Advertisement

ಕಾಯಕ ವರ್ಗಗಳಿಗೆ ನೆರವು ನೀಡಿ

07:37 PM Jul 26, 2021 | Team Udayavani |

ಹುಣಸೂರು: ಕೋವಿಡ್‌ನಿಂದ ನಲುಗಿರುವ ಕಾಯಕ ಸಮುದಾಯಗಳಿಗೆ ಸರ್ಕಾರ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದು ಕಾಯಕ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 21 ವಿವಿಧ ವೃತ್ತಿಗಳಲ್ಲಿರುವ ಮಗ್ಗದಶೆಟ್ಟರು, ತೆಲಗು ಬಣಜಿಗಶೆಟ್ಟಿ, ಗವರಿಗರು, ಸವಿತಾ ಸಮಾಜ, ಕೊರಮಶೆಟ್ಟಿ, ಯಾದವರು, ಸಾಧರು, ಅಲೆಮಾರಿಗಳು, ಗೆಜ್ಜೆಗಾರರು, ವಿಶ್ವಕರ್ಮ, ಮೇದರು, ಕುಂಬಾರ, ಮಡಿವಾಳ ಸೇರಿದಂತೆ ಕಾಯಕ ಸಮುದಾಯದಲ್ಲಿ 197 ಜಾತಿಗಳು ಸೇರಿವೆ. ಈ ವರ್ಗಗಳಿಗೆ ಪ್ಯಾಕೇಜ್‌ ಘೋಷಿಸಬೇಕೆಂದರು.

ಪ್ರತಿ ಕ್ಷೇತ್ರದಲ್ಲಿ ಶೇ.50ರಷ್ಟು ಮಂದಿ ಕಾಯಕ ಸಮುದಾಯದ ಮಂದಿ ಮತದಾರರಿದ್ದಾರೆ. ಹೀಗಾಗಿ ಶೇ.15ರಷ್ಟು ರಾಜಕೀಯ ಮೀಸಲಾತಿ ನೀಡಬೇಕು. ಮುಂಬರುವ ಚುನಾವಣೆ ವೇಳೆ ಎಲ್ಲಾ ಪಕ್ಷಗಳು ಕಾಯಕ ಸಮಾಜವನ್ನು ಗುರುತಿಸಬೇಕು. ಕಡೆಗಣಿಸಿದರೆ ಸಮುದಾಯದವರು ತಕ್ಕ ಪಾಠ ಕಲಿಸಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಹೊನ್ನಪ್ಪ, ಗೌರವಾಧ್ಯಕ್ಷ ಸಿ.ಎಸ್‌.ನಾಗರಾಜ್‌, ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next