Advertisement

ಸರಳತೆಯಲ್ಲೂ ಸಂಭ್ರಮದಿಂದ ಮುಕ್ತಾಯಗೊಂಡ ಮೈಸೂರು ದಸರಾ ಜಂಬೂ ಸವಾರಿ

06:29 PM Oct 15, 2021 | Team Udayavani |

ಮೈಸೂರು: ವಿಶ್ವ ವಿಖ್ಯಾತ ಮೈಸೂರಿನ ಜಂಬೂ ಸವಾರಿ ಮೆರವಣಿಗೆ ಶುಕ್ರವಾರ ಸಂಜೆ ಸರಳವಾಗಿ ಸಂಭ್ರಮದಿಂದ ಮುಕ್ತಾಯಗೊಂಡಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ಆಹ್ವಾನಿತ ಗಣ್ಯರಿಗಷ್ಟೇ ಅರಮನೆ ಆವರಣದಲ್ಲಷ್ಟೇ ಉತ್ಸವ ಕಣ್ತುಂಬಿಕೊಳ್ಳಲು ಸಾಧ್ಯವಾಯಿತು. ಆದರೆ ನೇರ ಪ್ರಸಾರವನ್ನು ಕೋಟ್ಯಂತರ ಮಂದಿ ವೀಕ್ಷಿಸಿ ಸಂಭ್ರಮಿಸಿದರು. ಈ ಬಾರಿ ಕೇವಲ 20 ನಿಮಿಷದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.

ಈ ಬಾರಿಯ ದಸರಾ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು 500 ಮಂದಿಗಷ್ಟೇ ಅವಕಾಶ ನೀಡಲಾದ ಹಿನ್ನಲೆಯಲ್ಲಿ ಗಣ್ಯಾತಿಗಣ್ಯರಷ್ಟೇ ಭಾಗಿಯಾಗಿದ್ದರು.

ಸಂಜೆ 4:32 ರ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಜಂಬೂ ಸವಾರಿ ಆರಂಭವಾಯಿತು.

ಪುಷ್ಪಾರ್ಚನೆ ವೇಳೆ ಆರು ಗಣ್ಯರಾದ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ರಾಜವಂಶಸ್ಥರಾದ ಯದುವೀರ್‌ ಕೃಷ್ಣ ದತ್ತ ಚಾಮರಾಜ ಒಡೆಯರ್‌,ಜಿಲ್ಲಾಧಿಕಾರಿ , ನಗರ ಪೊಲೀಸ್‌ ಆಯುಕ್ತ, ಮೇಯರ್‌ ಅವರು ಉಪಸ್ಥಿತರಿದ್ದರು.

Advertisement

2ನೇ ಬಾರಿಗೆ 750 ಕೆಜಿ ತೂಕದ ಅಂಬಾರಿ ಹೊತ್ತ ಅಭಿಮನ್ಯು ನಾಡದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯೊಂದಿಗೆ ಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದ. ಕಾವೇರಿ, ಚೈತ್ರಾ ಅಭಿಮನ್ಯುಗೆ ಸಾಥ್‌ ನೀಡಿದವು.  ಈ ಬಾರಿ ಕೇವಲ 6 ಸ್ತಬ್ಧಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಭಾಗಿಯಾದವು.

ಸಾರ್ವಜನಿಕರಿಗೆ ಅರಮನೆ ಆವರಣಕ್ಕೆ ಪ್ರವೇಶ ನಿರ್ಬಂಧಿಸಿದ್ದರು ಸಾವಿರಾರು ಮಂದಿ ಆಗಮಿಸಿದ್ದರು. ಅವರನ್ನು ಹೊರಬಾಹೆಯಲ್ಲಿ ಪೊಲೀಸರು ತಡೆದರು.

Advertisement

Udayavani is now on Telegram. Click here to join our channel and stay updated with the latest news.

Next