Advertisement

ಕೋವಿಡ್ ನಿಯಂತ್ರಣ ಮಾಡುವತ್ತ ಗಮನ ಕೊಡಿ : ಅಧಿಕಾರಿಗಳಿಗೆ  ಡಿಸಿ ರೋಹಿಣಿ ಸಿಂಧೂರಿ ಸೂಚನೆ

08:26 PM May 28, 2021 | Team Udayavani |

ಹುಣಸೂರು : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಂದು (ಶುಕ್ರವಾರ, ಮೇ 28) ಸಂಜೆ ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ತಾಲೂಕಿನ ವಿವಿಧೆಡೆ ಭೇಟಿ ನಿಡಿ ಪರಿಶೀಲಿಸಿದ್ದಾರೆ.

Advertisement

ಬಿಳಿಕೆರೆ ಬಳಿಯ ಸಬ್ಬನಹಳ್ಳಿ ಕೋವಿಡ್ ಕೇರ್ ಸೆಂಟರ್, ಮನುಗನಹಳ್ಳಿ ಗ್ರಾಮಪಂಚಾಯ್ತಿ ವಾರ್ ರೂಂ, ಬಿಳಿಕೆರೆಯಲ್ಲಿ ಮನೆ ಮನೆ ಸಮೀಕ್ಷೆ ಹಾಗೂ  ರೆಡ್ಡಿ ಕೊಪ್ಪಲಿನ ಕಂಟೈನ್ಮೆಂಟ್ ಝೋನ್‌ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ನೆನಪಿಡಿ… ನಿಮ್ಮ ಬದುಕು ನಿಮ್ಮನ್ನು ಚೆಂದಾಗಿ ಬದುಕಿಸುತ್ತದೆ..!

ಸಬ್ಬನಹಳ್ಳಿ ಕೋವಿಡ್ ಕೇರ್ ಸೆಂಟರ್‌ ನ ಸೋಂಕಿತರೊಂದಿಗೆ ಸೌಕರ್ಯ ಹಾಗೂ ಆರೋಗ್ಯ ಮಾಹಿತಿ ಪಡೆದುಕೊಂಡರು. ಮನುಗನಹಳ್ಳಿ ಗ್ರಾ.ಪಂ.ಯ ವಾರ್ ರೂಂ ಕಾರ್ಯ ನಿರ್ವಹಣೆ ಬಗ್ಗೆ ಪಿಡಿಓ ರಚನಾ ತಿಳಿಸಿದರು. ಬಿಳಿಕೆರೆಯಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯವನ್ನು ವೀಕ್ಷಿಸಿ, ಸೋಂಕಿನಿಂದ ಗುಣಮುಖರಾದವರ ಆರೋಗ್ಯ ವಿಚಾರಿಸಿದರು. ಪಿಡಿಓ ರಾಘವೇಂದ್ರ ಪ್ರಸನ್ನ ಪಂಚಾಯತ್ ವತಿಯಿಂದ ಕೋವಿಡ್ ನಿಯಂತ್ರಣಕ್ಕೆ  ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಕಂಟೈನ್ಮೆಂಟ್‌ ಗೆ ಒಳಗಾಗಿರುವ ರೆಡ್ಡಿಕೊಪ್ಪಲಿಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ್ದಾರೆ.

ಸೋಂಕು ನಿಯಂತ್ರಿಸಲು ಸೂಚನೆ:

Advertisement

ತಹಸೀಲ್ದಾರ್ ಬಸವರಾಜು, ಇಓ ಗಿರೀಶ್‌ ರಿಂದ ತಾಲೂಕಿನ ಕೋವಿಡ್ ಸಂಬಂಧಿತ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸಿಂಧೂರಿ,   ಸೋಂಕಿನ ನಿಯಂತ್ರಣಕ್ಕಾಗಿ ತಾಲೂಕಿನಲ್ಲಿ ಅಧಿಕಾರಿಗಳು  ಉತ್ತಮ ಕೆಲಸ ಮಾಡುತ್ತಿದ್ದೀರೆಂದು ಪ್ರಶಂಸಿದರು. ಆದರೆ ತಾಲೂಕಿನಲ್ಲಿ ದಿನನಿತ್ಯ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದನ್ನು ನಿಯಂತ್ರಿಸುವಲ್ಲಿ ಪ್ರಥಮ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಿ ಸಕಾಲದಲ್ಲಿ ಆರೋಗ್ಯ ಮಿತ್ರ ಅಳವಡಿಸುವ ಮೂಲಕ ಪರಿಶ್ರಮ ಹಾಕಬೇಕು ಹಾಗೂ ಲಾಕ್‌ ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚಿಸಿದರು.

ಈ ವೇಳೆ ಉಪ ವಿಭಾಗಾಧಿಕಾರಿ ಬಿ.ಎನ್.ವೀಣಾ, ಡಿ ವೈ ಎಸ್‌ ಪಿ  ರವಿಪ್ರಸಾದ್, ವೃತ್ತ ನಿರೀಕ್ಷಕರಾದ ರವಿ, ರವಿಕುಮಾರ್ ಹಾಗೂ ಆಯಾ ಗ್ರಾ.ಪಂ.ಪಿಡಿಓಗಳು ಇದ್ದರು.

ಇದನ್ನೂ ಓದಿ : ಹುಣಸೂರಿನಲ್ಲಿ 20 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ ಆರಂಭ : ಸಂಸದ ಪ್ರತಾಪ ಸಿಂಹ

Advertisement

Udayavani is now on Telegram. Click here to join our channel and stay updated with the latest news.

Next