Advertisement

ಮೈಸೂರು ಜಲದರ್ಶಿನಿಯ ಕಲ್ಯಾಣಲೀಲೆ…ಸಿದ್ದು ಸಿದ್ಧಾಂತ ಮಜಾವಾದವೇ? ಬಿಜೆಪಿ ಟ್ವೀಟ್ ಸಮರ

12:40 PM Jun 03, 2022 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಅವರ ಸಿದ್ಧಾಂತ ಯಾವುದು, ಮಜಾವಾದವೋ, ಸಮಾಜವಾದವೋ? ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದೇ ಎಲ್ಲರ ಮೇಲೂ ಎರಗುವ, ಎಲ್ಲರನ್ನೂ ಕಬಳಿಸುವ ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆಯನ್ನು ಅನಾವರಣಗೊಳಿಸಲು ಸಕಾಲ ಎಂದು ಬಿಜೆಪಿ ಹೇಳಿದೆ.

Advertisement

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ; ಸಿದ್ದು-ಡಿಕೆಶಿ ತಿರುಮಂತ್ರ; ಜೆಡಿಎಸ್ ಗೆ ತೀವ್ರ ಹಿನ್ನಡೆ!

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಜನತಾ ಪರಿವಾರದಲ್ಲಿರುವ ಸಿದ್ದರಾಮಯ್ಯ ಅವರ ಆಪ್ತರನ್ನು ತುಸು ವಿಚಾರಿಸಿದರೆ ಮೈಸೂರು ಜಲದರ್ಶಿನಿಯ ಕಲ್ಯಾಣಲೀಲೆಗಳು ಹೊರಬೀಳುತ್ತವೆ.

ಪಕ್ಷದ ಚೌಕಟ್ಟಿನಲ್ಲಿ ಯಾವ ಹೋರಾಟವನ್ನೂ ರೂಪಿಸದ ಸಿದ್ದರಾಮಯ್ಯ ಹುತ್ತದಲ್ಲಿ ಸೇರುವ ಹಾವು, ಅಷ್ಟೇ. ನಂಜುಂಡಸ್ವಾಮಿಯ ಶಿಷ್ಯ ಎಂದು ಬಡಾಯಿ ಕೊಚ್ಚಿಕೊಳ್ಳುವ ಮಜವಾದಿಸಿದ್ದರಾಮಯ್ಯ ಅವರೇ, ನೀವು ಎಂದಾದರೂ ರೈತರಿಗೆ ನ್ಯಾಯ ಕೊಡಿಸಿದ್ದೀರಾ? ಸಿಎಂ ಆಗಿದ್ದಾಗ, ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಕುಡಿದು ಸತ್ತ ಎಂದು ನಿಂದಿಸಿರಲಿಲ್ಲವೇ ಎಂದು ಪ್ರಶ್ನಿಸಿದೆ. ನಂಜುಂಡಸ್ವಾಮಿ ಆ ಕ್ಷಣದಲ್ಲಿ ಬದುಕಿರುತ್ತಿದ್ದರೆ ಹಸಿರುಶಾಲಿನಲ್ಲೇ ನಿಮಗೆ ಕಪಾಳಮೋಕ್ಷ ಮಾಡಿರುತ್ತಿದ್ದರು.

Advertisement

ನಾನು ಕಾರ್ಮಿಕ ನಾಯಕ ಜಾರ್ಜ್‌ ಫ‌ರ್ನಾಂಡೀಸ್‌ ಶಿಷ್ಯ ಎಂದೂ ಮಜವಾದಿ ಸಿದ್ದರಾಮಯ್ಯ ಹೇಳುತ್ತಿರುತ್ತಾರೆ. ಕಾರ್ಮಿಕರ ಕಲ್ಯಾಣಕ್ಕೆ ಹೋರಾಟ ಮಾಡಿದ ಒಂದಾದರೂ ಉದಾಹರಣೆ ಇದೆಯೇ? ಮಹಿಷಿ ವರದಿಯನ್ವಯ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಸಿದ್ದರಾಮಯ್ಯ ಅವರದ್ದು ಬಂಡವಾಳ ಇಲ್ಲದ ಶೂನ್ಯಬಡ್ಡಿ ಭಾಷಣ. ಅಧಿಕಾರಕ್ಕಾಗಿ ನಡೆಸಿದ ಬಳ್ಳಾರಿ ಪಾದಯಾತ್ರೆ ಹೊರತುಪಡಿಸಿ, ಸಿದ್ದರಾಮಯ್ಯ ರಾಜಕೀಯ ಬದುಕಿನ ಮೈಲಿಗಲ್ಲುಗಳೇನು? ಎಂದು ಕೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next