Advertisement

ಮೈಸೂರು, ಎಚ್‌.ಡಿ.ಕೋಟೆಯಲ್ಲಿ ಮಳೆ

12:50 PM Mar 08, 2017 | |

ಮೈಸೂರು: ಮೈಸೂರು ಜಿಲ್ಲೆಗೆ ಎರಡನೇ ದಿನವು ಮಳೆಯ ಸಿಂಚನವಾಗಿದ್ದು, ಈ ಬೇಸಿಗೆಯಲ್ಲಿ ಮೈಸೂರು ನಗರಕ್ಕೆ ಇದೇ ಮೊದಲ ಬಾರಿಗೆ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದ್ದು, ದಟ್ಟವಾದ ಮೋಡ ಕವಿದು, ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಆಯಿತು.

Advertisement

ಎಚ್‌.ಡಿ.ಕೋಟೆ ತಾಲೂಕಿನ ಮುಳ್ಳೂರಿನಲ್ಲಿ ಅತಿ ಹೆಚ್ಚು 73.5 ಮಿ.ಮೀ ಮಳೆ ಆಗಿದೆ. ಉಳಿದಂತೆ ಕಂದಲಿಕೆ-25 ಮಿ.ಮೀ, ಸರಗೂರು 12.5 ಮಿ.ಮೀ, ಮನುಗನಹಳ್ಳಿ 12.5 ಮಿ.ಮೀ, ನೂರಲಕುಪ್ಪೆ- 13 ಮಿ.ಮೀ, ಸಾಗರೆ 22 ಮಿ.ಮೀ ಮಳೆ ಆಗಿದೆ. ಕೆ.ಆರ್‌.ನಗರ ತಾಲೂಕಿನಲ್ಲಿ 43 ಮಿ.ಮೀ ಮಳೆ ಆಗಿದ್ದು, ಬೇರ್ಯದಲ್ಲಿ 13 ಮಿ.ಮೀ ಮಳೆ ಆಗಿದೆ.

ಮೈಸೂರು ತಾಲೂಕಿನ ಮೋಸಂಬಾಯನಹಳ್ಳಿ 22.5 ಮಿ.ಮೀ, ಇಲವಾಲ 9 ಮಿ.ಮೀ, ರಮ್ಮನಹಳ್ಳಿ 8.5 ಮಿ.ಮೀ. ಹುಣಸೂರು ತಾಲೂಕಿಮ ಬಿಳಿಕೆರೆಯಲ್ಲಿ 7.5 ಮಿ.ಮೀ, ನಂಜನಗೂಡು ತಾಲೂಕಿನ ಹಲ್ಲೆರೆ-16 ಮಿ.ಮೀ, ಹಾಡ್ಯ 17 ಮಿ.ಮೀ. ತಿ.ನರಸೀಪುರ ತಾಲೂಕಿನ ಸೋಸಲೆ 13 ಮಿ.ಮೀ, ಸೋಮನಾಥಪುರ 25.5 ಮಿ.ಮೀ, ಹೊಸಕೋಟೆ 22 ಮಿ.ಮೀ. ಪಿರಿಯಾಪಟ್ಟಣ ತಾಲೂಕಿನ ಚಿಟ್ಟೇನಹಳ್ಳಿಯಲ್ಲಿ 12.5 ಮಿ.ಮೀ ಹಾಗೂ ಪಂಚವಳ್ಳಿ ಸುತ್ತಮುತ್ತ ಹಗುರವಾದ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಎಚ್‌.ಡಿ.ಕೋಟೆಯಲ್ಲಿ ಮಳೆ: ಕಳೆದ ಹಲವು ತಿಂಗಳಿಂದ ಬೇಸಿಗೆ ಬಿಸಿಲಿನ ತಾಪಕ್ಕೆ ಬೆಂದಿದ್ದ ಇಳೆಗೆ ಮಂಗಳವಾರ ಸಂಜೆ ವರ್ಷಾರಂಭದ ಮೊದಲ ಮಳೆಯ ಆಗಮನ ಕೊಂಚ ತಂಪೆರೆಯಿತು.

ಕಳೆದ 3 ದಿನಗಳಿಂದ ಆಗಾಗ ಆಗಸದಲ್ಲಿ ಮೋಡ ಕವಿದ ವಾತಾವರಣ ಮಳೆಯ ಆಗಮನವನ್ನು ಹೇಳುತ್ತಿತ್ತಾದರೂ ಮಳೆಯಾಗಿರಲಿಲ್ಲ. ಮಂಗಳವಾರವೂ ಅದೇ ರೀತಿ ಮೋಡ ಮುಸುಕಿದ ವಾತಾವರಣವಿತ್ತು. ಸಂಜೆ 5 ಗಂಟೆ ಸುಮಾರಿಗೆ ಮಳೆ ಆರಂಭವಾಯಿತು.

Advertisement

ಕಳೆದ ವರ್ಷ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗದೇ ಜನ, ಜಾನುವಾರುಗಳ ಕುಡಿಯುವ ನೀರಿಗೂ ಹಾಹಾಕಾರ ಪಡುವಂತೆ ಮಾಡಿದ್ದ ಮಳೆ ಈಗ ಅಕಾಲಿಕವಾಗಿ ಆಗಮಿಸಿದೆ. ಇದರಿಂದ ಕೆರೆಕಟ್ಟೆಗಳಲ್ಲಿ ನೀರು ತುಂಬಿ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next