Advertisement

ಬೇಡಿಕೆ ಈಡೇರಿಕೆಗೆ ಐಟಿಐ ಅತಿಥಿ ಬೋಧಕರ ಧರಣಿ

05:53 PM Jul 23, 2021 | Team Udayavani |

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆಒತ್ತಾಯಿಸಿ ರಾಜ್ಯ ಐಟಿಐ ಅತಿಥಿ ಬೋಧಕರಹೋರಾಟ ಸಮಿತಿ ವತಿಯಿಂದ ರಾಜ್ಯಾದ್ಯಂತಪ್ರತಿಭಟನೆ ನಡೆಸುತ್ತಿದ್ದು, ಮೈಸೂರಿನಲ್ಲೂ ಸರ್ಕಾರಿಕೈಗಾರಿಕಾ ತರಬೇತಿ ಅತಿಥಿ ಬೋಧಕರ ಹೋರಾಟಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನುಈಡೇರಿಸಬೇಕು ಎಂದು ಒತ್ತಾಯಿಸಿದರು.

ಐಟಿಐಗಳಲ್ಲಿ 900ಕ್ಕೂಹೆಚ್ಚುಅತಿಥಿಬೋಧಕರುಕೆಲಸ ನಿರ್ವಹಿಸುತ್ತಿದ್ದಾರೆ. ಕೊರೊನಾದಿಂದಾಗಿಕಳೆದೊಂದು ವರ್ಷದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದೀಗ ಎರಡನೇ ಅಲೆಯಿಂದಾಗಿ ಲಾಕ್‌ಡೌನ್‌ ತಿಂಗಳ ವೇತನವಿಲ್ಲದೆಜೀವನ ದುಸ್ತರವಾಗಿದೆ. ತರಬೇತಿದಾರರಹಿತದೃಷ್ಟಿಯಿಂದ ಲಾಕ್‌ಡೌನ್‌ ಸಮಯದಲ್ಲಿನಮ್ಮದೇ ಹಣ ಭರಿಸಿ ಆನ್‌ಲೈನ್‌ ಪಾಠವನ್ನೂ ಮಾಡಿದ್ದೇವೆ. ಎಲ್ಲ ವಿದ್ಯಾರ್ಹತೆ ಹೊಂದಿ 10-15ವರ್ಷಗಳಿಂದ ಇಲಾಖೆಯಲ್ಲಿಕೆಲಸ ನಿರ್ವಹಿಸಿದ್ದೇವೆಎಂದು ಹೇಳಿದರು.

ದಿನಕ್ಕೆ ನಾಲ್ಕು ಗಂಟೆಯಂತೆ ಗಂಟೆಗೆ 100ರೂ.ಗಳಂತೆ ತಿಂಗಳಿಗೆ 9,600ರೂ. ಸಂಭಾವನೆ ಅತ್ಯಂತಕಡಿಮೆಯಾಗಿದ್ದು ಜೀವನ ನಿರ್ವಹಣೆ ತುಂಬಾಕಷ್ಟಕರವಾಗಿದೆ. ಪ್ರಾಯೋಗಿಕ ಪಾಠಮಾಡುವುದರಿಂದ ದಿನಕ್ಕೆ 6 ಗಂಟೆಗೂ ಮೀರಿಬೋಧನೆ ಮಾಡಬೇಕಾಗಿದ್ದು, ಜೀವನಕ್ಕೆ ಇದೇಆಧಾರವಾಗಿದೆ. ವಿದ್ಯಾರ್ಥಿಗಳು ದಾಖಲಾದಸಂದರ್ಭದಲ್ಲಿಮಾತ್ರ ಸೇವೆಗೆ ಅತಿಥಿಬೋಧಕರನ್ನು ನೇಮಿಸಿಕೊಳ್ಳಲಾಗುತ್ತಿದೆ.

ಪ್ರತಿ ತಿಂಗಳಂತೆ ವೇತನಸರಿಯಾಗಿ ಸಿಗದೆ ಜೀವನ ನಡೆಸುವುದುಕಷ್ಟವಾಗಿದೆ. ಹೆರಿಗೆ ಭತ್ಯೆ ಕೂಡ ಕಲ್ಪಿಸಿಲ್ಲ. ವೃತ್ತಿಪರಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿ ಅತಿಥಿಬೋಧಕರ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.ಯಾವುದೇ ಗೌರವ ಧನ ಕೂಡ ಇಲ್ಲ ಎಂದುಆರೋಪಿಸಿದರು.ಕೆಪಿಎಸ್‌ಸಿ ಮೂಲಕ ಸರ್ಕಾರಿ ಐಟಿಐಕಾಲೇಜುಗಳಲ್ಲಿ 1,520 ಕಿರಿಯ ತರಬೇತಿಅಧಿಕಾರಿಗಳ ನೇಮಕಾತಿ ಮಾಡಲು ಪ್ರಕ್ರಿಯೆನಡೆಯುತ್ತಿದೆ.

Advertisement

ಮುಂದೆ ಇವರುಗಳಿಗೆ ಸ್ಥಳ ನಿಯುಕ್ತಿಆದರೆಈಗಕಾರ್ಯ ನಿರ್ವಹಿಸುತ್ತಿರುವ ನೂರಾರುಅತಿಥಿ ಬೋಧಕರು ಕೆಲಸದ ಭದ್ರತೆ ಇಲ್ಲದೆ ಬೀದಿಪಾಲಾಗುತ್ತಾರೆ. ಹೀಗಾಗಿ ಕೂಡಲೇ ಮನವಿ ಪರಿಶೀಲಿಸಿ ಸರ್ಕಾರಿ ಐಟಿಐಗಳಲ್ಲಿ ಕೆಲಸನಿರ್ವಹಿಸುತ್ತಿರುವ ಅತಿಥಿ ಬೋಧಕರ ಸಮಸ್ಯೆಪರಿಹರಿಸಬೇಕು. ಲಾಕ್‌ಡೌನ್‌ ಅವಧಿಯ ಅತಿಥಿಬೋಧಕರ ಸಂಬಳವನ್ನುಈ ಕೂಡಲೇ ನೀಡಬೇಕು.

ಅತಿಥಿ ಬೋಧಕರ ಸೇವಾ ಭದ್ರತೆ ಮತ್ತುವೈದ್ಯಕೀಯ ಭದ್ರತೆ ಖಾತ್ರಿ ಪಡಿಸಬೇಕು. ಡಿಜಿಇಟಿಆಗ್ರಹದಂತೆ ಸರ್ಕಾರದಲ್ಲಿ ನಿಯಮಿತ ವೃತ್ತಿಪರಬೋಧಕರ ಸಂಭಾವನೆಯ 2/3 ಭಾಗದ ಕನಿಷ್ಠವೇತನವನ್ನು ನಿಗದಿಪಡಿಸಬೇಕು. ಕೊರೊನಾದಿಂದಮೃತಪಟ್ಟ ಅತಿಥಿ ಬೋಧಕರಿಗೆ ತಕ್ಷಣವೇ ಪರಿಹಾರನೀಡಬೇಕೆಂದು ಒತ್ತಾಯಿಸಿದರು.ಶಬೀನ್‌ ತಾಜ್‌, ಕುಮಾರ್‌ ಎಂ.ಎಂ, ನೀತು,ಸುನಿಲ್‌, ರಾಜೇಶ್‌, ವೆಂಕಟೇಶ್‌, ಪ್ರೇಮಾಂಜಲಿಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next