Advertisement

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

11:26 PM Sep 26, 2022 | Team Udayavani |

ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ಯದು ವಂಶದ ಪರಂಪರೆಯಂತೆ ಶಾಸ್ತ್ರೋಕ್ತವಾಗಿ ಧಾರ್ಮಿಕ ಕಾರ್ಯಗಳು ಜರಗಿದವು.

Advertisement

ಈ ಮೂಲಕ ಎರಡು ವರ್ಷಗಳ ಬಳಿಕ ಅರ ಮನೆಯಲ್ಲಿ ರಾಜವೈಭವ ಮರುಕಳಿಸಿದ್ದು, ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ರತ್ನಖಚಿತ ಸಿಂಹಾಸನವೇರಿ ರಾಜ ಮನೆತನದ ಪಟ್ಟದ ಕತ್ತಿಯೊಂದಿಗೆ ಸಾಂಪ್ರದಾಯಿಕ ರಾಜ ಪೋಷಾಕಿನಲ್ಲಿ ಸೋಮವಾರ ಮಧ್ಯಾಹ್ನ 12.15ರಿಂದ 8ನೇ ಬಾರಿಗೆ ಖಾಸಗಿ ದರ್ಬಾರ್‌ ನಡೆಸಿದರು.

ಸುಮಾರು ಅರ್ಧ ಗಂಟೆ ಕಾಲ ಸಿಂಹಾಸನದಲ್ಲಿ ಕುಳಿತ ಯದುವೀರ್‌ ಚಾಮುಂಡಿಬೆಟ್ಟ, ಪರಕಾಲಮಠ, ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣ, ಶೃಂಗೇರಿ ಸೇರಿ ವಿವಿಧ ದೇವಾಲಯಗಳಿಂದ ತಂದಿದ್ದ ಪೂರ್ಣಫ‌ಲ ಪ್ರಸಾದವನ್ನು ಸ್ವೀಕರಿಸಿದರು. ಅಲ್ಲದೇ ಗಂಗೆಯ ಸಂಪ್ರೋಕ್ಷಣೆ ಆದ ಬಳಿಕ ದರ್ಬಾರ್‌ಗೆ ಸಹಕಾರ ನೀಡಿದವರಿಗೆ ಕಿರುಕಾಣಿಕೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next