Advertisement

ಮೈಸೂರು: ದಸರಾ ಉತ್ಸವಕ್ಕೆ ಆಗಮಿಸಿ ಮುದ್ದಾದ ಗಂಡು ಮರಿಗೆ ಜನ್ಮ ನೀಡಿದ ಆನೆ ಲಕ್ಷ್ಮಿ

04:12 PM Sep 15, 2022 | Team Udayavani |

ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಆಗಮಿಸಿದ್ದ ಕುಮ್ಕಿ ಆನೆ ಲಕ್ಷ್ಮಿ ಮುದ್ದಾದ ಗಂಡುಮರಿಗೆ ಜನ್ಮ ನೀಡಿದೆ.ಸೋಮವಾರ ರಾತ್ರಿ ಅರಮನೆಯ ಕೋಡಿ ಸೋಮೇಶ್ವರನಾಥ ದೇವಾಲಯ ಬಳಿ ಗಂಡು ಆನೆಮರಿಗೆ ಜನ್ಮ ನೀಡಿರುವ ಲಕ್ಷ್ಮಿ ಆನೆಯನ್ನು ಕ್ಯಾಂಪಸ್ಸಿನಲ್ಲಿರುವ ಇತರೆ ಆನೆಗಳಿಂದ ಬೇರ್ಪಡಿಸಿ ಅರಮನೆಯ ಆವರಣದ ನಿರ್ಬಂಧಿತ ಪ್ರದೇಶದಲ್ಲಿ ಇರಿಸಲಾಗಿದೆ.

Advertisement

ಲಕ್ಷ್ಮಿ ಮತ್ತು ಮರಿ ಆನೆ ಎರಡು ಆರೋಗ್ಯವಾಗಿದ್ದು, ಸದ್ಯ ಮುಂದಿನ ದಿನಗಳಲ್ಲಿ ತಾಯಿ ಮತ್ತು ಮರಿ ಆನೆಯ ಫೋಟೋವನ್ನು ಹಂಚಿಕೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

15 ವರ್ಷದ ಹಿಂದೆ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಸರಳಾ ಎಂಬ ಆನೆಯೂ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆನೆಮರಿಗೆ ಚಾಮುಂಡಿ ಎಂದು ನಾಮಕರಣ ಮಾಡಲಾಗಿತ್ತು.

ಇದನ್ನೂ ಓದಿ : ಹುಬ್ಬಳ್ಳಿ : ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಕಾರು ಪಲ್ಟಿ : ಮಹಿಳೆ ಸೇರಿ ಮೂವರು ಸಾವು

Advertisement

Udayavani is now on Telegram. Click here to join our channel and stay updated with the latest news.

Next