವೆಂಕಟೇಶ್ವರ ಮಹಿಮೆ ನಿಂತು ಹೋಗಿದೆ ಎಂದು ಹಗುರವಾಗಿ ಮಾತನಾಡಿದ್ದಾರೆ, ವೆಂಕಟೇಶ್ ರವರು ಕಳೆದ 40 ವರ್ಷಗಳ ಕಾಲ ಸುದೀರ್ಘ ರಾಜಕಾರಣದಲ್ಲಿ 25 ವರ್ಷ ಶಾಸಕ, ಮಂತ್ರಿಯಾಗಿ ತಾಲ್ಲೂಕಿಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.

ಪಿರಿಯಾಪಟ್ಟಣದಲ್ಲಿರುವ ಪ್ರತಿಯೊಂದು ಅಭಿವೃದ್ದಿ ಕೆಲಸಗಳು ವೆಂಕಟೇಶ್ ರವರು ನೀಡಿರುವ ಕೊಡುಗೆಗಳೆ  ಇದನ್ನು ತಿಳಿಯದ ಪ್ರತಾಪ್ ಸಿಂಹ ತಮ್ಮ ಎಲುಬಿಲ್ಲದ ನಾಲಿಗೆಯಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ರವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ವೆಂಕಟೇಶ್ ಶಾಸಕರಾಗಿದ್ದ ಸಂದರ್ಭದಲ್ಲಿ ಪಿರಿಯಾಪಟ್ಟಣಕ್ಕೆ ಯಾವ ಸಭೆ, ಸಮಾರಂಭಕ್ಕೂ ಕಾಲಿಡದ ನೀವು, ವೆಂಕಟೇಶ್ ರವರ ಬಗ್ಗೆ ಮಾತನಾಡುವ  ನೈತಿಕತೆ ಇಟ್ಟುಕೊಂಡಿದ್ದಾರಾ ಎಂದರು.

ಇದನ್ನೂ ಓದಿ:ಪುರಸಭೆ ಅಡಳಿತ ಮಂಡಳಿ ರಚನೆ ಯಾವಾಗ?

ಪಿರಿಯಾಪಟ್ಟಣದಲ್ಲಿ ತಂಬಾಕು ಬೆಳೆಗಾರರು ಬೆಂಬಲ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದಾಗ ಒಮ್ಮೆಯೂ ಬಾಯ್ಬಿಡದ ನೀವು ಪತ್ರಿಕೆಗಳಲ್ಲಿ ಹೀರೋ ಆಗುವ ಬರದಲ್ಲಿ ತಮ್ಮ ಉದ್ಗಟತನ ತೋರುವುದು ನಿಮಗೆ ಶೋಭೆಯಲ್ಲ, ತಾಲ್ಲೂಕಿಗೆ ರೈಲ್ವೆ ತರುತ್ತೇನೆ ಎಂದು ರೈಲ್ ಬಿಟ್ಟಿದ್ದೀರಿ, ಇಂದಿಗೂ ರೈಲ್  ಬಂದಿಲ್ಲಾ, ಫಾರೀನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಮಾಡುವುದಾಗಿ ರೈತರಿಗೆ ವಂಚನೆ ಮಾಡಿರುವುದು ಇಡೀ ದೇಶಕ್ಕೆ ತಿಳಿದಿದೆ, 7 ವರ್ಷಗಳಿಂದ ಸಂಸದರಾಗಿರುವ ನೀವು ಪಿರಿಯಾಪಟ್ಟಣಕ್ಕೆ ಆಗೊಮ್ಮೆ ಈಗೊಮ್ಮೆ ಬಂದು ನಮ್ಮ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವ ನೀವು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next