ಮೈಸೂರು: ಚಾಮರಾಜನಗರ ಆಕ್ಸಿಜನ್ ದುರಂತಕ್ಕೆಸಂಬಂಧಿಸಿದಂತೆ ಇಲ್ಲ ಸಲ್ಲದ ಆರೋಪಮಾಡಿದವರು ಮೈಸೂರಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚಾಮರಾಜನಗರ ಘಟನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನೇತೃತ್ವದ ಕಾನೂನು ಪ್ರಾಧಿಕಾರದ ಸಮಿತಿಯು ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ. ನಾನುಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದಕೆಲವೊಬ್ಬರು ಇಲ್ಲ ಸಲ್ಲದ ಆರೋಪ ಮಾಡುತ್ತಲೇ ಬಂದಿದ್ದಾರೆ.
ಆದರೆ ನಾನು ಯಾವುದಕ್ಕೂಪ್ರತಿಕ್ರಿಯಿಸಲು ಹೋಗಿಲ್ಲ. ಏಕೆಂದರೆ ಅದು ನಮ್ಮಕೆಲಸವಲ್ಲ. ಆದರೆ, ಚಾ.ನಗರ ಆಕ್ಸಿಜನ್ ದುರಂತದವಿಷಯದಲ್ಲಿ ನಮ್ಮ ಮೇಲೆ ಆರೋಪ ಮಾಡಲುಹೋಗಿ ಇಡೀ ಮೈಸೂರು ಜಿಲ್ಲೆ, ಮೈಸೂರಿಗೆ ಕಳಂಕತರುವ ಪ್ರಯತ್ನ ನಡೆದಿದೆ. ನಾವು ಮೈಸೂರು ಜಿಲ್ಲೆಯವರು ಈ ಕಳಂಕದಿಂದ ಹೊರ ಬರಬೇಕು.ಯಾರ್ಯಾರು ಕಳಂಕ ತರುವ ಪ್ರಯತ್ನಮಾಡಿದ್ದಾರೆಯೋ ಅವರೆಲ್ಲರೂ ಮೈಸೂರುಜನತೆಯ ಕ್ಷಮೆಯಾಚಿಸಬೇಕು ಎಂದುಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ನಾನು ಈ ಸರ್ವೀಸ್‌ಗೆ ಸೇರಿದ್ದೇ ದೇಶ ಸೇವೆಮಾಡುವುದಕ್ಕೆ. ಸಣ್ಣ ಪುಟ್ಟ ಅಲಿಗೇಶನ್ಸ್‌ಗಳಿಗೆಉತ್ತರ ನೀಡಿಲ್ಲ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ.ಈ ಒಂದು ವಿಷಯದಲ್ಲಿ ಮಾತ್ರ ಜನರ ಜೀವಮುಡಿಪಾಗಿಡುವ ಸಂದರ್ಭದಲ್ಲಿಯೂ ಕಳಂಕತರುವ ರೀತಿಯಲ್ಲಿ ಮಾತನಾಡಿದ್ದಾರೆ.
ಅವರೆಲ್ಲಮೈಸೂರು ಜಿಲ್ಲೆಯ ಜನರಲ್ಲಿ ಕ್ಷಮೆ ಕೇಳಬೇಕುಎಂದರು.ಶಾಸಕರು, ಮಾಜಿ ಕಾರ್ಪೋರೇಟರ್ ಏನೋಒಂದು ಮಾತನಾಡುತ್ತಾ ಇರುತ್ತಾರೆ. ಅದಕ್ಕೆಲ್ಲಉತ್ತರ ನೀಡುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ.ಸದ್ಯಕ್ಕೆ ನಾವು ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಎಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿಕೆಲಸ ಮಾಡಿದರೆ ಜನರ ಜೀವ ಉಳಿಸಲುಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.