Advertisement

Mysore: ರಸ್ತೆ ತಡೆಗೆ ಮುಂದಾದ ರೈತರ ಬಂಧನ

02:08 PM Oct 24, 2023 | Team Udayavani |

ಮೈಸೂರು: ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಮೈಸೂರು- ಬೆಂಗಳೂರು ರಸ್ತೆಯಲ್ಲಿ ಬೆಳಗ್ಗೆ ತಡೆ ಮಾಡಲು ಯತ್ನಿಸಿದ ರೈತ ಮುಖಂಡ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ನೂರಾರು ರೈತರು ರಸ್ತೆ ತಡೆ ಚಳವಳಿಗೆ ಮುಂದಾದಾಗ ನೂರಾರು ಕಬ್ಬು ಬೆಳೆಗಾರ ರೈತರನ್ನು ಬಂಧಿಸಿದರು.

Advertisement

ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ಕೊಲಂಬಿಯಾ ಏಷ್ಯಾ ಸರ್ಕಲ್‌ ನಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಪ್ರತಿಭಟನೆ ನಡೆಸಲು ಜಮಾವಣೆ ಆದಾಗ ಪೊಲೀಸ್ ಅಧಿಕಾರಿಗಳು ಆಗಮಿಸಿ ಮುಂಜಾಗ್ರತಾ ಕ್ರಮವಾಗಿ ಬಂಧನ ಮಾಡುತ್ತಿದ್ದೇವೆ ಎಂದಾಗ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರ ಜೊತೆ ಮಾತಿನ ವಾಗ್ವಾದ ನಡೆಯಿತು, ರೈತರು ಬಂಧನವನ್ನು ವಿರೋಧಿಸಿದರು, ಪೊಲೀಸರು ನಿರ್ಲಕ್ಷಿಸಿ ಬಲತ್ಕಾರವಾಗಿ ರೈತರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಸಿ.ಎ.ಆರ್ ಪೆರೆಂಡ್ ಗ್ರೌಂಡ್ ಗೆ  ಕರೆದೊಯ್ದರು.

ರಾಜ್ಯದಲ್ಲಿ ಈಗಾಗಲೇ ಬರ ಘೋಷಣೆ ಆಗಿದೆ ವಿದ್ಯುತ್ ಇಲ್ಲದೆ ರೈತರು ಕಗತ್ತಲಲ್ಲಿದ್ದಾರೆ ,ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ರೈತರ ಬಲಿಪಡೆದು  ಸರಳ ದಸರಾ ಹೆಸರಿನಲ್ಲಿ  ಅದ್ದೂರಿ ಮತ್ತು ಮೋಜಿನ ದಸರಾ ಮಾಡಲು ಹೊರಟಿದೆ ಕಬ್ಬಿನ ದರ ನಿಗದಿ ಮಾಡದೆ ಹಳೆ ಬಾಕಿ ಕುಡಿಸದೆ ಸರ್ಕಾರ ನಿರ್ಲಕ್ಷತನ ಮಾಡುತ್ತಿದೆ ಒಂದು ವಾರ ಮೊದಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಮೈಸೂರಿನಲ್ಲಿ 20 ಮಂತ್ರಿಗಳಿದ್ದರೂ ಮೋಜು ಮಾಡಲು ಬಂದಿದ್ದರು ನಮ್ಮ ಹೋರಾಟದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲದಾಗಿದೆ ,ಅವಿವೇಕಿಗಳ ದರ್ಬಾರಿನಲ್ಲಿ ರಾಜ್ಯದ ರೈತರು ಜನ ಕಂಗಲಾಗುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ,ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ರೈತರಿಗೆ 10 ಗಂಟೆಗಳ ಕಾಲ ವಿದ್ಯುತ್ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಕೈಗಾರಿಕೆಗಳಿಗೆ ನಿರಂತರವಾಗಿ 24 ಗಂಟೆಗಳ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಾ, ರೈತರನ್ನು ಕಗ್ಗತ್ತಲಲ್ಲಿ ಇಟ್ಟಿದ್ದಾರೆ. ಇಂಥಹ ಇಬ್ಬದಿ ನೀತಿ ವಿರುದ್ಧ ನಮ್ಮ ಹೋರಾಟ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆ ಬಾರದೆ ನೀರು ಕಡಿಮೆಯಾಗಿ ಬರಗಾಲವಿದ್ದರೂ ಕಾವೇರಿ ಅಚ್ಚುಕಟ್ಟು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರು ಬಿಡದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕುಂಟು ಆದೇಶ ನೆಪ ಮಾಡಿಕೊಂಡು ತಮಿಳುನಾಡಿನ ಬೆಳೆಗಳಿಗೆ ರಾಜ್ಯದ ನೀರನ್ನು ಹರಿಸಲಾಗುತ್ತಿರುವುದರ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿಸಿದರು.

Advertisement

ಕಳೆದ ವರ್ಷ ಬೆಂಗಳೂರಿನಲ್ಲಿ 39 ದಿನಗಳ ನಿರಂತರವಾಗಿ ಹೋರಾಟ ಮಾಡಿ ಕಬ್ಬಿನ ಹೆಚ್ಚುವರಿಯಾಗಿ 150 ರೂ. ನಿಗದಿ ಮಾಡಿದ ಸರ್ಕಾರದ ಆದೇಶದ ಹಣವನ್ನು ಸಕ್ಕರೆ ಕಾರ್ಖಾನೆಗಳಿಂದ ಕೊಡಿಸದೆ ರೈತರ ಬಗ್ಗೆ ನಿರ್ಲಕ್ಷತನ ತೋರಿದೆ ಎಂದರು.

ಸರ್ಕಾರ ರೈತರ ಪರ ಎನ್ನುತ್ತಾ ಮೊಸಳೆ ಕಣ್ಣಿರು ಸೇರಿಸುತ್ತದೆ. ಆದರೆ ಸರ್ಕಾರ   ಕೈಗಾರಿಕೋದ್ಯಮಿಗಳ ಮತ್ತು ಹಣ ಉಳ್ಳವರ ಪರವಾಗಿದೆ ರೈತರನ್ನ ಕೃಷಿಯಿಂದ ವಲಸೆ ಹೋಗಲು ಪ್ರಚೋದನೆ ನೀಡುತ್ತಿದೆ ಎಂದು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next