Advertisement

ರೋಹಿಣಿ ವಿಶೇಷ ತನಿಖಾಧಿಕಾರಿಯಾಗಿ ನೇಮಕವಾದ್ರೆ ನನ್ನ  ಅಭ್ಯಂತರವಿಲ್ಲ

05:52 PM Jun 13, 2021 | Team Udayavani

ಕೆ.ಆರ್‌.ನಗರ: ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಸಲಹೆಯಂತೆ ಭೂಹಗರಣದ ವಿಶೇಷ ತನಿಖಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕವಾದರೆನನ್ನದೇನೂ ಅಭ್ಯಂತರವಿಲ್ಲ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದಅವರು, ವಿಶ್ವನಾಥ್‌ ರಾಜಕೀಯ ಹಗೆತನ ಸಾಧಿಸುವವಿಚಾರವನ್ನು ಜಿಲ್ಲೆಯ ಜನತೆ ಗಮನಿಸುತ್ತಿದ್ದಾರೆ. ಸಂಸದಪ್ರತಾಪ್‌ಸಿಂಹ ಜಿಲ್ಲಾಧಿಕಾರಿಯನ್ನು ಸಮರ್ಥಿಸಿಕೊಳ್ಳುತ್ತಿದ್ದ ಸಮಯದಲ್ಲಿ ಅಧಿಕಾರಿಗಳ ಪರ ಜನಪ್ರತಿನಿಧಿಗಳು ಬ್ಯಾಟಿಂಗ್‌ ಮಾಡಬಾರದು ಎಂದು ಹೇಳುತ್ತಿದ್ದ ವಿಶ್ವನಾಥ್‌ ಅವರೇ ಅಧಿಕಾರಿ ಪರ ಮಾತನಾಡುತ್ತಿರುವುದರ ಉದ್ದೇಶ ಏನು ಎಂದು ಪ್ರಶ್ನಿಸಿದರು.

ವಿಶ್ವನಾಥ್‌ ಪುತ್ರ ಅಮಿತ್‌.ವಿ. ದೇವರಹಟ್ಟಿ ಭೂ ಅಕ್ರಮದಬಗ್ಗೆ ಕೇಸು ದಾಖಲಾಗಿದ್ದು, ಆ ಬಗ್ಗೆಯೂ ತನಿಖೆ ಮಾಡುವಂತೆ ಇತರರುಮನವಿ ಮಾಡಿದರೆ ವಿಶ್ವನಾಥ್‌ ಏನು ಮಾಡುತ್ತಾರೆ ಎಂಬುದರ ಬಗ್ಗೆ ಅವರೇಮಾಧ್ಯಮದವರ ಮುಂದೆ ತಿಳಿಸಲಿ ಎಂದು ತಿರುಗೇಟು ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next