Advertisement

ಕೊಡಗು,ನಾಗರಹೊಳೆಯಲ್ಲಿ ಜಡಿಮಳೆ ಲಕ್ಷ್ಮಣತೀರ್ಥ ನದಿ ಹರಿವು ಹೆಚ್ಚಳ

08:41 PM Jul 18, 2021 | Team Udayavani |

ಹುಣಸೂರು : ನಾಗರಹೊಳೆ ಉದ್ಯಾನವನ ಹಾಗೂ ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಜಡಿ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಹನಗೋಡಿನ ನವಿಕೃತ  ಅಣೆಕಟ್ಟೆಯ ಮೇಲೆ 1100 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ನಯನ ಮನೋಹರ ದೃಶ್ಯ ಸೃಷ್ಟಿಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

Advertisement

ಕೊಡಗಿನ ಬ್ರಹ್ಮಗಿರಿ ತಪ್ಪಲಿನ ಇರ್ಪುವಿನಲ್ಲಿ ಹುಟ್ಟಿ ನಾಗರಹೊಳೆ ಉದ್ಯಾನವನದ ಮೂಲಕ ಹಾಯ್ದು ಹನಗೋಡಿಗೆ ಸಮೀಪದ ಕೊಳವಿಗೆ ಬಳಿಯಿಂದ ಹರಿದು ಬರುವ ಲಕ್ಷ್ಮಣತೀರ್ಥ ನದಿಯ ನೀರು ಜೂನ್ ಮಾಹೆಯಲ್ಲಿ ಕಟ್ಟೆ ಮೇಲೆ ಅಲ್ಪ ಪ್ರಮಾಣದ ನೀರು ಉರುಳಿತ್ತಾದರೂ ನಂತರದಲ್ಲಿ ಮಳೆ ಕೊರತೆಯಿಂದ ಅಣೆಕಟ್ಟಿನ ಮೇಲೆ ನೀರಿನ ಹರಿವು ಸಂಪೂರ್ಣ ನಿಂತು ಹೋಗಿತ್ತು. ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿ, ಸಾರಥಿ ಹಾಗೂ ನಾಗರಹೊಳೆ ನದಿಗಳ ನೀರಿನ ಹರಿವು ಸೇರಿಕೊಂಡು ಇದೀಗ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಅಣೆಕಟ್ಟೆಯಿಂದ ದುಮ್ಮಿಕ್ಕುತ್ತಿದ್ದು ಕೆ.ಆರ್.ಎಸ್.ಒಡಲು ಸೇರುತ್ತಿದೆ.

ಇದನ್ನೂ ಓದಿ  :  2022-23 ವರ್ಷದಿಂದ ಕನ್ನಡದಲ್ಲಿ ವೃತ್ತಿ ಶಿಕ್ಷಣ ಕಲಿಕೆಗೆ ಅವಕಾಶ :  ಅಶ್ವತ್ಥನಾರಾಯಣ

20 ಕೆರೆಗಳ ಭರ್ತಿ

ಅಣೆಕಟ್ಟಿನಿಂದ ಹನಗೋಡು ಮುಖ್ಯ ನಾಲೆಗೆ 350 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ನಲ್ಲೂರು ಪಾಲದ ಬಳಿ ವಿಭಜಿತವಾಗುವ ಉದ್ದೂರು ಹಾಗೂ ಹನುಮಂತಪುರ ನಾಲೆ ಮೂಲಕ ಅಣೆಕಟ್ಟೆ ವ್ಯಾಪ್ತಿಯ 42 ಕೆರೆಗಳ ಪೈಕಿ ಕೆಂಚನಕೆರೆ, ಹೊಸಪುರಕೆರೆ, ರಾಯನಕಟ್ಟೆ, ಕಾಕನಹಳ್ಳಿಕೆರೆ, ಕೂಡನಹಳ್ಳಿಕೆರೆ, ಗೌರಿಕೆರೆ ಸೇರಿದಂತೆ 20 ಕೆರೆಗಳು ಭರ್ತಿಯಾಗಿದ್ದು, ಅಣೆಕಟ್ಟು ವ್ಯಾಪ್ತಿಯ ಎಲ್ಲ ನಾಲೆಗಳನ್ನು ಆಧುನೀಕರಣಗೊಳಿಸಿದ್ದು, ಕೊನೆ ಭಾಗಕ್ಕೆ ನೀರು ವೇಗವಾಗಿ ತಲುಪುವುದರಿಂದಾಗಿ ಜುಲೈ ಅಂತ್ಯದೊಳಗೆ ಎಲ್ಲ ಕೆರೆ-ಕಟ್ಟೆಗಳಿಗೆ ನೀರು ತುಂಬಲಿದೆ ಎಂದು ಹಾರಂಗಿ ಎಇಇ ಕುಶುಕುಮಾರ್ ತಿಳಿಸಿದ್ದಾರೆ.

Advertisement

ನಾಲೆಯಲ್ಲಿ ನೀರು ಹರಿಸುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು, ಭತ್ತದ ಸಸಿ ಮಡಿಗಾಗಿ ಗದ್ದೆಯನ್ನು ಅಣಿಗೊಳಿಸುತ್ತಿದ್ದಾರೆ.

ಇದನ್ನೂ ಓದಿ  : ಮೂರನೇ ಅಲೆಯನ್ನು ನಿಭಾಯಿಸಲು ಸರ್ಕಾರ ಸರ್ವ ಸನ್ನದ್ಧ: ಕಂದಾಯ ಸಚಿವ ಆರ್ ಅಶೋಕ್

Advertisement

Udayavani is now on Telegram. Click here to join our channel and stay updated with the latest news.

Next